ಪುಟ:Chirasmarane-Niranjana.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೨೮೦ ಚಿರಸ್ಮರಣೆ

       "ಅಪ್ಪು ಕುಟ್ಟಿಯನ್ನೆತ್ತಿಕೊಂಡು ಜಾನಕಿ ಹೊರಗೆ ಅಂಗಳದಲ್ಲಿ ಕುಳಿತಳು.
ಹುಡುಗ ಒಂದೇ ಸಮನೆ ಅಳುತ್ತಿದ್ದ.ಅವನನ್ನು ಸಂತೈಸಲಾಗದೆ ಸೋತು ಜಾನಕಿ
ಆಕಾಶವನ್ನು  ದಿಟ್ಟಿಸಿದಳು.  ಅಲ್ಲಿ  ಕೋಟಿ  ಚಿಕ್ಕೆಗಳು  ಮಿನುಗುತ್ತಿದ್ದುವು.
ಪಶ್ಟಿಮದಲ್ಲೊಂದೆಡೆ ನಾಲ್ಕು ನಕ್ಷತ್ರಗಳು ಒಂದೇ ಸಮನಾದ ಪ್ರಭೆಯಿಂದ 
ಬೆಳಗುತ್ತಿದ್ದಂತೆ ಕಂಡಿತು.
        ಜಾನಕಿ ಆ ನಾಲ್ವರಲ್ಲಿ ಮೊದಲ ನಕ್ಷತ್ರದತ್ತ ಬೊಟ್ಟುಮಾಡಿ ಮಗುವಿಗೆ
ಹೇಳಿದಳು:
       " ಅಪ್ಪು ಕುಟ್ಟಿ, ಅಲ್ಲಿ ನೋಡಿದ್ಯಾ? ಅಪ್ಪ ಅಲ್ಲಿದ್ದಾರೆ, ನೀನು ಅಳಬಾ.
ಅತ್ತರೆ ಅವರಿಗೆ ದುಃಖವಾಗ್ತದೆ."
        .....ಬಲು ದೀರ್ಘವಾಗಿತ್ತು ಕಯ್ಯೂರಿನಲ್ಲಿ ಆ ರಾತ್ರೆ.
        ಹಾಗಿದ್ದರೂ ಇರುಳು ಕಳೆದು ಮೆಲ್ಲಮೆಲ್ಲನೆ ಬೆಳಗಾಯಿತು.
                           ಕೊನೆಯ ಅಧ್ಯಾಯದ ಬಳಿಕ
        ಠಣಂ ಠಣಕ್ ಠಣಂ.......
        ಮಂಗಳ ಹಾಡುತ್ತಿದ್ದಾರೆ. ' ಕಯ್ಯೂರು ವೀರಗಾಥಾ' ಇಲ್ಲಿಗಾಯಿತು, ಬಾಂಧವ!
ಜನ ಎಳುತ್ತಿದ್ದಾರೆ. ಏಳಿ ನೀವೂ.....
        ಆ ಹೆಂಗಸರು ಗಂಡಸರೆಲ್ಲರ ಮುಖಗಳನ್ನೇನು ನೋಡುತ್ತಿದ್ದೀರಿ?
ಕಪೋಲಗಳು ತೋಯ್ದಿವೆಯೆಂದೆ? ಭಾರವಾದ ಹೃದಯಗಳನ್ನು ಹೊತ್ತು ಅವರು
ನಿಂತಿರುವರೆಂದೆ?
       ಇದೇನು? ನನ್ನನ್ನು ಯಾಕೆ ಹೀಗೆ ನೋಡುತ್ತಿದ್ದೀರಿ?
       ತಿಳಿಯಿತು! ಎಲ್ಲಿ--ಸ್ವಲ್ಪ ನಿಮ್ಮ ಕಪೋಲಗಳನ್ನೇ ನೀವು ಮುಟ್ಟಿಕೊಳ್ಳಿ!
       ನಾನು ಬಲ್ಲೆ. ಅದು ತಪ್ಪಲ್ಲ. ಹಾಗೆ ವಿಡಿಯುವ ಮನಸ್ಸೇ ನಿರ್ಮಲ
ಹೃದಯಕ್ಕೆ ಕನ್ನಡಿ ಅಲ್ಲದೆ, ಈ ವೀರಕಥೆಯನ್ನು ಕೇಳಿ ಕರಗದ ಕಲ್ಲೆದೆಯಾದರೂ
ಯಾವುದು?
       ಜನ ಸಾಲುಕಟ್ಟಿ ನಿಂತು ಹುತಾತ್ಮರ ಸ್ಮಾರಕಸ್ತೂಪದೆದುರು ಶ್ರದ್ದಾಂಜಲಿ
ಅರ್ಪಿಸುತ್ತಿದ್ದಾರೆ ಬನ್ನಿ. ನಾವು ನಿಂತೂ ನಮ್ಮ ಸರದಿಗಾಗಿ ಕಾಯೋಣ.
       .... ಆ ಅಮೃತಶಿಲೆಯ ಸ್ತೂಪ ....ಆ ವಾಚನಾಲಯ...
      ದೇಶದಾದ್ಯಂತ ನಿಧಿ ಸಂಗ್ರಹಿಸಿ ಈ ಸ್ಮಾರಕದ ನಿರ್ಮಾಣ ಮಾಡಿದ್ದೇವೆ.