ಪುಟ:Daaminii.pdf/೨೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
18
ಶ್ರೀಕೃಷ್ಣ ಸೂಕ್ತಿಮುಕ್ತಾವಳಿ.

ಮಾವನನ್ನು ಕಂಡ ಬಳಿಕ, ಕೇಳುವುದೇನು? ದಾಮಿನಿಗೆ ಇನ್ನು ಸುಮ್ಮನಿರುವುದ ಕೈ ಆಗದೆ ಹೋಯಿತು; ಅವಳು ಅತ್ತು ಬಿಟ್ಟಳು. ಪಾಪ! ಮಹಾಯಾತನೆಯನ್ನೇ ಅನುಭವಿಸಿದ್ದಳು. ಬೇರೆಯ ದಿನವಾಗಿದ್ದರೆ, ಅವಳ ಆ ಅಳುವನ್ನು ನೋಡಿ, ಅದಿತಿ ಯೂ ಅತ್ತು ಬಿಡುತ್ತಿದ್ದನು; ಆದರೆ ಇಂದು ಅವನು ಅಳಲಿಲ್ಲ. ಕಣ್ಣಿನಲ್ಲಿ ನೀರು ಬಂದಿದ್ದು ದೇನೋ ನಿಜ; ಆದರೆ, ತನ್ನ ಗ್ರಹಿಣಿಯನ್ನು ಅಜ್ಞಾತವಾಗಿ ನೋಡಿ, ಅದ ನ್ನು ಸಂವರಣಮಾಡಿದನು. ಆ ಮೇಲೆ, ನಸ್ಯದ ಡಬ್ಬಿಯನ್ನು ಹೊರಗೆ ತೆಗೆದು, ಒಂದೆರಡು ಬಾರಿ ಬೆರಳಿಂದ ಬಡಿದು, ದೊಡ್ಡದೊಂದು ಚಿಟಿಕೆಯ ತುಂಬ ನಸ್ಯವ ನ್ನು ತೆಗೆದುಕೊಂಡು ಬಲವಾಗಿ ಸೇದಿ, ಕಣ್ಣುಗಳನ್ನು ಮುಚ್ಚಿ, ಸೊಸೆಯನ್ನು ಶಿಸಿ- “ವತ್ತೆ! ಎಷ್ಟೋ ಬಗೆಯಾಗಿ ಯೋಚಿಸಿ ನೋಡಿದೆ. ನಿನ್ನನ್ನು ಇನ್ನು ಗ್ರಹಣ ಮಾಡುವುದಕ್ಕೆ ಆಗುವುದಿಲ್ಲ. ಯವನನು ನಿನ್ನನ್ನು ಸ್ಪರ್ಶಮಾಡಿದ್ದಾನೆ ಬಾಹ್ಮಣರ ಮನೆಯಲ್ಲಿ ಇನ್ನು ನಿನಗೆ ಸ್ಪಳವು ದೊರೆಯಲಾರದು, ಇನ್ನೆಲ್ಲಿಗಾದ ರೂ ಹೋಗು!ಎಂದು ಹೇಳಿ, ಬಾಲನ್ನು ಹಾಕಿಕೊಂಡು ಒಳಗೆ ಹೋದನು.
ದಾಮಿನಿಗೆ ಮೊದಲು ಏನೂ ಗೊತ್ತಾಗಲಿಲ್ಲ: ಆ ಮೇಲೆ ಮಾವನ ಮಾ
ತನಾಡಿದ ಪ್ರತಿಯೊಂದು ವಾಕ್ಯವನ್ನೂ ಸ್ಮರಣೆಗೆ ತಂದುಕೊಂಡು, ಅರ್ಥಮ ಕೊಂಡಳು. ಆದರೆ, ಅದನ ಅವಳು ನಂಬಲಾರದೆ ಹೋದಳು. ಭಾವಿಸಿದಳು; -ಇದೆಲ್ಲವೂ ಸ್ವಪ್ನವಾಗಿರಬಹುದೆ?- ಸ್ವಪ್ನವಹುದೋ, ಅಲ್ಲವೋ ಎಂಬುದನ್ನು ಸ್ಥಿರಪಡಿಸುವುದಕ್ಕಾಗಿ ನಾಲ್ಕು ಕಡೆಯ ದೃಷ್ಟಿಸಿ ನೋಡಿದಳು. ಹತ್ತಿರದಲ್ಲಿಯೇ ಒಂದು ಹುಣಿಸೆಳು ಮರ; ಅದರ ಒಣದ ಕೊಂಬಿನ ಮೇಲೆ ಒಂದು ಹದ್ದು ಕುಳಿ ತಿದೆ; ಹಿಂಚಾಗಿ ಸರೋವರದ ನೀಲಜಲದಲ್ಲಿ ಹಂಸಪಕ್ಷಿಗಳು ಈಸಾಡುತ್ತವೆ; ಮೆಟ್ಟಿ ಸಮೀಪದಲ್ಲಿಯೇ ಮುಸುರೆಯ ಪಾತ್ರಗಳು; ಆವ ದಾಸಿ ಅವುಗಳನ್ನು ನೀರಲ್ಲಿ ಸಿಹೋಗಿದ್ದಳೋ ಅವಳ ಚಲಸಿಕ್ತವಾದ ಕಾಲ ಹಟ್ಟೆಗಳೂ ಸೋಪಾನದಲ್ಲಿ ಸ್ಪಷ್ಟ ವಾಗಿ ತೋರುತ್ತವೆ; ಮಾವನು ಮುಚ್ಚಿಕೊಂಡು ಹೋದ ಬಾಗಿಲು ಈಗಲೂ ಮುಚ್ಚಿಯೇ ಇದೆ. ದಾಮಿನಿಯು ಒಂದು ಬಾರಿ ಅದನ್ನು ತಳ್ಳಿ ನೋಡಿದಳು. ಆ ಮೇಲೆ ತನ್ನ ಮೈಯ್ಯನ್ನೂ ಕಣ್ಣುಗಳನ್ನೂ ಸವರಿಕೊಂಡು ಪುನಃ ನೋಡಿದಳು. ಸ್ವಪ್ನವಲ್ಲ; ಎಲ್ಲವೂ ಸತ್ಯ ಘಟನೆ! ಮನೆಯನ್ನು ಪ್ರವೇಶಮಾಡುವದಕ್ಕೆ ನಿಷೇಧ ವಿರುವುದೂ ಸತ್ಯ ಘಟನೆ; ಬ್ರಾಹ್ಮಣರಿಗೆ ಅಗಾಹೈ'ಯೆಂಬ ಆವ ಮಾತನ್ನು ದಾಮಿ ನಿಯು ಕೇಳಿದ್ದಳೊ ಅದೂ ಸ್ವಷ್ಟವಲ್ಲ! ದಾಮಿನಿಯ ಕಣ್ಣುಗಳಲ್ಲಿ ಸೂರ್ಯನು ಅಸ್ತಮಿಸಿಹೋದನು; ಎಲ್ಲವೂ ಅಂಧಕಾರ;- ದಾಮಿನಿಯು ಬಿದ್ದುಬಿಟ್ಟಳು.
ಸ್ವಲ್ಪ ಹೊತ್ತಿನ ಮೇಲೆ ಗ್ರಾಮದಲ್ಲಿಯ ಎಷ್ಟೋ ವೃದ್ಧೆಯರು, ಮಧ್ಯವಯ
ಸೈಯರು, ಯುವತಿಯರು, ಬಾಲಿಕೆಯರು, ಎಲ್ಲರೂ ಬಂದು ದಾಮಿನಿಯ ಸುತ್ತ