ಪುಟ:Chirasmarane-Niranjana.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦  ಚಿರಸ್ಮರಣೆ

     ಮಾಸ್ತರಿಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ.ಅರೆತೆರೆರೆದ ಬಾಗಿಗನ್ನು

ಅವರು ಮುಚ್ಚಲಾರದೆ ಹೋದರು.ಮಾತನಾಡಲಾರದ ಅವರ ನೆರೆವಿಗೆ ಬಂದು ನಂಬಿಯಾರರೆ ಅಂದರು:

     "ಈ ಸಣ್ಣಪಟ್ಟ ರೈತರಲ್ಲಿ ಕೆಲವರು ತಲೆತಿರುಕರಿರುರ್ತಾತೆ. ಎಲ್ಲಿ ಯಾದರೂ

ಅವರು ಗ್ರಾಮ ಪಂಚಾಯಿತಿಗೆ ಆರಿಸಿ ಬಂದರೂಂತಿಟ್ಕೋಳ್ಳಿ, ಅದೇನೋ ಗಾದೆ ಇದೆಯಲ್ಲ---ಹಾಗೆ ಅರ್ಥ ರಾತ್ರೀಲಿ ಕೊಡೆ ಹಿಡಿಸ್ಕೊಂಡು ಮೆರವಣಿಗೆ ಹೋದರೂ ಹೋದರೇ! ಇನ್ನು ಹಳ್ಳಿಯ ಸ್ಥಿತಿಯೊ---ರಾಮ!"

      ಮಾಸ್ತರ ಗಂಟಲಲ್ಲಿ ಮತ್ತೆ ಉಗುಳು ಸಿಲುಕಿಕೊಂಡಿತು.ಮಾತು ಅಸಹನೀಯ

ವೇದನೆಯಿಂದ ಹೊಟ್ಟೆಯೊಳಗೇ ಹೊರಳಾಡಿತು.ತಾವು ಛಿತ್ರಿಸಿದ ಭಿತಿಯೆಲ್ಲಾ ಬರಿಯ ಭ್ರಮೆ ಎನ್ನುವಂತೆ ಜಮೀನ್ದಾರರು ಮಾತು ಮುಂದುವರೆಸಿದರು:

     "ತ್ರಿಕರಪುರದಲ್ಲಿ ಹಾಗೆ ಆಗಲ್ಲಾಂತಿಟ್ಕೊಳ್ಳಿ.ಆದರೂ ಈ ಗ್ರಾಮ ಪಂಚಾಯಿತಿ

ಅಗತ್ಯವೇ---ಅಂತ ನನ್ನ ಪ್ರಶ್ನೆ. ಈಗ ನಮ್ಮ ಹಳ್ಳೀನೇ ತಗೊಳ್ಳಿ ಇದಕ್ಕೀಗ ಏನಾಗಿದೆ?"

      ಮಾಸ್ತರು ಗಟ್ಟಿಯಾಗಿ ನಕ್ಕರು. ಆ ನಗು ಅರ್ಥವಾಗದೆ ನಂಬಿಯಾರರು

ಮಾಸ್ತರನ್ನೇ ದುರುದುರನೆ ನೋಡಿದರು. ತಮ್ಮ ಮಾತಿಗೆ ಮೆಚ್ಚಿ ಆತ ನಕ್ಕಿರಬರಹುದೆಂದು ಊಹಿಸಿಕೊಡು ತಾವೂ ಹಲ್ಲು ಕಿಸಿದರು. ಗ್ರಾಮ ಪಂಚಾಯಿತಿ ವ್ಯರ್ಥವೆಂಬುದೇ ಅವರ ಅಭಿಪ್ರಾಯವಾಗಿದ್ದರೂ ಹಳೆಯ ಕಾಲದವನಾಗಿರಲು ಇಚ್ಚಿಸದೇ ಅವರೆಂದರು:

      "ಆದರೂ ನಾಗರಿಕತೆಯ ಈ ಕಾಲದಲ್ಲಿ ಗ್ರಾಮಪಂಚಾಯಿತಿ ಇರೋದು

ಭೂಷಣವೆಂದಾದರೆ ನನ್ನ ವಿರೋಧವಿಲ್ಲ.ಮೂಂದೆ ಅಗತ್ಯವಾಗಿ ಮಾಡೋಣ. ಇದು ನೂರರ ಜತೇಲಿ ನೂರೊಂದನೆಯ ಕೆಲಸ ಇದ್ದಹಾಗೆ.ಆದರೆ ಅದನ್ನು ಹತೋಟೀಲಿ ಇಟ್ಕೋಂಡು ನಡೇಸ್ಬೇಕು.ಅಷ್ಟೆ!"

     ಮಾಸ್ತರು ಮತ್ತೊಮ್ಮೆ ಯಾವ ಅರ್ಥವೂ ಇಲ್ಲದೆ ನಕ್ಕರು.
     ಅಷ್ಟರಲ್ಲೇ ಆಳೊಬ್ಬ ಬಂದು ವಿನೀತನಾಗಿ ಬಾಗಿ ಹೇಳಿದ:
     "ಕೆಳಗಿನ ಮೂಲೆಯ ಇಬ್ಬರು ರೈತರು ಬಂದಿದ್ದಾರೆ, ಒಡೆಯ."
     ನಂಬಿಯಾರರು ಹುಬ್ಬು ಗಂಟಿಕ್ಕಿದರು:
     "ಯಾರೊ?"
     "ಕೆಳಗಿನ ಮೂಲೇಯೋರು,ಬರಹೇಳಿದ್ರಿ.ನೀರು ಬಿಡೋ ವಿಷಯದಲ್ಲಿ.
     "ಓ ಅವರಾ?"