ಪುಟ:Chirasmarane-Niranjana.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ವಿಷಯವನ್ನೆತ್ತಿಕೊಂಡರೂ ಮಾತು ಮಾಸ್ತರಲ್ಲಿಗೆ ತಲಪಿ ಗಹನ ವಿಚಾರವಾಗಿ ಮಾರ್ಪಡುತ್ತಿತ್ತು.ಆದರೆ ಆ ಸಂಬಂಧವಾಗಿ ಹೆಚ್ಚೇನು ಮಾತನಾಡಬೇಕೆಂಬುದು ಅವರಿಗೆ ತಿಳಿದಿರಲಿಲ್ಲ. ಒಬ್ಬೊಬ್ಬರೇ ಹೋಗುವಂತಹ ಕಾಲುಹಾದಿಯಲ್ಲಿ ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ಹುಡುಗರತ್ತ ಅಪ್ಪುವಿನ ತಾಯಿಯೊಮ್ಮೆ ನೋಡಿ, ಕೇಳಿದಳು: "ಯಾಕೆ ಸುಮ್ನಿದ್ದೀರಾ?ಬಿಸಿಲು ತಡೆಯೋಕೆ ಆಗೋದಿಲ್ವೇನು?" "ಇಲ್ಲವಮ್ಮ , ನಮಗೆ ಇಂಥ ಬಿಸಿಲೆಲ್ಲ ಯಾವ ಲೆಕ್ಕ? ಅಲ್ಲವೇನೋ ಚಿರಕಂಡ?" ಎಂದು ಸ್ನೇಹಿತನತ್ತ ನೋಡಿ ಕಣ್ಣುಮಿಟುಕಿಸಿ ಅಪ್ಪು ಹೇಳಿದ. ಕೊನೆಯದಾಗಿ ಬರುತ್ತಿದ್ದ ಚಿರಕಂಡನೆಂದ: " ಈ ಬಿಸಿಲೆಲ್ಲ ಇರೋದು ನಾಲ್ಕು ನಿಮಿಷ ನೋಡಿ ಬೇಕಾದರೆ, ಇನ್ನು ಸ್ವಲ್ಪ ಹೊತ್ನಲ್ಲೇ ತಂಪಾದ ಗಾಳಿ ಬೀಸ್ತದೆ."

           ಆಕೆ  ತಮ್ಮಿಬ್ಬರ   ಮಾತನ್ನೂ  ಅಲ್ಲಗಳೆಯಲಿಲ್ಲವೆಂದು   ಹುಡುಗರಿಗೆ         ಸಂತೋಷವಾಯಿತು.ಮನೆಗೆ  ಹೋದ  ಸ್ವಲ್ಪ   ಹೊತ್ತಿನಲ್ಲೇ  ಅಲ್ಲಿಂದ                     ಹೊರಬೀಳುವುದು   ಕಷ್ಟವಾಗದೆಂಬುದು ಅವರಿಗೆ  ಸ್ವಷ್ಟವಾಯಿತು.                         ಎದುರು  ದಿಕ್ಕಿನಿಂದ  ಯಾರೋ   ಬಂದರೆಂದು   ಮೂವರು  ಬದಿಗೆ  ಸರಿದು,             ಬಂದವರು  ದಾಟಿಹೋಗಲು  ಹಾದಿ  ಮಾಡಿಕೊಟ್ಟರು.ಹಾಗೆ  ಹೋದವರು  ರೈತರೇ .    ಆದರೆ  ಮುಖಗಳು  ಅಪರಿಚಿತವಾಗಿದ್ದುವು.                                                   "ಯಾರು ಚಿರುಕಂಡ,  ಹೋದವರು?" ಎಂದು  ಕೇಳಿದ  ಅಪ್ಪು.   "ಗೊತ್ತಾಗಲಿಲ್ಲವಪ್ಪ,ನಮ್ಮ, ಹಳ್ಳಿಯವರಂತೂ ಅಲ್ಲ. ಪಕ್ಕದ                ಹಳ್ಳಿಯವರೋ   ಏನೋ."                                                                     "ಗೊತ್ತಾಗಲಿಲ್ಲವಪ್ಪ. ನಮ್ಮ.ಹಳ್ಳಿಯವರಂತೂ  ಅಲ್ಲ.ಪಕ್ಕದ  ಹಳ್ಳಿಯವರೋ  ಏನೋ."                                     

"ಚರ್ವತ್ತೂರು ರೈಲು ಸ್ವೇಷನ್ನಿಗೆ ಹೋಗ್ತಿರ್ಬೇಕು ,ಅಲ್ವ?" "ಅವರ ಕೈಲಿರೋ ಗಂಟು ನೋಡಿದ್ರೆ ಹಾಗೆ ಕಾಣ್ತದೆ.ಊರಿಗೆ ಹೊರಟವರ ಹಾಗಿದ್ದಾರೆ." ಹುಡುಗರು ಈ ರೀತಿ ತರ್ಕಬದ್ದವಾಗಿ ಊಹಾಪೋಹ ಕಂಡು ತಾಯಿಗೆ ಸ್ವಾರಸ್ಯವೆನಿಸಿತು. ಅಪ್ಪು ತಾಯಿಯನ್ನು ಕೇಳಿದ: "ಹೊತ್ತಾದ ಮೇಲೆ ಇಂಥ ದಾರೀಲಿ ನಡಕೊಂಡು ಹೋಗೋದು ಕಷ್ಟ ಅಲ್ವ