ಪುಟ:Chirasmarane-Niranjana.pdf/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೮ ಚಿರಸ್ಮರಣೆ

       ಇನ್ನೂ ಎರಡು ನಿಮಿಷ.
       ಸೆರೆಮನೆಯೊಳಗಿಂದ ಜನಯೋಧರ ಗೀತ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತ ಕೇಳಿ
ಬಂತು.
                                       *      *      *
       ಕಲೆಕ್ಟರ್ ಮುಖದ ಮೇಲೆ ಸಿಡುಕು ಭಾವ ತೋರಿದರು. ಅಧಿಕಾರಿ 
ಕೈಗಡಿಯಾರವನ್ನೇ ನೋಡಿದ.
       ಕೆಳಗೆ ಕಂದಕ.ಅದಕ್ಕೆ ಅನಿಸಿ ನಾಲ್ಕು ಹಲಿಗೆಗಳು.ಮೇಲುಗಡೆ ತೂಗಾಡುತ್ತಿದ್ದ
ಉರುಳುಗಳು.
       "ಮುಖಗಳಿಗೆ ಮುಸುಕು ಹಾಕಿ!"
       "ಇಲ್ಲ ನಮಗೆ ಮುಸುಕು ಬೇಕಾಗಿಲ್ಲ!"
       ಉರುಳು ಒಂದೊಂದು ಕೊರಳಿಗೂ ಆಭರಣವಾಯಿತು.
       ಉಚ್ಚಕಂಠದಿಂದ ಚಿರುಕಂಡ ಕೂಗಿದ:
       " ಇಂಕ್ವಿಲಾಬ್-"
        ಅಪ್ಪು, ಕುಂಬು, ಅಬೂಬಕರ್ ಉತ್ತರವಿತ್ತರು:
        ಜಿಂದಾಬಾದ್!"
        "ಸಾಮ್ರಾಜ್ಯಶಾಹಿ--"
        "ನಾಶವಾಗಲಿ!"
        "ಕ್ರಾಂತಿಗೆ--"
        "ಜಯವಾಗಲಿ!"
         ಅಧಿಕಾರಿ ಸನ್ನೆ ಮಾಡಿದ. ಉರುಳುಗಳು ಕತ್ತನ್ನು ಹಿಸುಕಿದುವು; ಹೊರಡಲು
     ಸಿದ್ಧವಾಗಿದ್ದ ಸ್ವರಗಳನ್ನು ತಡೆದುವು. ಹಲಿಗೆಗಳನ್ನು ಅರೆಕ್ಷಣದೆಲ್ಲಿ 
     ತಪ್ಪಿಸಿದ್ದಾಯಿತು. ಆ ನಾಲ್ಕು ದೇಹಗಳೂ ಕಂದಕದಲ್ಲಿ ತೂಗಾಡಿದುವು. ಉರುಳು
     ಮತ್ತಷ್ಟು ಮತ್ತಷ್ಟು ಬಿಗಿಯಾಯಿತು.
          'ಸಾಯುವವರೆಗೂ ನೇಣು..."
          ತೂಗಾಡುತ್ತಿದ್ದ ಜೀವಗಳಿಂದ ಸ್ವರ ಹೊರಡುತ್ತಿಲ್ಲ, ಆದರೆ ಸೆರೆಮನೆಗೆ
     ಸೆರೆಮನೆಯೇ ಘೋಷಗಳಿಂದ ಪ್ರತಿಧ್ವನಿಸುತ್ತಿದೆ.
          ಬೆಳಗಾಗಿತ್ತು. ಸೂರ್ಯ ತೋರಿಸಿಕೊಳ್ಳಬೇಕಾದ ಹೊತ್ತು. ಆದರೂ ಯಾಕೋ
     ಆವನ ಸುಳಿವಿಲ್ಲ.