ಪುಟ:Daaminii.pdf/೨೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
19
ದಾಮಿನಿ.

ಲೂ 'ಗೇರಾಯಿಸಿ' ಎಂದರು. ದಾಮಿನಿಗೆ ಆಗಲೂ ಮನೋವಿಕಾರವು ಹೋಗಿರ ಲಿಲ್ಲ. ಎಲ್ಲಿ ಬಿದ್ದಿದ್ದಳೋ ಅಲ್ಲಿಯೆ ನತಮುಖಿಯಾಗಿ ಕುಳಿತುಕೊಂಡು, ಅನ್ಯಮ ಸಕ್ಕೆಯಾಗಿ ಒಂದು ಕರಿಕೆಯನ್ನು ಉಗುರಿಂದ ಸೀಳುತ್ತಿದ್ದಳು. ಅನ್ಯಮನಸ್ಕೆಯಾ ಗಿರಲಿ ಸಮನಸ್ಕೆಯೇ ಆಗಿರಲಿ;-- ಅಂತೂ ಅವಳ ಕಣ್ಣುಗಳಿಂದ ವಾರಿಧಾರೆಯು ಪ್ರವಹಿಸುತ್ತಿದ್ದಿತು.
ನೆರೆದವರಲ್ಲಿ ಒಬ್ಬ ವೃದ್ದ ದಾಮಿನಿಯನ್ನು ನೋಡುತ್ತೆ – “ ಅಯಯ್ಯೈ! ಇಂತ
ಹೆ ಅದೃಷ್ಟವನ್ನು ಪಡೆದು, ಭಾರತಭೂಮಿಯಲ್ಲಿ ಹುಟ್ಟಬಹುದೆ? ಆಹಾ! ಎಂತಹ ಅದೃಷ್ಟ! ಎಂತಹ ದೌರ್ಭಾಗ್ಯ!” ಎಂದಳು. ದಾಮಿನಿಯು ಮೆಲ್ಲ ಮೆಲ್ಲನೆ ತಲೆ ಯನ್ನೆತಿ, ಕಾತರಗೊಂಡ ಹರಿಣಯ ದೃಷ್ಟಿಯಿಂದ ಆ ವೃದ್ದೆಯ ಮುಖವನ್ನೇ ನೋಡುತ್ತಿದ್ದಳು. ನಯ ವುಸತಿ ಹೇಳತೊಡಗಿದಳು:--ಅಯ್ಯೋ! ಈ ಮುಖದ ಕಡೆಗೆ ಆ ಮನೆಹಾವವನು ಒಂದು ಬಾರಿಯಾದರೂ ತಿರು! ನೋಡಲಿಲ್ಲವಲ್ಲ? ಧರ್ಮವೂ ದೊಡ್ಡದಾಗಲ್ಲ; ಜಾತಿಯೇ ದೊಡ್ಡದಾಯಿತು! ಅಯೋ: ಹಳವಿಧಾತ ಸಿ: ಹಣೆಯಲ್ಲಿ ಕೆಟ್ಟುದನ್ನು ಒರೆವುದಕ್ಕೆ ನಿನಗೆ ಇನ್ನಾರೂ ದೊರೆಯಲಿಲ್ಲವೆ? ಈ ವ ಯಸ್ಸಿನಲ್ಲಿ ಇಂತಹ ಕಷ್ಟ! ಆಹಾ! ಎಂತಹ ಹುಡುಗಿ ಹುಡುಗಿಯಲ್ಲ; ಸ್ವರ್ಣಲತೆ!?
ಮತ್ತೋಬ್ಬಳು ಮಧ್ಯವಯಸ್ಯೆಯ ದಾಮಿನಿಯ ನಿರೀಕ್ಷಿಸಿ...ಆಹಾ
ನಮ್ಮ ದಾಮಿನಿ.ಚಿರಸಿಯೇ ಆಗಿಹೋದಳು: ವೃದ್ದೆಯಾದ ಆಜ್ಞೆ ದಾಮಿನಿಗೆ ಮದುವೆಯಾದಾಗ ಇಷ್ಟು ದಿನಗಳಿಗೆ ಮೇಲೆ ನಮ್ಮ ದಾಮಿಸನಿಗೆ ಒಂದು ಮಾರ್ಗ ವಾಯಿತು; ಇನ್ನು ನಾನು ನಿಂತೆಯಾಗಿ ಸಾಯಬಲ್ಲೆನು' ಎದ್ದಳು. ಆಯೋ! ಈಗ ಆ ಅಜ್ಜಿ ಒದುಕಿದರೆ? ದಾಮಿನಿಗೆ ಒಂದು ಸ್ಥಾನವಿರುತ್ತಿತ್ತು. ಈಗ ಇನ್ನು ಅವಳಿಗೆ ನಿಲ್ಲುವುದಕ್ಕೆ ಕೂಡ ಒಂದು ಸ್ಥಳವೂ ಉಳಿಯಲಿಲ್ಲ!” ಎಂದಳು. ದಾಮಿನಿಯ ಮೆಯ ನಡುಗಿತು. ಘನವಸನಿಶ್ವಾಸಗಳು ಹೊರಡಲಾರಂಭಿಸಿದುವು. ಕೊನೆಗೆ, ಅವಳು ಆ ಆಯ್ಕೆಯನ್ನು ನೆನೆದು ಅಳತೊಡಗಿದಳು, ತನ್ನ ಆ ಮಾತಾಮಹಿ ಯನ್ನು ಅಭಿಪ್ರಾಯಪೂರ್ವಕವಾಗಿ ಸಂಬೋಧನಮಾಡುತ್ಯ- “ ಅಮ್ಮಾ ಅಮ್ಮಾ? ನನ್ನನ್ನು ಯಾರೊಡನೆ ಬಿಟ್ಟು ಹೊರಟುಹೋದ?" -- ಎಂದು ಉಚ್ಚ ಕಂಠದಿಂದ ರೋದಿಸತೊಡಗಿದಳ.
ಈ ಆಕ್ರಂದನವನ್ನು ಕೇಳಿ, ಅವಳ ಅತ್ತೆಯು ಕೋಪಾವಿಷ್ಟೆಯಾಗಿ, ದೊಡ್ಡ
ಶಬ್ದದಿಂದ ಬಾಗಿಲನ್ನು ತೆರೆದುಕೊಂಡು ಹೊರಗೆ ಬಂದು, “ಚೆನ್ನಾಯಿತೆ? ಎಂತಹ ಹಾಳ ನಡತೆಯೆ ನಿನ್ನದು? ಈ ಅಲ್ಲದ ಹೊತ್ತಿನಲ್ಲಿ ಗೃಹಸ್ಥರ ಮನೆಯ ಬಾಗಿಲಲ್ಲಿ ಕುಳಿತು, ಹಾಳ ಗೋಳಿಗೆ ಆರಂಭವಾಗಡಿದೆ. ಇದರಿಂದ ಗೃಹಸ್ಥರಿಗೆ ಅಮಂಗಳವಾ ಗುವುದೆಂದು ಗೊತ್ತಿಲ್ಲವೆ? ಚಿಃ! ಚಿಃ! ಎಂತಹ ನಾಚುಗೆಗೇಡಿ!”- ಎಂದು ತಿರ