ಪುಟ:Chirasmarane-Niranjana.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ

     ಬುತ್ತಿ   ಉಣ್ಣುತ್ತ ,ತಂದೆ  ಚಿರುಕಂಡನನ್ನು ಉದ್ದೇಶಿಸಿ ಹೇಳಿದ:"ಊಟವಾದ್ಮೇಲೆ ಇನ್ನೇನು? ಅಲೆಯೋಕೆ ಹೊರಡೋದೇ! ನಿಮ್ಮಪ್ಪ ಬಹಳ ಸಲಿಗೆ ಕೊಟ್ಟಿದ್ದಾನೆ ನಿಂಗೆ,ಅಲ್ಲ.  ಚಿರಕಂಡ ಏನೂ  ಹೇಳಲಿಲ್ಲ. ಮೌನವಾಗಿ ನಗುತ್ತ, ಕಲ್ಲುಗಳೊಡನೆ ಆಟಾವಾಡುತ್ತ ,ಹೊಲಗಳತ್ತ  ನೋಡುತ್ತ ಕುಳಿತ."ಸಲಿಗೆ ಕೊಡದೆ  ಇನ್ನೇನು ? ಒಬ್ನೇ ಮಗ "ಎಂದಳು ಅಪ್ಪುವಿನ ತಾಯಿ ರಾಗವಾಗಿ."ಈಗೀಗ ಹುಡುಗರು ಪೂರಾ ಕಠೋಗ್ತಿದ್ದಾರೆ"   ಎಂದು  ಗೊಣಗಿ, ಚಿರಕಂಡನತ್ತ ನೋಡುತ್ತ ತಂದೆ ಕೇಳಿದ: "ಬೇಡಿಗೀಡಿ ಸೇದೋಕೆ  ಸುರುಮಾಡಿದೀರೇನ್ರೋ?" ಅಪ್ಪುವಿಗೆ ರೇಗಿತು."ನಾವು ಬೀಡಿಗೀಡಿ ಸೇದೋರಲ್ಲ" ಎಂದು ಆತ ಸಿಟ್ಟಿನಿಂದ ಉತ್ತರವಿತ್ತ.ತಾವು ಎಂಥವರು ಎಂಬುದನ್ನು ಆಗಲೇ ಅಲ್ಲಿಯೇ ಹೇಳಿಬಿಡಬೇಕೆನ್ನುವಷ್ಟು ಕೋಪ ಬಂತು   ಆತನಿಗೆ  . ತಾಯಿ ನಕ್ಕಳು. "ಬೀಡಿಗೀಡಿ ಅವರು ಯಾಕೆ ಸೇದ್ತಾರೆ?ಕೆಟ್ಟ  ಚಾಳಿಯೆಲ್ಲ ಇರೋದು ದೊಡ್ಡವರ್ಗೇನೆ!"    ಕುಡಿಯುವ ಚಟವಿದ್ದ ತನ್ನನ್ನು ಟೀಕಿಸಿ ಹೆಂಡತಿ  ಹಾಗೆ ಅಂದಳೆಂದು ,ಆತ ಬಿರುನೋಟದಿಂದ ಆಕೆಯನ್ನು ನೋಡಿದ.ಆಕೆ,ಯಾತಕ್ಕೋಸ್ಕರ ಹಾಗೆ ಹೇಳಿದಳೆಂಬುದನ್ನು ತಿಳಿದು, ಹುಡುಗರು ಪರಸ್ಪರರನ್ನು ನೋಡಿ ನಕ್ಕರು.ತಂದೆ -ಮಗ ಊಟ ಮುಗಿಸಿ ,ತೋಡಿನ ಬಳಿಗೆ ಹೋಗಿ ಕೈ ಬಾಯಿ ತೊಳೆದರು .ಹರಿಯುತ್ತಿದ್ದ ಆ ಸ್ವಚ್ಛ  ನೀರನ್ನೆ ಕುಡಿದರು .ತಾಯಿ ಆ ನೀರಿನಲ್ಲೇ ಬುತ್ತಿಯ ಪಾತ್ರೆಯನ್ನು ಬೆಳಗಿದಳು. ಹೆಂಡತಿ ತಂದಿದ್ದ ಎಲೆ ಅಡಿಕೆ ಸ್ವೀಕರಿಸಿ,ಗಂಡ ಅದರಲ್ಲಿ ಆಕೆಗೂ ಒಂದಿಷ್ಟು ಪಾಲು ಕೊಟ್ಟ. ಮರದ ಕೆಳೆಗೆ ನೆರಳಿದ್ದರೂ ಹೊರಗೆ ಬಿಸಿಲು ಥಕಥಕ ಕುಣಿಯುತ್ತಿತ್ತು . ಗಂಡ ಹೆಂಡತಿಗೆ ಹೇಳಿದ :"ನೀನು ಹೋಗಿನ್ನು."  "ಹೂಂ . ಹೊರಡ್ತೇನೆ. ಮಗನನ್ನೊಮ್ಮೆ ದಿಟ್ಟಿಸಿ ಆತ ಹೇಳಿದ; "ಅಮ್ಮನ ಒಟ್ಟಿಗೆ ನೀನೊ ಹೋಗ್ತೀಯೇನೋ ಅಪ್ಪು?"