ಪುಟ:Chirasmarane-Niranjana.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ಕಾರಿರುಳು. ಕೊಠಡಿಗಳ ಹೊರಗೆ ನಕ್ಷತ್ರ ರಾಶಿ ಬೀರಿದ ಮಬ್ಬುಬೆಳಕು. ಆಗಾಗ್ಗೆ 'ಆಲ್-ಬೇಲ್'ಕೂಗು. ಪಹರಿ ಗಂಟೆ ಹೊಡೆಯುತ್ತಿದ್ದಾನೆ. ಎಂಟು, ಒಂಭತ್ತು ಹತ್ತು... ನಿದ್ದೆಗೆ ಆ ರಾತ್ರಿ ಕೆಲಸವಿರಲಿಲ್ಲ. ಘಳಿಗೆ ಬಟ್ಟಲು ಸ್ವಲ್ಪವಾಗಿಯೇ ಬರಿದಾಗುತ್ತಿದೆ. ಆದರೂ ಅವರ ವಿಚಾರಗಳು ಲೋಕ ಸಂಚಾರ ಮಾಡುತ್ತಿವೆ. ಕಯ್ಯೂರು-ಕಯ್ಯೂರಿನಿಂದ ಸ್ಟಲಿನ್ ಗ್ರಾಡಿಗೆ; ಅಲ್ಲಿಂದ ಲಂಡನಿಗೆ.... ದಿಲ್ಲಿಗೆ.... -"ಚಿರುಕಂಡ. ಕುಂಞಂಬು ಏನ್ಮಾಡ್ತಿದ್ದಾನೆ? ಮಾತಾಡು ಅನ್ನು ಅಬೂಬಕರ್ ಗೆ" –"ಏನನ್ನ ಮಾತಾಡ್ಬೇಕಂತೆ?" -"ಏನಾದರೂ.... ಬಾಲ್ಕಕ್ಕೆ ಸಂಬಂಧಿಸಿದ ಯಾವುದೋ ವಿಷಯ. ಯಾವುದೋ ನೆನಪು. ಚಿರುಕಂಡನ ಮೆದುಳು, ರೈತ ಸಮ್ಮೇಳನ ಏರ್ಪಡಿಸಲು ತಾವು ಸಿದ್ದತೆ ಮಾಡುತ್ತಿದ್ದ ದಿನಗಳನ್ನು ಕುರಿತು ಯೋಚಿಸುತ್ತಿದೆ. ಆ ಸುಬ್ಬಯ್ಯ... ಆತನಿಗೂ ಹೆಂಡತಿ ಮಕ್ಕಳಿದ್ದರಂತೆ. ಆದರೆ ಆತ ಪರಕೀಯ ಸರಕಾರದ ಕಾವಲುನಾಯಿಯಾಗಿದ್ದ, ನಾಯಿಯಂತೆ ಸತ್ತ. ತಾವು ಆತನನ್ನು ಕೊಲ್ಲಲಿಲ್ಲ, ಆದರೆ ಆ ಸಾವಿನ ನೆಪ ಹೇಳಿ ತಮ್ಮ ಕೊಲೆಗೆ ಏರ್ಪಾಟಾಗಿದೆ... ಕುಂಞಂಬು- ಸಂಘದ ಕಟ್ಟಡಕ್ಕೆ ಆತ ಹಿಂದೆ ಜಾಗ ಕೊಟ್ಟುದಕ್ಕೆ ಈಗ ತೆರಬೇಕಾಗಿ ಬಂದಿರುವ ಬೆಲೆ ಎಂಥದು! ಅಬೂಬಕರ್-ತನ್ನ ಸ್ವಂತದ ವಿಷಯ ಒಮ್ಮೆಯಾದರೂ ಆತ ಯೋಚಿಸಿದ್ದನೋ ಇಲ್ಲವೋ.... ನರಳುವ ಹಾಗೆ ಆಗುತ್ತಿದೆ ಅಪುವಿಗೆ. "ಯಾಕೆ ಅಪ್ಪು? ಏನಾಗ್ತಿದೆ ಅಪ್ಪು?" "ಏನೂ ಇಲ್ಲ.. ಏನೂ ಇಲ್ಲ." ತಾವು ಯಾರೂ ಇನ್ನು ಸಪ್ಪೆ ಮುಖ ಹಾಕಬಾರದು.'ವೀರರ ಹಾಗೆ ಗಲ್ಲಿಗೆ ಏರಿದರು" ಎಂದು ನಾಳೆಯ ಇತಿಹಾಸಕಾರ ಬರೆಯಬೇಕು. "ನನಗೊಂದು ಕೊರಗು ಚಿರುಕಂಡ" "ಏನಪ್ಪು?" "ನಾವು ನಾಲ್ಕು ಜನರಲ್ಲಿ ಹಾಡೋರು ಒಬ್ಬರೂ ಇಲ್ಲ... ಇದ್ದಿದ್ದರೆ ಹಾಡು ಹೇಳ್ತಾ ಗಲ್ಲಿಗೇರಿಸುವಲ್ಲಿಗೆ ಹೋಗ್ಬಹುದಿತ್ತು..." “ಈಗ ಜಯಘೋಷ ಮಾಡ್ತಾ ಹೋಗೋಣವಂತೆ.' ಕುಂಞಂಬುವಿಗೆ ಒಡಹುಟ್ಟಿದವರ ನೆನಪಾಗುತ್ತಿದೆ. ಬಹಳ ಸಹಸ್ರ ಸೋದರರ