ಪುಟ:Daaminii.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

16

ಶ್ರೀಕೃಷ್ಣ ಸೂಕ್ತಿಮುಕ್ತಾವಳಿ.

ವಳೂ, ಆ ಯವನನ ಮನೆಗೆ ಏನೂಹೋಗಲಿಲ್ಲ; ಮಾರ್ಗಮಧ್ಯದಿಂದಲೇ ಹಿಂದಕ್ಕೆ ಬಂದಿದ್ದಾಳೆ.”
ಗೃಹಿಣಿ:- “ಏನು? ಕುಲತ್ಯಾಗಿನಿಯಲ್ಲವೊ? ಇಚ್ಚಾಪೂರ್ವಕವಾಗಿ ಹೋ
ದವಳಲ್ಲವೆಂದು ನಿಮಗೆ ಯಾರು ಹೇಳಿದರು? ಎಲ್ಲ ವಿಚಾರವೂ ನಿಮಗೆ ಬಹುಶಃ ತಿಳಿದಿರಬಹುದು. ಕೆಲವು ದಿವಸಗಳ ವರೆಗೆ ಒಬ್ಬ ಹೆಂಗಸು ಹುಚ್ಚಿಯ ವೇಷದಿಂದ ಆಗಾಗ ಇಲ್ಲಿಗೆ ಬಂದುಹೋಗುತ್ತಿದ್ದಳು. ಒಂದು ದಿನ, ಸಂಜೆಯ ವೇಳೆಯಲ್ಲಿ ನಿಮ್ಮ ಸೊಸೆಯನ್ನು ಕಟ್ಟಿಕೊಂಡು ಓಡಿಹೋಗುವುದರಲ್ಲಿದ್ದಳು; ನಾನು ಹೋಗಿ, ಬಿಡಿಸಿಕೊಂಡು ಬಂದೆನು. ಹಿಂದಿರುಗಿ ಬಂದವಳು ತಲೆದಿಂಬಿನಲ್ಲಿ ಮುದವನ್ನಿಟ್ಟುಕೊಂಡು, ಪುನಃ-ಏನು ಆ ಹುಡುಗಿಯ ಅಳು! ನಾನೇನು ಇದೆಲ್ಲವನ್ನೂ ನಿಮ್ಮೊಡನೆ ಹೇಳಿದೆನೆ? ನಿಮ್ಮ ಆ ಸೊಸೆಯಾವಾಗ ನಾನಿರುವ ಪರ್ಯಂತವೂ ವುನಃ ಓಡಿಹೋಗುವುದು ಅಸಂಭವವೆಂದು ತಿಳಿದಳೋ ಆಗ ಈ ಮಂತ್ರಾಲೋಚನೆಯನ್ನು ಮಾಡಿ, ಜನಗಳನ್ನು ಬರಮಾಡಿಕೊಂಡು ಹೊರಟುಹೋಗಿರುವಳು.”
ಗೃಹಿಣಿಯು ಹೇಳಿದುದನ್ನು ಕೇಳಿ, ಅದಿತಿಗೆ ವಿಸ್ಮಯವುಂಟಾಯಿತು. ಒಂದೆ
ರಡು ಬಾರಿ -ಶಾಸ್ತ್ರವೆಂದಿಗೆ ಸುಳಾದೀತು? ಸ್ತ್ರಿಚರಿತ್ರವು ಯಾರಿಗೆ ಗೊತ್ತು?” - ಎಂದುಕೊಂಡು, ಕೊನೆಗೆ ಗೃಹಿಣಿಯನ್ನು ಕುರಿತು--- ಅಹುದು; ನೀನು ಹೇಳಿ ದುದರಲ್ಲಿ ನನಗೂ ನಂಬುಗೆಯುಂಟಾಗುತ್ತಿದೆ. ಇನ್ನೆಂದಿಗೂ ಅವಳನ್ನು ಮನೆಗೆ ಸೇರಿಸುವುದಿಲ್ಲ.'ಎಂದನು.
ಅದಿತಿಯು ಚಾವಡಿಗೆ ಬಂದು ಸಮುವೇತರಾದ ಎಲ್ಲರೊಡನೆಯೂ ಹೀಗೆಂದು
ಹೇಳಿದನು:--ಅಯ್ಯಾ! ನನಗೆ ಏನೋ ಭ್ರಾಂತಿಯುಂಟಾಗಿತ್ತು. ಇದುವರೆಗೂ ನನ್ನ ಸೊಸೆ ಸಿರ್ದೋಷಿಯೆಂದು ತಿಳಿದಿದ್ದೆನು. ಈಗ ಗೊತ್ತಾಯಿತು; ನಿಬಸ್ಥಿತಿ ಹಾಗೆ ಅಲ್ಲ. ನೀವೆಲ್ಲರೂ ನನ್ನ ಆತ್ಮೀಯರು; ನಿಮ್ಮಲ್ಲಿ ಹೇಳಿಕೊಳ್ಳುವುದಕ್ಕೆ ನಾ ಚುಗೆಯಾದರೂ ಏನು? ನನ್ನ ಸೊಸೆ ಕುಲಟೆ. ಅನೇಕದಿನಗಳಿಂದಲೂ ಮನೆಯ ನ್ನು ಬಿಟ್ಟು ಓಡಿಹೋಗುವುದಕ್ಕೆ ಪ್ರಯತ್ನ ಮಾಡುತ್ತಿದ್ದಳು. ಆದರೆ, ಗೃಹಿಣಿಯ ಸೂಕ್ಷದರ್ಶಿತೆಯಿಂದ ಅವಳ ಪ್ರಯತ್ನವು ಸಫಲವಾಗಲು ಮಾರ್ಗವಿಲ್ಲದೆ ಹೊಡಿ ಯಿತು. ಈಗ ನನ್ನ ಈ ಮನೆಯ ಬಾಗಿಲನ್ನೊಡೆದು ಮಾಡಿದ ಸಾಹಸಕಾರ್ಯ ವೆಲ್ಲವೂ ಆ ನನ್ನ ಸೊಸೆಯ ಆಪ್ತಲೋಚನೆಯ ಕೌಶಲದಿಂದಲೆ ನಡೆದುದಾಗಿದೆ. ಆದು ಹೇಗಾದರೂ ಇರಲಿ; ಅವಳು ನಿರ್ದೋಷಿಯೆಂದು ನಾವು ಅವಳನ್ನು ಗ್ರಹ ಇಮಾಡಿದರೂ, ಈಗ ಆವಳು ಯವನನಿಂದ ಸೃಷ್ಟಳಾಗಿರುವಳೆಂಬ ವಿಷಯದಲ್ಲಿ ಆವ ಸಂದೇಹವೂ ಇಲ್ಲ. ಅತ ಏವ, ಶಾಸ್ತ್ರ ಸಮ್ಮತವೆಂದು ಅವಳನ್ನು ಹೇಗೆ ತಾನೇ ಮನೆಗೆ ಸೇರಿಸುವುದಾದೀತು? ಎಲ್ಲ ಪಾಪಗಳಿಗೂ ಶಾಸ್ತ್ರದಲ್ಲಿ ಪ್ರಾಯಶ್ಚಿತ್ಯವಿದೆ;