'ಅಮ್ಮಾ” ಎಂದು ಅಳುವುದಕ್ಕೆ ಅಭ್ಯಾಸವಾಯಿತು. ದಾಮಿನಿಯು ದಿಂಬಿನಲ್ಲಿ ಮುಖವನ್ನಿಟ್ಟುಕೊಂಡು, ಅತ್ತು ಬಿಟ್ಟಳು.
ಆವ ಗ್ರಾಮದಲ್ಲಿ ರಮೇಶನು ವಾಸವಾಗಿದ್ದನೋ ಅದರ ತೆಂಕಣ ದಿಕ್ಕಿನಲ್ಲಿ, ನದಿಯ ತೀರದಲ್ಲಿ ಮುರಿದುಹೋದ ಮಹಡಿಯ ಮನೆಯೊಂದ್ದಿತು. ವದಂತಿ ಯೂ ಇದ್ದಿತು; ಏನೆಂದರೆ, ಆರೋ ರಾಜನೊಬ್ಬನು ಎಷ್ಟೋ ಮೊದಲು ತನ್ನ ತಾಯ ಗಂಗಾವಾಸದ ನಿಮಿತ್ತದಿಂದ ಆ ಭವ್ಯಭವನವನ್ನು ಕಟ್ಟಿಸಿದನು; ಆದರೆ, ದೈವವಶಾತ್ತಾಗಿಯೊ ನೋ - ಅದರಲ್ಲಿಯೇ ಒಂದು ಸ್ನೇಹತ್ಯೆಯುಂಟಾಗಲು, ರಾಜಮಾತೃವು ಅದನ್ನು ಪರಿತ್ಯಾಗಮಾಡಿದಳು; ಅಂದಿನಿಂದ, ಆರೂ ಅದರಲ್ಲಿ ವಾಸಮಾಡಿದುದಿಲ್ಲ
.
ಅತಏವ, ಆ ಮಂದಿರವ ಪ್ರೇತಮಂದಿರವೆಂದು ಹೆಸರ್ಗೊಂಡಿತು. ಭೌತಿ
ಕಾಪವಾದವಂತಾದುದರಿಂದ, ಕೊನೆಕೊನೆಗೆ ಹಗಲುಹೊತ್ತಿನಲ್ಲಿ ಯೂ ಆಫ್ ಅದರ ಹತ್ತಿರದಿಂದ ಹಾಯ್ದು ಹೋಗುವುದಕ್ಕೆ ಕೂಡ ಸಾಹಸಪಡುತ್ತಿರಲಿಲ್ಲ.
ಉನ್ಮಾದಿನಿ ನೋಡಿದಳು, ವಸತಿಯಿಲ್ಲಗ ಆ ಭಯಾನಕವಾದ ಭಗ್ನ ಮಂದಿ
ರವೇ ತನ್ನ ವಾಸಕ್ಕೆ ಯೋಗ್ಯವೆಂದುಕೊಂಡಳು. ಹಾಗೆಯೆ, ಅದರಲ್ಲಿ ಗೋಷ್ಯ ವಾಗಿ ವಾಸಮಾಡಲಾರಂಭಿಸಿದಳು. ದಾಮಿನಿಯನ್ನು ನೋಡಿದ ಮೊದಲು, ಎಷ್ಟೋ, ಮನಸ್ಸು ಸುಸ್ಥವಾಗಿದ್ದಿತಾದರೂ, ಒಂದು ಬಾರಿಗೆ ಹೇಗಾದರೂ ಅವ ಳನ್ನು ಕದ್ದುಕೊಂಡು ಬಂದು, ರಹಸ್ಯವಾದ ಈ ಸ್ಥಳದಲ್ಲಿಟ್ಟು ತಾನೊಬ್ಬಳೆ ಮನ ದಣಿಯೆ ತನ್ನ ಆ ದಾಮಿನಿಯನ್ನು ನೋಡಿಬಿಡುವೆನೆಂದು ಅವಳನ್ನು ಒಮ್ಮೆಯೊಮ್ಮೆ ತನ್ನ ಮನಸ್ಸಿನಲ್ಲಿಯೇ ಸ್ಥಿರವಾಡುವಳು. ಆದರೆ, ಉತ್ತರಕ್ಷಣದಲ್ಲಿಯೆ, ಆ ಕಾ ರ್ಯದ ಕರ್ತವ್ಯತೆಯನ್ನು ತಿಳಿದು, ಅದನ್ನು ತನ್ನ ಹೃದಯದಿಂದ ದೂರಮಾಡಿ ಬಿಡುವಳು ಮನಸ್ಸಿನ ಚಾಂಚಲ ಕಾ ವಿಶೇಷವಾಗಿ ಅಲ್ಲಿಗೆ ಹೋಗಿ ಬಂದು ಮಾಡಿದರೆ, ಅಳಿಯನಿಗೆ ಸಂದೇಹವುಂಟಾಗುವುದೆಂದೂ, ಕಳಂಕವು ಸಂಭವಿಸುವು ದೆಂದೂ ಭಯದಿಂದ, ಪುನಃ ಆ ಕಡೆಗೆ ಹೋಗಲೇ ಇಲ್ಲ. ಭಗ್ನಮಂದಿರದಲ್ಲಿ ಒಬ್ಬ ಛೇ ಕುಳಿತು ತನ್ನಷ್ಟಕ್ಕೆ ತಾನೇ ದಾಮಿನಿಯನ್ನು ಆದರಮಾಡುವಳು. ದಾಮಿನಿ ಯನ್ನು ಆವ ಬಗೆಯಾಗಿ ರಮೇಶನು ಆದರಮಾಡುವನೋ, ಆದರ ವಿಚಾರವನ್ನು ಕುಳಿತಲ್ಲಿಯೆ ಭಾವಿಸಿಕೊಳ್ಳುವಳು.