ಪುಟ:Daaminii.pdf/೨೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
15
ದಾಮಿನಿ.

ನಲ್ಲದೆ ಬೇರೆಯಿಲ್ಲ. ನಾನು ಹಾಗೆ ಹೇಳಿದೆನೆ? ಏನೆಂದು ಹೇಳಿದೆನು? ಏನೂ
ಇಲ್ಲ. 'ಫೌಜುದಾರನ ಮಗನಿಗೆ ನನ್ನಿಂದ ಕೇಡು ಸಂಭವಿಸಿತೆಂದರೆ, ಸಂಭವನೀ
ಯವೆ? ಎಂದಿಗೂ ಅಲ್ಲ. ಆಗಳಿನಿಂದಲೂ ನಾನು ಹೇಳುತ್ತಿದ್ದುದು ಒಂದೇ.
ನನ್ನಷ್ಟು ಕೂಗಿದರೂ, ನಾನು ಮಾತನಾಡಿದೆನೆ? ರಮೇಶನು ದೊಡ್ಡವನೋ –
'ಫೌಜುದಾರನ ಮಗನು ದೊಡ್ಡವನೋ??? -ಹೇಳುಹೇಳುತ್ತೆ, ಅವನು ಅಲ್ಲಿಂದ
ಕಾಲ್ಗೆಗೆದನು.
'ಫೌಜುದಾರನ ಮಗನ ಮರಣಸಂವಾದವನ್ನು ತಂದ ಆ ಕೃಷಕನು ಅದಿತಿ
ವಿಶಾರದನನ್ನು ಕುರಿತು- “ಮಹಾಶಯ! ತಮ್ಮ ಸೊಸೆಯವರೂ ಹಿಂದಿರುಗಿ ಮನೆ
ಗೆ ಬರುತ್ತಿದ್ದಾರೆ” ಎಂದನು.
ಕೇಳಿದೊಡನೆಯೆ, ವಿಶಾರದನು ಎಲ್ಲರ ಮೊಗವನ್ನೂ ನೋಡಿದನು. ಆರೂ
ಏನನ್ನೂ ಹೇಳಲಿಲ್ಲ. ಕೊನೆಗೆ, ವಿಶಾರದನು ತಾನಾಗಿಯೇ ಎಲ್ಲರೊಡನೆ “ಆ
ಯ್ಯ! ಈಗ ಮಾಡತಕ್ಕುದೇನು? ನನ್ನ ಹೊಸ ಯವನಪ್ಪರ್ಶಿತೆಯಾಗಿರುವಳು;
ಅಂತಗಳನ್ನು ಪುನಃ ಗ್ರಹಣಮಾಡಬಹುದೇ-ಕೂಡದೇ?” ಎಂದು ಕೇಳಿದನು.
ಅದಕ್ಕೆ ಅವರೆಲ್ಲರೂ--“ಮಹಾಶಯ! ತಾವು ಅದ್ವೀತಿಯ ಪಂಡಿತರು. ಇದರ
ಇತ್ಯರ್ಥವನ್ನು ತಾವೇ ಮಾಡಬೇಕಾಗಿದೆ. - ಎಂದರು. ವಿಶಾರದನು ಕೊಂಚ
ಹೊತ್ತು ಏನನ್ನೋ ಯೋಚಿಸುತ್ತಿದ್ದು, ಕೊನೆಗೆ ಒಳಗೆ ಹೋಗಿ, ಗೃಹಿಣಿಯೊಡ
ನೆ ಈ ವಿಚಾರವನ್ನು ಕುರಿತು ಆಲೋಚಿಸತೊಡಗಿದನು.
ಗೃಹಿಣಿಯು ಹೇಳಿದಳು:- “ಅದೇ ಹುಡುಗಿಯನ್ನು ಪುನಃ ಮನೆಗೆ? ಅದೇ
ನಿಮ್ಮ ಇಷ್ಟವಾದರೆ, ಬೇರೆಯ ಮನೆಮಾಡಿಕೊಂಡು ಸಂಸಾರಮಾಡಬಹುಮ!”
ಅದಿತಿ:- “ಏನು ಹಾಗೆಂದರೆ? ಅವಳಲ್ಲಿ ಏನು ದೋಷ?
ಗೃಹಿಣಿ:-ದೋಷವೆಲ್ಲವೂ ನನ್ನದೇ, ಹಾಗಾದರೆ!?
ಅದಿತಿ;-.-“ಇಲ್ಲ; ನಿನ್ನನ್ನು ದೋಷಿಯೆಂದು ಹೇಳಲಿಲ್ಲ. ಸೊಸೆಯನ್ನು ಪು
ನಃ ಕರೆದುಕೊಳ್ಳುವುದರಿಂದಾದರೂ ಉಂಟಾಗುವ ದೋಷವೇನೆಂದು ಕೇಳಿದೆನು;
ಅಷ್ಟೆ" ಗೃಹಿಣಿ:-“ದೋಷವು ಏನೇ? ದೋಷವು ಎಷ್ಟೋ ಇದೆ. ಮೊದಲು,
ಜನರು ಮುಖಕ್ಕೆ ಕಪ್ಪು ಸುಣ್ಣವನ್ನು ಬರೆಯುವರು. ಆಮೇಲೆ, ಶಿಷ್ಯರು ಗುರುಗ
ಳನ್ನು ತ್ಯಾಗಮಾಡುವರು. ಆಗ ನಮ್ಮ ಮಕ್ಕಳುಮರಿಗಳಿಗೆ ಏನು ಗತಿ???
ಅದಿತಿ:-“ಜನರೇತಕ್ಕೆ ದೂರುವರು? ಶಿಷ್ಯರೇತಕ್ಕೆ ತ್ಯಜಿಸುವರು? ನಮ್ಮ
ಸೊಸೆಯೇನೂ ಕುಲತ್ಯಾಗಿನಿಯಲ್ಲ; ಇಚ್ಚಾಪೂರ್ವಕವಾಗಿ ಹೋದವಳಲ್ಲ; ಹೋದ