ಪುಟ:Daaminii.pdf/೧೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
7
ದಾಮಿನಿ.

ದಿಶೆಯ ಕ್ಷುದ್ರಗವಾಕ್ಷದಿಂದ ಹಾಸುಗೆಯ ಮೇಲೆ ಬಂದು ಬಿದ್ದ ಸೂರ್ಯಕಿರಣ ಗಳು ಅವಳ ಮನೋಜ್ಞವಾದ ಮುಖಮಂಡಲದಲ್ಲಿ ಪ್ರತಿಬಿಂಬಿತವಾಗುತ್ತಿದ್ದುವು. ನಾಸಾಗ್ರದಲ್ಲಿಯೂ ಕೆನ್ನೆಯ ಮೇಲೂ ಸಣ್ಣ ಸಣ್ಣ ಬೆಮರಿನ ಹನಿಗಳು ಚಿಕ್ಕಚಿಕ್ಕ ಮುತ್ತಿನ ಮಣಿಗಳಂತೆ ಪ್ರಕಾಶಿಸುತ್ತಿದ್ದುವು. ಒದ್ದೆಯ ಚೌಕದಿಂದ ವಾಮಿನಿಯು ಮೆಯ್ಯನೊರಸಿಕೊಳ್ಳುತ್ತಿದ್ದಳು,
ದಾಮಿನಿಯಾಗ ಬಾಲೆಯಲ್ಲ; ಹದಿನೇಳು ವರ್ಷದ ಯುವತಿ. ಅವಳ
ಸರ್ವಾವಯವಗಳೂ ಈಗ ಸಂಪೂರ್ಣತೆಯನ್ನು ಹೊಂದಿವೆ. ದೇಹದ ಬೆಳೆವಣಿಗೆಗೆ ತಕ್ಕಂತೆ, ಅಂಗಚಾಲನದಲ್ಲಿಯೂ ಗಾಂಭೀರ್ಯವು ಸಿದ್ಧಿಸಿದೆ. ಸ್ವಭಾವತಃ ಗೌ ರಾಂಗಿಯಾದ ದಾಮಿನಿಯಲ್ಲಿ ಆ ಬಣ್ಣವು ಆಪೇಕ್ಷೆಮಾಡಿದುದಕ್ಕಿಂತಲೂ ಅತಿಶಯ ವಾಗಿ ನಿರ್ಮಲವಾಗತೊಡಗಿದೆ.
ಮೆಯ್ಯನ್ನೊರಸಿಕೊಂಡು, ದಾಮಿನಿಯು ಕನ್ನಡಿಯನ್ನು ತೆಗೆದಳು. ಅಷ್ಟರ
ಲ್ಲಿಯೇ ಅಂಗಳದಲ್ಲಿ ಅಪರಿಚಿತವಲ್ಲದ ಒಂದು ಸ್ವರ! ಕೇಳಿ ಚಂಚಲೆಯಾಗಿ, ಅಲ್ಲಿಯೆ ಕನ್ನಡಿಯನ್ನೆಸೆದು, ಬೇಗನೆ ಬಾಗಿಲ ಬಳಿಗೆ ಬಂದು ನಿಂತಳು. ಆರನ್ನು ಬಾಲ್ಯದಲ್ಲಿ -ಅಣ್ಣಾ! ರಮೇಶ!?” ಎಂದು ಕರೆಯುತ್ತಿದ್ದಳೋ ಅವನೇ ಇಂದು ಅಂಗಳದಲ್ಲಿ ನಿಂದು, ತನ್ನ ಚಿಕ್ಕಮ್ಮನೊಡನೆ ಅದೇನನ್ನೋ ಮಾತನಾಡುತ್ತಿದ್ದನು. ಸತ್ರಷ್ಣನಯನೆ ಯಾಗಿ ಅವಳನ್ನು ನೋಡತೊಡಗಿದಳು.
ರಮೇಶನು ಇನ್ಯಾರೂ ಅಲ್ಲ; ಈಗಲವನು ದಾಮಿನಿಗೆ ಜೀವನಸರ್ವಸ್ವನಾದ
ಸ್ವಾಮಿ!
ಮಾತು ಮುಗಿಯಿತು; ರಮೇಶನು ತನ್ನ ಶಯನಗೃಹವನ್ನು ಪ್ರವೇಶಮಾಡಿ
ದನು. ಹಾಸುಗೆಯ ಮೇಲೆ ಒಂದೆರಡು ಅರಳಿದ ಹೂಗಳು ಬಿದ್ದಿರುವುದನ್ನು ನೋಡಿ- “ನನ್ನ ನಾಮಾವಳಿ*ಯಲ್ಲಿದ್ದ ಹೂಗಳನ್ನು ಕದ್ದ ಕಳ್ಳನಾರೋ? - ಎಂದನು.
ದಾಮಿನಿ:- “ಚೆನ್ನಾಯಿತು! ಒಳ್ಳೆಯ ಕೆಲಸ! ಹೂಗಳನ್ನು ತಂದು ನಾಮಾವಳಿ
ಯಲ್ಲಿ ಕಟ್ಟಿಡಕೂಡುವುದು! ಇತರರು ಅದನ್ನು ಕದ್ದುಕೊಳ್ಳುವುದಕ್ಕೆ ಆಗಲಾರದೆ? ಈಗ, ಆರೋ ಕದ್ದು ಕೊಂಡು ಹೋಗಿ, ಒಳ್ಳೆಯ ಕೆಲಸವಾಯಿತು!”
ರಮೇಶ:--“ಒಳ್ಳೆಯ ಕೆಲಸವಾಯಿತು; ಅಲ್ಲವೇನೋ? ಈ ಬಾರಿ, ಕಳ್ಳನನ್ನು
ಹಿಡಿಯಕೂಡಿದ್ದರೆ ಗೊತ್ತಾಗುತ್ತಿತ್ತು???


  • ದೇವರ ನಾಮಗಳನ್ನು ಕಸೂತಿಮಾಡಿದ ಚೀಟಿಯ ಬಟ್ಟೆಯ ಉತ್ತರೀಯ, (ಹೊಂದದ ಪಂಚ.) - ಇದು ಹೆಚ್ಚಾಗಿ ಬಂಗಾಳೀಯರ ಭದ್ರಗ್ರಹಗಳಲ್ಲಿರುವುದು.