ಪುಟ:Chirasmarane-Niranjana.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಅಮ್ಮ?ಜಾರಿ ಬೀಳೋದೇ ! ಹಾವುಗಳು ಬೇರೆ!" ತಾಯಿ ಆ ಮಾತನ್ನು ಉಪಯೋಗಿಸಿಕೊಳ್ಳುತ್ತ ಅಂದಳು: "ಅದಕ್ಕೇ ಹೇಳೋದು, ಹುಡುಗರು ಸೂರ್ಯ ಕಂತೋದರೊಳಗೆ ಮನೆ ಸೇರಬೇಕು ಅಂತ." "ಹುಡುಗರು ದೊಡ್ಡವರು ಎಲ್ಲ ಒಂದೇ ಅಮ್ಮ. ಕತ್ತಲೇಲಿ ಯಾರಾದರೂ ಅಷ್ಟೆ, ನನ್ನ ಕೇಳಿದರೆ,ಒಂದೊಂದು ಮನೆಗೂ ಒಂದೊಂದು ಸಣ್ಣ ಕೈ ಬ್ಯಾಟರಿ ಇರ್ಬೇಕು , ಅಲ್ವ ಚಿರುಕಂಡ?" "ರಾತ್ರೆ ತಿರುಗಾಡುವ ಸಾಹಸದ ಸಂಚಾರಗಳಿಗಾಗಿ ಅಪ್ಪು ಬ್ಯಾಟರಿ ಬೇಕೆನ್ನುತ್ತಿದ್ದಾನೆ" ಎಂದು ಚಿರಕಂಡನೆಂದ : "ಹೂಂ,ಬ್ಯಾಟರಿ ಇದ್ರೆ ತುಂಬ ಪ್ರಯೋಜನವಾಗ್ತದೆ." "ಹಾಗೇ ಒಬ್ಬೊಬ್ಬರ ಕೈಲಿ ಒಂದೊಂದು ಒಳ್ಳೇ ಬೆತ್ತವೂ ಇರ್ಬೇಕು .ಅಲ್ವ?" "ಹೂಂ". ಈಗ ಅಪ್ಪು, ಮಾತಿನ ದಾಳಿಯನ್ನು ತಾಯಿಯತ್ತ ತಿರುಗಿಸಿದ. "ಈ ಸಲ ನೀಲೇಶ್ವರದ ಜಾತ್ರೇಲಿ ಖಂಡಿತ ನನಗೊಂದು ಬ್ಯಾಟರಿ ತೆಗೆಸ್ಕೊಡ್ಬೇಕು, ನೋಡಮ್ಮ." ತಾಯಿ ನಕ್ಕಳು. "ಅದೇನು ಒಂದಾಣೆಗೆ ಬರ್ತದೇನೋ?" ಅಪ್ಪುವಿಗೆ ರೇಗಿತು. ಅವನೆಂದ; "ಒಂದಾಣೆಗೆ ಬರೋದು ಮೋಂಬತ್ತಿ." "ಒಳ್ಳೇದಕ್ಕೆ ಒಂದು ರೂಪಾಯಿಯಾದರೂ ಆಗ್ತದೆ. ಮಾಸ್ತರ ಹತ್ರ ಇದೆಯಲ್ಲಾ-ಅದಕ್ಕೆ ಅಷ್ಟೇ ಕೊಟ್ಟಿದ್ದಾರಂತೆ...." ....ಚಿರಕಂಡ ಆ ಮಾಹಿತಿ ಒದಗಿಸಿದ.ಒಮ್ಮೆ ಕೊಂಡಮೇಲೂ ಸಲ್ಲಿಗಾಗಿ ವೆಚ್ಚದ್ದನ್ನು ಅಪ್ಪುವಿನ ತಾಯಿ ಕೊಡಿಸಲಾರಳೆಂದು,ಆ ಮಾತನ್ನು ಆಡಲಿಲ್ಲ. ತಾಯಿ ಎಂದಳು: "ನನ್ಹತ್ರ ಎಲ್ಲಿದೆ ದುಡ್ಡು  ? ನಿಮ್ಮ ಪ್ಪನನ್ನು ಕೇಳು." ಅಪ್ಪು ಮೆಲ್ಲನೆ ತಾಯಿಯ ಮುಖಸ್ತುತಿ ಆರಂಭಿಸಿದ: "ಸರಿಹೋಯ್ತು, ಅವನು ಯಾವತ್ತಾದರೂ ನನಗೆ ಏನನ್ನಾದರೂ ತೆಗಸಿಕೊಟ್ಟಿದ್ದಾನ? ನೀನೇ ಹೇಳು!"