ಪುಟ:Chirasmarane-Niranjana.pdf/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೨೭೯

       "ಹೊರಗೆ ಜನ ನೆರೆದಿದ್ದಾರೆ. ಶವಗಳು ಬೇಕಂತೆ."
       "ಅವರಿಗೆ ಹ್ಯಾಗೆ ತಿಳೀತು?"
       "ಹ್ಯಾಗೋ ಗೊತ್ತಿಲ್ಲ. ಬಂದಿದ್ದಾರೆ."
       "ಏನ್ಮಾಡ್ತಾರಂತೆ? ಮೆರವನಣಿಗೇನೋ? ಸಾಧ್ಯವಿಲ್ಲ. ಶವಗಳನ್ನು ಕೊಡಬೇಡಿ.
 ಇಲ್ಲೇ ದಫನ ಮಾಡಿ!"
        ಕರಿಯ ಗೋಡೆಗಳನ್ನು ಏರಿ ಬಂದ ಜಯಘೋಷಗಳೂ, ಶೋಕಗೀತದ
 ಕ್ರಾಂತಿಗೀತದ ಅಲೆಗಳೂ, ಜನ ಎಷ್ಟೋ ದಿನಗಳಿಂದ ನಿರೀಕ್ಷಿಸಿದ್ದ ಮರಣದ
 ಸುದ್ದಿಯನ್ನು--ಕಯ್ಯೂರು ವೀರರ ಮರಣದ ಸುದ್ದಿಯನ್ನು--ನಾಲ್ಕು ದಿಕ್ಕುಗಳಿಗೆ
 ಒಯ್ದುವು.
                                 *       *      *
       ಕಯ್ಯೂರಿನಲ್ಲಿ ತಡವಾಗಿ ಊಟಮಾಡಿ ವಿರಮಿಸಿದ್ದ ಜಮೀನ್ದಾರ
 ನಂಬಿಯಾರರು ಏನು ಮಾಡಿದರೂ ನಿದ್ದೆ ಬಾರದೆ, ಬಹಳ ದಿನಗಳಿಂದ
 ಯೋಜಿಸಿದ್ದೊಂದು ಕೆಲಸ ಮುಗಿಸಲೆಂದು, ಕೊಡಲಿ ಹಿಡಿದ ಆಳುಗಳೊಡನೆ
 ಸಂಜೆಯ ಹೊತ್ತು ಶಾಲೆಯ ಬಳಿ ಬಂದರು.
       ಅಲ್ಲಿ ಮಾಸ್ತರು ನೆಟ್ಟುಹೋಗಿದ್ದ ಕಾಡುಮಾವಿನ ಎರಡು ಮರಗಳು
 ಇಪ್ಪತ್ತೈದರ ಜವ್ವನಿಗರಂತೆ ಸೆಟೆದು ನಿಂತು ಫಲ ಬಿಟ್ಟಿದ್ದುವು.
      "ಇವನ್ನು ಕಡಿದು ಉರುಳಿಸಿ!" ಎಂದು ನಂಬಿಯಾರರು ಆಪಿಸಿದರು.
     ಅವು ಬಲಿಷ್ಠವಾಗಿದ್ದುವು. ಎರಡಲ್ಲ ನಾಲ್ಕು ಮರಗಳ ಶಕ್ತಿ ಇದ್ದಂತೆ ತೋರಿದ
 ಆ ಮರಗಳನ್ನು ಜಮೀನ್ದಾರರ ಊಳಿಗದ ಆಳುಗಳು ಪ್ರಯಾಸ ಪಟ್ಟು ಕಡಿದು
 ಕೆಡವಿದರು.
      .....................
     ಆ ಬಳಿಕ ಸ್ವಲ್ಪ ಹೊತ್ತಿನಲ್ಲಿ ಕತ್ತಲಾಗುತ್ತಿದ್ದಂತೆ ಕಣ್ಣಾನೂರಿನಿಂದ ಸುದ್ದಿ
 ಬಂತು...
     ...ಮಳೆಯನ್ನು ಇದಿರುನೋಡಿ ಒಣಗಿ ಬಿಸಿಯಾಗಿದ್ದ ನೆಲ ತಣ್ಣಗಾಯಿತು.
 ಗಾಳಿ ಅತ್ತ ಸುಳಿಯಲು ನಿರಾಕರಿಸಿ ಮರಗಿಡಗಳು ಸ್ತಬ್ಧವಾದುವು. ನೀರವವಾಯಿತು
 ಪ್ರಕೃತಿ.
    ಗುಡಿಸಲುಗಳಲ್ಲಿ ಸೊಡರು ಹಚ್ಚಲಾರದೆ ಕತ್ತಲಲ್ಲೆ ಕುಳಿತು, ಅಳಿದ ಆ
 ನಾಲ್ಪರನ್ನು ನೆನೆದು ಜನ ಅತ್ತರು.