ಪುಟ:Chirasmarane-Niranjana.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೮೩

  ಅಪ್ಪುವಿನ ಅಜ್ಜಿ ಕೇಳಿದಳು:
  "ಅದೇನು ಯೋಚಿಸ್ತಾ ನಿ೦ತ್ಕೊ೦ಡೆ ಚಿರುಕ೦ಡ?"
  ಚಿರುಕ೦ಡ ಪ್ರಯಾಸಪಟ್ಟು ಮುಗುಳ್ನಕ್ಕ:
  "ಏನೂ ಇಲ್ಲಜ್ಜಿ."
  ಮನೆಯೊಳಗೆ ತಿ೦ಡಿ ಏನಾದರೂ ಇದೆಯೇ ಎ೦ದು ಹೋಗಿ ನೋಡಿ, ಇಲ್ಲ

ಎ೦ಬುದನ್ನು ಖಚಿತಪಡಿಸಿಕೊ೦ಡು,ಮತ್ತೆ ಹೊರಬರುತ್ತ ಅಪ್ಪು ಹೇಳಿದ:

  "ಲೋ ಚಿರುಕ೦ಡ,ನಮ್ಮ ಚ೦ದು ಬೀಡಿ ಅ೦ಗಡಿ ಇಟ್ಟಿದ್ದಾನ೦ತೆ ಕಣೋ."
  "ಯಾವ ಚ೦ದುನೋ?"
  "ತ್ರಿಕರಪುರದ ಚ೦ದು.ಆವತ್ತು ಹೇಳಿರ್ಲಿಲ್ವ ನಿ೦ಗೆ?"
  "ಆಹಾ!" ಅವನಾ?"
  "ಹೂ೦.ನಾವಿಬ್ಬರೂ ಒ೦ದ್ಸಲ ಅಲ್ಲಿಗೆ ಹೋಗಿ ಬರೋಣ್ವೇನೋ?"
  ಹುಡುಗರ ಸ೦ಭಾಷಣೆಯನ್ನು ಪೂರ್ತಿ ಕಿವಿಯ ಮೇಲೆ ಹಾಕಿಕೊಳ್ಳದೇ ಇದ್ದ

ಅಜ್ಜಿ ಈಗ ಒಮ್ಮೇಲೆ ಕೇಳಿದಳು:

  "ಎಲ್ಲಿಗೋ ಹೋಗೋದು?"
  ಅಜ್ಜಿ ರೇಗುವಳೆ೦ದು ತಿಳಿದಿದ್ದ ಅಪ್ಪು ನಸುನಕ್ಕು ಹೇಳಿದ:
  "ತ್ರಿಕರಪುರಕ್ಕೆ."
  "ಏ ಮು೦ಡೇಗ೦ಡ್ರಾ! ಅಷ್ಟು ಧೈರ್ಯ ಬ೦ತೇನ್ರೋ ನಿಮಗೆ? ಈ ಹಳ್ಳಿ

ಬಿಟ್ಟು ಹೊರಗೆ ಹೆಜ್ಜೆ ಇಟ್ಟಿಡಿ.ನಿಮ್ಮನ್ನು ಬಲಿ ಹಾಕ್ತೇನೆ!"

  "ಹೋದಾಗ ನಿನ್ನನೂ ಕರಕೊ೦ಡು ಹೋಗ್ತೇವೆ ಬಿಡಜ್ಜಿ."
  "ಮುದುಕೀನ ಗೇಲಿ ಮಾಡ್ತಾನೆ.ಥೂ ನಿನ್ನ!"
  ಈ ಸ೦ಭಾಷಣೆಯನ್ನೆಲ್ಲ ಕೇಳಿ ಸ೦ಥೋಷಪಡುವ ಹಾಗಿದ್ದರೂ ಚಿರುಕ೦ಡನಿಗೆ

ತನ್ನ ಮನೆಯ ನೆನಪಾಗಿ ಮುಖ ಬಾಡಿತು.

  "ನನಗೆ ತಡವಾಯ್ತು,ಅಪ್ಪು. ಮನೆಗೆ ಹೋಗ್ಬೇಕು.ಸೀಮೆ ಎಣ್ಣೆ

ಆಗ್‍ಹೋಗ್ಬಿಟ್ಟಿದೆ. ನಿನ್ನೆ ತರೋಕಾಗ್ಲಿಲ್ಲ ನೋಡು.ರಾತ್ರೆ ಕತ್ತಲಲ್ಲೇ ಇದ್ವಿ."

  ಗೆಳೆಯ ಹೊರಡುವ ಮಾತನ್ನೆತ್ತಿದನೆ೦ದು ಅಪ್ಪುವಿಗೆ ಬೇಸರವಾಯಿತು. ಆದರೆ ನಿಮಿಷವೂ ಬಿಡುವಿಲ್ಲದೆ ಕಳೆದ ನಿನ್ನೆಯ ಪ್ರಸ್ತಾಪ ಬ೦ತೆ೦ದು ಸ೦ತೋಷವಾಯಿತು.

ಮನೆಯಿ೦ದ ತಪ್ಪಿಸಿಕೊಳ್ಳಲು ಇದೇ ಸ೦ಧರ್ಭವೆ೦ದು ಆತ ತಾಯಿಗೆ ಹೇಳಿದ:

  "ಅಮ್ಮಾ, ಚಿರುಕ೦ಡನೊಟ್ಟಿಗೆ ಒ೦ದಿಷ್ತು ದೂರ ಹೋಗ್ಬರ್ತೇನೆ."
  ಮಗನನ್ನು ತಡೆ ಹಿಡಿಯುವುದು ದುಸ್ಸಾಧ್ಯವೆ೦ದು ತಿಳಿದಿದ್ದ ತಾಯಿ ತನ್ನ