ಚಿರಸ್ಮರಣೆ &la.
"ಬೇಗ್ನೆ ಹೋಗಿ ಸೀಮೆಎಣ್ಣೆ ತಂದುಬಿಡ್ಲಾ, ಅಮ್ಮಾ?" ಪ್ರತಿ ಸಲವೂ ತರುತ್ತಿದ್ದುದು ಆರುಕಾಸಿನ ಸೀಮೆಎಣ್ಣೆ, ಸಿಗರೇಟಿನ ಒಂದು ಡಬ್ಬದಲ್ಲಿ, ಹತ್ತು ದಿನಗಳವರೆಗೂ ಅದು ಸಾಕಾಗುತ್ತಿತ್ತು.
"ಬೇಗ್ನೆ ಹೋಗಿ ಸೀಮೆಎಣ್ಣೆ ತರ್ತಾನಂತೆ, ಸೀಮೆಎಣ್ಣೆ..."ಎಂದು ತಾಯಿ ಅಣಕದ ಧ್ವನಿಯಲ್ಲಿ ಸಿಡಿಮಿಡಿಗುಟ್ಟುತ್ತ ಅಂದಳು. ಅಣಕಿಸಿದುದು ಆದಮೇಲೆ,ಪ್ರಶ್ನೆಗೆ ಉತ್ತರವಿತ್ತಳು;
"ಬೇಡ! ಇವತ್ತೂ ಒಂದು ರಾತ್ರೆ ಹೀಗೇ ಕಳೆದೋಗ್ಲಿ." "ಎಣ್ಣೆ ಮುಗಿದದು ನೆನಪಾಗ್ಲೆ ಇಲ್ಲ" ಎಂದು ನಿಜ ಸಂಗತಿಯನ್ನೆ ಚಿರುಕಂಡ ಹೇಳಿದ.
"ಎಲ್ಲಿಗೋಗಿದ್ದೆ ಬೇಡ್ಕೊಂಡು?"
ಹೇಳಿ ಹಿರಿಯರ ಮನಸ್ಸನ್ನು ಎಂದಾದರೂ ಒಲಿಸುವುದು ಸಾಧ್ಯವೆ?-ಎಂದು ಚಿರುಕಂಡನ ಮನಸ್ಸು ಚಿಂತಿಸಿತು. ಪ್ರಶ್ನೆಗೆ ಉತ್ತರವಾಗಿ, ಅಪ್ಪುವಿನ ಜತೆಯಲ್ಲಿ ಗೊತ್ತುಮಾಡಿದುದನ್ನೇ ಚಿರುಕಂಡನೂ ಹೇಳಿದ. ಮಾಸ್ತರರ ಹೆಸರಿನ ಮರೆಯಲ್ಲಿ ಪಡೆದ ರಕ್ಷಣೆ ಯಶಸ್ವಿಯಾಯಿತು. ಮಾಸ್ತರರ ಹೆಸರು ಕೇಳಿದ ಮೇಲೆ, ಸದ್ಯ, ಕೆಟ್ಟವರ ಸಂಗದಲ್ಲಿ ಹುಡುಗ ಇರಲಿಲ್ಲವಲ್ಲ ಎಂದು ಸಮಾಧಾನವೆನಿಸಿತು ಹೆತ್ತ ಕರುಳಿಗೆ.
ಆದರೂ ಅದನ್ನು ತೋರಿಸದೆ ತಾಯಿ ಅಂದಳು; "ಇನ್ನೊಂದ್ನಲ ಹೀಗೆಲ್ಲ ಬಿಟ್ಟಿ ಚಾಕರಿ ಮಾಡೋದಕ್ಕೆ ಹೋಗು, ನಿನ್ನ ಬೆನ್ನಿನ ಚರ್ಮ ಸುಲೀತೇನೆ."
ಅದು ತಾಯಿ ಕೊಟ್ಟ ಎಚ್ಚರಿಕೆ. ಆದರೆ ಅಂಥ ಸಂದರ್ಭಗಳಲ್ಲಿ ಇರಬೇಕಾದಷ್ಟು ಭೀಷಣವಾಗಿರಲಿಲ್ಲ, ಆಕೆಯ ಧ್ವನಿ. ಆ ಮಾತಿನಲ್ಲಿ ತೀವ್ರತೆ ಇರಲಿಲ್ಲ, ಅದನ್ನು ಕಂಡು, ಮನೇಲಿ ಏನೋ ಆಗಿದೆ'ಎಂಬ ಚಿರುಕಂಡನ ಸಂದೇಹ ಬಲವಾಯಿತು.
ತಂದೆ ಮನೆಯಲ್ಲಿಲ್ಲವೆಂಬುದಂತೂ ಆಗಲೆ ಸ್ಪಷ್ಟವಾಗಿತ್ತು, ಈಗ ಹೊಸತಾದ ಸಂಕಷ್ಟವೇನಾದರೂಬ ಒದಗಿಬಂತೇ? ಎಂದು ಆತನಿಗೆ ದಿಗಿಲಾಯಿತು.
ಚಿರುಕಂಡ, ಕಾತರವನ್ನು ತಡೆಹಿಡಿಯಲಾರದೆ ತಾಯಿಯನ್ನು ಕೇಳಿದ:
"ಅಪ್ಪ ಬಂದಿಲ್ವ?"
ಆಕೆ ಕೊಟ್ಟದ್ದು ಚುಟುಕು ಉತ್ತರ: "ಇಲ್ಲ."
ಆ ಉತ್ತರದಿಂದೇನೂ ಸಂದೇಹ ನಿವಾರಣೆಯಾಗುವಂತಿರಲಿಲ್ಲ,
ಪುಟ:Chirasmarane-Niranjana.pdf/೬೨
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ