ಪುಟ:Chirasmarane-Niranjana.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



೩೦ ಚಿರಸ್ಮರಣೆ

    "ಯಾರಾದರೂ ಕೇಳಿದರೆ, ಕೂಲಿ ಮಾಡೋಕೆ ನೀಲೇಶ್ವರದ ಸಂತೆಗೆ

ಹೊರಟಿದೇವೇಂತ ಹೇಳೋಣ..." "ಹೂಂ."

ಚಹದಂಗಡಿಯವನು, ಸಮೀಪಕ್ಕೆ ಬಂದ ಆ ಇಬ್ಬರು ಹುಡುಗರನ್ನು

ಕುತೂಹಲದಿಂದ ನೋಡಿದ.

"ಬನ್ನಿ ಒಳಕ್ಕೆ. ಕೂತ್ಕೊಳ್ಳಿ."

 –ಮುಗುಳುನಕ್ಕು, ತಲೆಯಾಡಿಸಿ, ಆತ ಕರೆದ.
 ಅಪ್ಪು ಮತ್ತು ಚಿರುಕoಡನಿಗೆ ಸಂಕೋಚವೆನಿಸಿದರೂ ಅವರು ಒಳಗೆ ಬಂದು 

ಮುರುಕು ಬೆಂಚಿನ ಮೇಲೆ ಕುಳಿತುಕೊಂಡರು, ಅಂಗಡಿಯವನು ಯುವಕನಾಗಿದ್ದ, ತಲೆಗೆ ಸುತ್ತಿದ್ದ ಅಂಗವಸ್ತ್ರದೊಳಗಿನಿಂದ ನೀಳವಾದ ಕ್ರಾಪು ತೂರಿಬಂದಿತ್ತು. ಬಹಳಮಟ್ಟಿಗೆ ಬರಿಮೈ, ಸೊಂಟದಿಂದ ಮೊಣಕಾಲಿನವರೆಗೆ, ಕೊಳಕಾದ ಅಡ್ದಪಂಚೆಯೊಂದು ಅಂಟಿಕೊಂಡಿತ್ತು. ಗೋಡೆಯಿಲ್ಲದ, ಬಿದಿರ ತಡಿಕೆಯಿಂದಲೆ ಸಿದ್ಧವಾಗಿದ್ದ, ಹೊಟೆಲು, ಒಂದು ಮೂಲೆಯಲ್ಲಿ ಸಣ್ಣನೆ ಉರಿಯುತ್ತಿದ್ದ ಸೌದೆ ಒಲೆ. ಅದರ ಮೇಲೊಂದು ಉಗಿಯಾಡುತ್ತಿದ್ದ ತಾಮ್ರದ ಪಾತ್ರೆ ಪಕ್ಕದಲ್ಲೇ ಮರದ ನಾಲ್ಕು 'ಕಾಲು'ಗಳನ್ನು ನೆಲದೊಳಕ್ಕೆ ಹೂತು, ಅವುಗಳ ಮೇಲೆ ಹಲಿಗೆಗಳನ್ನು ಹಾಸಿ ಮಾಡಿದ್ದ ಮೇಜು, ಆ ಮೇಜಿನ ಮೇಲೆ ನಾಲ್ಕು ಗ್ಲಾಸುಗಳು, ಸಕ್ಕರೆಯ ಚಾಪುಡಿಯ ಡಬ್ಬಗಳು, ಚಾನೀರನ್ನು ಸೋಸಿ ಪುಷ್ಟವಾಗಿದ್ದ ಅರಿವೆ, ಬೇರೊಂದು ಡಬ್ಬ, ಅದರ ಪಕ್ಕದಲ್ಲಿ ಬೀಡಿಯ ಕಟ್ಟುಗಳು.

   ಅಪ್ಪು ಮತ್ತು ಚಿರುಕಂಡ, ಅಲ್ಲಿಯೇ ಕಂಬಕ್ಕೊರಗಿ ನೆಲದ ಮೇಲೆ ಕುಳಿತಿದ್ದ

ಧಾಂಡಿಗನೊಬ್ಬನನ್ನು ಕಂಡರು. ಒರಟು ಕೂದಲಿನ ಮನುಷ್ಯ, ಬೀಡಿ ಸೇದುತ್ತಲಿದ್ದ. ಆತನದು ದಪ್ಪನೆಯ ಹುಬ್ಬು, ಆ ಹುಬ್ಬುಗಳ ಕೆಳಗೆ ಆಳವಾದ ನೋಟದಿಂದ ತಿವಿದು ನೋಡುವ ಕಣ್ಣುಗಳಿದ್ದುವು.

   ಚಹದಂಗಡಿಯವನ ಮುಗುಳು ನಗೆ ಆತ್ಮೀಯವಾಗಿತ್ತು, ಇನ್ನೊಬ್ಬನ ನೋಟ

ಪರಕೀಯವಾಗಿತ್ತು.

   ಬ೦ದಿದ್ದವರನ್ನು ನೋಡುತ್ತ ಅ೦ಗಡಿಯವನು ಹೇಳಿದ:
   "ಒಂದೊಂದು ಆಪು ಚಾ ಕೊಡ್ಲ?"
   ಒಂದು ಲೋಟ ಚಹಾವನ್ನು ಎರಡರಲ್ಲಿ ಸುರಿದರೆ ಅದು ಒಂದೊಂದು