ಪುಟ:Chirasmarane-Niranjana.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೯೭

ಕಡಿಮೆಯೆ?ಧಾರಾಳವಾಗಿ ಸಿಗ್ತದೆ."

   ಸಾಮಾನ್ಯವಾಗಿ ಮಾಸ್ತರಿಗೆ ಬೇಕಾದ ತರಕಾರಿಯನ್ನೆಲ್ಲ ವಿದ್ಯಾರ್ಥಿಗಳೇ

ತಂದುಕೊಡುತ್ತಿದ್ದರು ; ಮಾಸ್ತರು ಬೇಡವೆಂದರೂ ತರುತ್ತಿದ್ದರು. ದುಡ್ಡು ಕೊಡಹೂದರೂ ತೆಗೆದುಕೊಳುತ್ತಿರಲಿಲ್ಲ.

  ತರಕಾರಿಯ ನಂತರ,ಅಕ್ಕಿಯ ವಿಷಯ ಜಮೀನ್ದಾರರು ಪ್ರಸ್ತಾಪಿಸಿದರು.
  "ನಿಮಗೆ ಅಕ್ಕಿದೇನಾದರೂ ತೊಂದರೆ ಇದ್ರೆ ಹೇಳಿ ಕಳಿಸ್ತೇನೆ, ಸ್ಂಕೋಚ

ಪಡಬೇಡಿ."

  "ಛೆ!ಛೆ!ಸಂಕೋಚ ಯಾತರದು?ಅಕ್ಕಿಯೂ ದಾಸ್ತಾನಿದೆ.ಬೇಕದ್ರೆ ಖಂಡಿತ

ಬಂದು ಕೇಳ್ತೇನೆ."

   ಅಷ್ಟರಲ್ಲಿ ಮನೆಯ ತಲೆಬಾಗಿಲಲ್ಲಿ ಜಮೀನ್ದಾರರ ಹುಡುಗ ಕಾಣಿಸಿಕೊಂಡು

ಮಾಸ್ತರನ್ನು ನೋಡಿ ಮುಗಳ್ನಕ್ಕ. ಆತನ ತಾಯಿಯೋ ಮಲ ತಾಯಿಯೋ ಹಿರಿಯಕ್ಕನೋ---ಅಂತೂ ಕೆಲ ಹೆಂಗಸರೂ ಹುಡುಗನ ಹಿಂದೆ ಬಾಗಿಲ ಮರೆಯಲ್ಲಿ ನಿಂತು ಮಾಸ್ತರನ್ನು ನೋಡಿದರು. ಆ ದೃಷ್ಟಿಯ ಶಾಖ ತಗಲಿದಂತೆ ಮಾಸ್ತರು ಅತ್ತಿತ್ತ ಮಿಸುಕಿದರು.

  ಈ ದೃಷ್ಟಿಸಂಚಾತರವನ್ನು ಗಮನಿಸಿದ ಜಮೀನ್ದಾರರು ಕರೆದರು:
  "ಕರುಣಾಕರ, ಇಲ್ಲಿ ಬಾ!"
  ಹುದುಗ ಶರಟಿನೊಂದು ಕೊನೆಯನ್ನು ಕಚ್ಚುತ್ತ,ಮುದ್ದಾದ ದೊಡ್ಡ
  "ನಂಬಿಯಾರರು ಅರ್ಥವಾದುದೇನೇನ್ನೋ ಗೊಣಗಿ ,ಮಗನ ಶರಟಿನತ್ತ

ಕೈಹಾಕಿ,ಕಚ್ಚಿಕೊಂಡಿದ್ದನ್ನು ತಪ್ಪಿಸಿ,ಶರತಟನ್ನು ಬಿಡಿಸಿದರು.ಮಾಸ್ತರತ್ತ ನೋಡಿ ಅವರೆಂದರು:

   "ಬಹಳ ದಿವಸದಿಂದ ನಿಮ್ಮನ್ನು ಕೇಳ್ಬೇಕೂಂತಿದ್ದೆ.ನಮ್ಮ ಕರುಣಾಕರನಿಗೆ

ದಿನಾಲೂ ಸ್ವಲ್ಪ ಹೊತ್ತು ನೀವು ಹೆಚ್ಚಿಗೆ ಪಾಠ ಯಾಕೆ ಹೇಳಿಕೊಡ್ಬಾರ್ದು?"

    ಬಿಕ್ಕಟಿನಲ್ಲಿ ಸಿಲುಕಿದ ಹಾಗಾಯಿತು ಮಾಸ್ತರಿಗೆ.ಈ ಹೊಸ ಭಾರವನ್ನು

ಹೊತ್ತುಕೊಳುವುದು ಅವರಿಗೆ ಏನೇನೂ ಇಷ್ಟವಿರಲಿಲ್ಲ. ಅವರು ಒಮ್ಮೆಲೆ ಉತ್ತರಕೊಡಲಾರದೆ ಹೂದರು. ಆದರೆ ನಿರುತ್ತರವಾಗಿ ನಸುಮ್ಮನಿರುವುದೂ ಸಾಧ್ಯವಿರಲಿಲ್ಲ.ಕಳೆದುಹೋಗಿದ್ದ ಸ್ವರವನ್ನು ಮರಳಿ ಹುದುಕಿ ಪಡೆಯುತ್ತ ಅವರೆಂದರು:

7