ಪುಟ:Daaminii.pdf/೨೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
20.
ಶ್ರೀಕೃಷ್ಣ ಸೂಕ್ತಿಮುಕ್ತಾವಳಿ.

ಸ್ಕಾರಸೂಚಕವಾದ ಮಾತುಗಳನ್ನಾಡಿದಳು. ಆ ಮೇಲೆ, ಅಲ್ಲಿದ್ದ ನೆರೆಕರೆಯವರನ್ನು ಉದ್ದೇಶಿಸಿ-“ಆಹುದೆ? ಇನ್ನು ನಿಮ್ಮದಾದರೂ ಎಂತಹ ಆಚರಣೆ? ನಿಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು. ಅನ್ಯರ ಮಕ್ಕಳನ್ನು ಆಡಿಸಬಂದಿರಿ! ನಿಮಗೆಲ್ಲರಿಗೂ ಇದೇ ಸಮಯವೆಂದು ತೋರುತ್ತಿದೆ. ಇರಲಿ! ಪರಮೇಶ್ವರನು ಒಂದಲ್ಲದಿದ್ದರೆ ಒಂದು ದಿನ ನನಗೂ ಕೊಟ್ಟಾನು; ನನಗೂ ಒಂದು ದಿನ ಇಂತಹ ಸಮ ಯವು ಸಿಕ್ಕಿತು!- ಎಂದಳು.
ಆರೂ ಆವ ಉತ್ತರವನ್ನೂ ಕೊಡಲಿಲ್ಲ. ಎಲ್ಲರೂ ಒಬ್ಬೊಬ್ಬರಾಗಿ ಹೊರ
ಟುಹೋದರು. ದಾಮಿನಿಯೂ ಕಣ್ಣೀರನ್ನೊರಸಿಕೊಂಡು, ಸಿಶ್ಯಬ್ದವಾಗಿ ಕುಳಿತಳು. ನೆರೆಕರೆಯ ಹೆಂಗಸರೆಲ್ಲರೂ ತಮ್ಮತಮ್ಮ ಮನೆಗೆಲಸಗಳನ್ನು ಮಾಡುವುದಕ್ಕಾಗಿ ಹೊರಟುಹೋದರು. ಅವರಲ್ಲಿ ದಾವಿಸಿಯ ಸಮವಸ್ಕಯಾದವಲೊಬ್ಬಳು ಮಾತ್ರ ಸ್ವಲ್ಪ ದೂರ ಹೋಗಿ ನಿಂತಿದ್ದಳು. ರಮೇಶನ ಮಲತಾಯಿಯ ಮೊದಲಿ ನಂತೆಯೆ ಬಾಗಿಲನ್ನು ಹಾಕಿಕೊಂಡು ಹೊರಟುಹೊದ ಮೇಲೆ, ಅವಳು ದಾಮಿನಿಯ ಹತ್ತಿರ ಒಂದು- “ಒಮ್ಮೆ ಎದ್ದು ಬಾರೆ! ಅಮ್ಮ - ಎಂದಳು. “ನಾನಿನ್ನಲ್ಲಿ ಗೂ ಬರುವದಿಲ್ಲ; ಎಲ್ಲಿಗೆ ಹೋಗುವೆನೆಂದರೂ, ಈಗ ನನಗೆ ಸ್ಥಳವಿಲ್ಲ; ಆರೂ ಇನ್ನು ನನಗೆ ಆಶ್ರಯಕೊಡವರಿಲ್ಲ” ಎಂದು ದಾಮಿನಿಯು ಕಂಬನಿಯುಂಜಿದಳು.
ಸಮವಯಸ್ಕಯು, ಕೇಳಿದಳು:- “ಹಾಗಾದರೆ ಏನು? ಇಲ್ಲಿಯೆ ಇದ್ದು
ಸಾಯುವೆಯಾ ?"
ದಾಮಿನಿಯು ಉತ್ತರಕೊಟ್ಟಳು." ಇಲ್ಲಿಯೆ ಸಾಯುತ್ತೇನೆ. ನನಗೆ ಇ
ನ್ನು ಸ್ಥಳವೆಲ್ಲಿದೆ? ಅವರು ನನ್ನನ್ನು ಇಲ್ಲಿಯೆ ಬಿಟ್ಟು ಹೋಗಿದ್ದಾರೆ; ನಾನಿಲ್ಲಿಯೇ ಇರುತ್ತೆನೆ. ಎಷ್ಟು ದಿನಗಳ ಪರ್ಯಂತವಾಗಿ ಅವರಿಲ್ಲಿಗೆ ಬರುವುದಿಲ್ಲವೋ ಅಷ್ಟು ದಿನಗಳು ಏನಾದರೂ ಮಾಡಿ ಕೂಡಿದರೆ, ಬದುಕಿರುತ್ತೇನೆ. ಅವರನ್ನು ನೋಡದೆಯೆ ಸಾಯುವುದಕ್ಕೆ ಮಾರ್ಗವಿಲ್ಲ?' -
ದಾಮಿನಿಯು ನಿಶ್ಯಬ್ದವಾಗಿ ಅಳತೊಡಗಿದಳು.
ಸಮವಯಸ್ಕೆಯು ಹೇಳಿದಳು:- “ಇನ್ನೆಲ್ಲಿಗೂ ಹೋಗಬೇಡವಮ್ಮ! ಈ
ಮರದಡಿಯಲ್ಲಿಯಾದರೂ ಬಂದು ಕುಳಿತುಕೊ ಬಿಸಿಲು ಸಹಿಸುವುದಕ್ಕಾಗುವುದಿಲ್ಲ. ನನಗೂ ಇನ್ನು ಇಲ್ಲಿರಲಾಗುವುದಿಲ್ಲ.”
ಮೆಲ್ಲ ಮೆಲ್ಲನೆ ದಾಮಿನಿಯು:- ಅಮ್ಮ ಮನೆಗೆ ಹೋಗು. ನಿನಗೆ ಮನೆ
---ಯಿದೆ. ಮನೆಯಲ್ಲಿ ನಿನ್ನನ್ನು ನೋಡದಿದ್ದರೆ, ನಿಮ್ಮ ತಾಯಿಕಳವಳಪಡುವಳು.


* ಹೆಂಗಸರು ಗಂಡಂದಿರ ಹೆಸರನ್ನು ಹೇಳುವುದಿಲ್ಲ.