ಪುಟ:Chirasmarane-Niranjana.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ನೀನು ಯಾವತ್ತಾದರೂ ಲೆಕ್ಕ ಹಾಕಿ ನೋಡಿದ್ಯಾ, ಕಲ್ಯಾಣಿ?ಸಂದಾಯ ಮಾಡಿದ ಬಡ್ಡಿಯೆಲ್ಲ ಆತ ಕೊಟ್ಟ ಸಾಲಕ್ಕಿಂತಲೂ ಜಾಸ್ತಿಯಾಗ್ತದೆ." "ಸಾಲ ಅಂದ್ಮೇಲೆ ಯಾವಾಗ್ಲೂ ಹಾಗೇ ಅಲ್ವ?" "ಅವನಿಗ ಸಾಷ್ಟಾಂಗ ನಮಸ್ಕಾರ ಮಾಡಿ ಕೇಳ್ದೆ,ಬೇಡ್ಕೊಂಡೆ,ಇನ್ನು ಸ್ವಲ್ಪ ಅವಧೀನಾದರೂ ಕೊಡೀಂತ. ಅವಧಿ ಕೊಟ್ಟರೂ ಸಾವಿರ ರೂಪಾಯಿ ಎಲ್ಲಿಂದ ತರ್ತೀಯಾ-ಅಂದ. ಅಗತ್ಯ ಬಿದ್ದರೆ ಇರೋ ಹೊಲದಲ್ಲಿ ಒಂದು ಸ್ವಲ್ಪ ಮಾರ್ತೇನೆ ಅಂದ.ಅದು ಕೇಳಿದ ತಕ್ಷಣವೇ ರೇಗಿ ಹಾರಾಡಿದ.ಈಗಿಂದೀಗ ಸಂದಾಯ ಮಾಡ್ಬೇಕು,ಇಲ್ದಿದ್ರೆ ಕೋರ್ಟಿಗೆ ಏಳೀತೇನೆ-ಅಂದ.ಕೋರ್ಟಿಗೆ ಹೋಗಿ ರೈತರು ಯಾವತ್ತಾದ್ರೂ ಉದ್ಧಾರವಾಗಿದ್ದಾರಾ ಹೇಳು?ಅಲ್ಲಿ ಎಷ್ಟೋ ಜನ ನಿಂತಿದ್ರು-ಜೀಹುಜೂರ್ ಅನ್ನೋ ಹೊಗಳುಭಟ್ಟರು.ಬಡವ,ಕೋರ್ಟಿಗೆಲ್ಲ ಎಳೀಬಾರ್ದು, ಶಾಂತಿಯಿಂದಲೇ ಇತ್ಯಾರ್ಥ್ಯ ಮಾಡೋಣ- ಅಂತ ನನ್ನ ಪರವಾಗಿ ವಾದಿಸುವ ನಾಟಕ ಆಡಿದ್ರು.ಏನಪ್ಪಾ, ಇಂಥ ಧನಿಗಳು ಬೇರೆ ಸಿಗಲಾರರು;ನೀನಾದರೂ ಹೊಲ ಕಳಕೊಂಡು ಯಾವೂರಿಗೆ ಭಿಕ್ಷೆಗೆ ಹೋಗ್ತೀಯಾ?ಇಲ್ಲಿ ಧನಿಗಳ ಒಕ್ಕಲಾಗಿ ಇದ್ಬಿಡು;ಹೊಲಾನೆಲ್ಲಾ ಅವರಿಗೇ ಬರ್ಕೊಟ್ಟು,ಗೇಣಿಗೆ ನೀನೇ ವಾಪಸು ತಗೊಂಡ್ಬಿಡು-ಅಂದ್ರು....ಏನ್ಮಾಡ್ಬೇಕೂಂತ ನನಗೆ ತೋಚ್ಲಿಲ್ಲ,ಕಲ್ಯಾಣಿ... ಪೋಲೀಸು-ಕೋರ್ಟು-ಜೈಲು ಅಂತೆಲ್ಲ ಯೋಚಿಸಿನಿನ್ನ-ಚಿರುಕಂಡನ ನೆನಪಾಗಿ,ಭಯವಾಯ್ತು.ಹೊಲ ನಮ್ಮ ಹೆಸರಲ್ಲಿ ಇಲ್ದೇ ಹೋದ್ರೂ ಈ ಹಳ್ಳೀಲೇ ಈ ಹೊಲದಲ್ಲೇ ಇರಬಹುದಲ್ಲಾಂತ,ಅವರ ಹೆಸರಿಗೆ ಹೊಲ ಬರ್ಕೊಟ್ಟು,ಸಾಲ ತೀರಿಸೋಕೆ ತೀರ್ಮಾನ ಮಾಡ್ದೆ." ಯಾವುದೋ ನೋವಿನಿಂದ ನರಳುತ್ತಿದ್ದವಳಂತೆ ತಾಯಿಯ ದೇಹ ಮೆಲ್ಲನೆ ಹೊರಳಡಿತು.ತಂದೆ ಒಂದು ಕ್ಷಣ ಸುಮ್ಮನಿದ್ದು ಮತ್ತೆ ಮುಂದುವರಿಸಿದ: "ಹಾಗೆ ಒಪ್ಕೊಂಡ್ಮೇಲೆ,ಸ್ವಲ್ಪ ಹೊತ್ತು ಪುರುಸೊತ್ತು ಕೊಡಿ,ಮನೆಗೆ ಹೋಗ್ಬರ್ತೇನೆ ಎಂದೆ.ಅವರಿಗೆ ಅದೇನು ತೋಚಿತೋ ಏನೋ.ಆಗೋದಿಲ್ಲ,ಈಗ್ಲೇ ಆಗ್ಬಿದ್ಬೇಕು ಅಂದ್ರು.ಪಟೇಲ್ರನ್ನೂ ಶ್ಯಾನುಭೋಗರನ್ನು ಕರೆಸಿದ್ರು,ಕಾಗದ ಪತ್ರ ಎಲ್ಲಾ ಆಯ್ತು.ಪಟೇಲ್ರು ಓದಿ ಹೇಳಿ ನನ್ನಿಂದ ಹೆಬ್ಬೆಟ್ಟಿನ ಗುರುತು ಹಾಕಿಸ್ಕೊಂಡ್ರು." ತಾಯಿ ಮೆಲ್ಲನೆ ಕೇಳಿದಳು: "ಬರೆದದೆಲ್ಲ ಸರಿಯಾಗಿತ್ತು?" "ಸರಿಯೋ ತಪ್ಪೋ ಯಾರಿಗೆ ಗೊತ್ತು?ನನಗೆ ಓದುಬರಹ ಬರ್ತಿದ್ರೆ