ಪುಟ:Daaminii.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ದಾಮಿನಿ

23


ಷಷ್ಠಪರಿಚ್ಛೇದ

ಹತ್ತು ಹನ್ನೆರಡು ದಿನಗಳ ಮೇಲೆ, ರಮೇಶನು ಮನೆಗೆ ಬಂದು, ಎಲ್ಲ ವೃತ್ತಾಂತಗಳನ್ನೂ ಕೇಳಿದನು. ತಂದೆಯನ್ನೆನೂ ಎನ್ನಲಿಲ್ಲ; ಮಲತಾಯಿಯ ಮೇಲೆ ದೋಷವನ್ನೂ ಆರೋಪಿಸಲಿಲ್ಲ: ಆರಿಗೂ ಏನನ್ನೂ ಹೇಳದೆ, ಮನೆಯಿಂದ ಹೊರಗೆ ಹೊರಟನು. ಊರೂರುಗಳಲ್ಲಿಯೂ ಕೇರಿಕೇರಿಗಳಲ್ಲಿಯೂ ಆರೇಳು ದಿನಗಳು ಸುಮ್ಮನೆ ಸುತ್ತಿದನು; ಎಲ್ಲಿಯೂ ದಾಮಿನಿಯ ಸಮಾಚಾರವು ಗೊತ್ತಾಗಲಿಲ್ಲ. ಕೊನೆಗೆ, ಒಂದು ದಿನ ಉಷಃಕಾಲದಲ್ಲಿ ವಿಷಣ್ಣ ಭಾವದಿಂದ ಹಿಂದಿರುಗಿ ಮನೆಯ ಕಡೆಗೆ ಬರುತ್ತಿದ್ದನು. ನದೀತೀರದಲ್ಲಿ ಮುರುಕುಮಳಿಗೆಯೊಂದನ್ನು ನೋಡಿ, ಅಲ್ಲಿ ನಿಂದನು. ಆ ಮುರುಕುಮಾಳಿಗೆಯೊಡನೆ ತನ್ನ ಅವಸ್ಥೆಯನ್ನು ಹೋಲಿಸಿನೋಡಿದನು. ನಾಳಿಗೆಯ ಮಾತೆಲ್ಲವೂ ಮುಂದೆ ಬಿದ್ದಿದೆ. ಅಲ್ಲಿಯಲ್ಲಿ ಅಕ್ಷತ, ನಟ, ಮೊದಲಾದ ವೃಕ್ಷಗಳು ತಮ್ಮತಮ್ಮ ಬೇರುಗಳನ್ನು ಗೋಡೆಯ ತುಂಬ ಬಿಟ್ಟುಕೊಂಡು, ಅಹಂಕಾರದೊಡನೆ ಆಂದೋಲನವಾಡುತ್ತಿವೆ. ದುರ್ಬಲವಾದ ಮಳಿಗೆಯು ಏಕಾಕಿಯಾಗಿ ನದೀತೀರದಲ್ಲಿದ್ದುಕೊಂಡು, ಅದೆಲ್ಲವನ್ನೂ ಸಹನಮಾಡುತ್ತಿದೆ.

ರಮೇಶನು ಮುಂಬರಿದು ಭಗ್ನಮಂದಿರದ ಬಾಗಿಲಲ್ಲಿ ಬಂದು ನಿಂದನು. ಬಾಗಿಲು ತೆರೆದಿದ್ದಿತು; ಮನೆಯೊಳಕ್ಕೆ ಪ್ರವೇಶಮಾಡಿದನು. ಅವನು ಸಮೀಪಕ್ಕೆ ಬಂದ ಶಬ್ದವನ್ನು ಕೇಳಿ, ಲೆಕ್ಕವಿಲ್ಲದ ಬಾವುಲಿ ಹಕ್ಕಿಗಳು ಆ ಅಂಧಕಾರದಲ್ಲಿ ಹಾರಾಡತೊಡಗಿದುವು. ನಂತರ ಕ್ರಮಕ್ರಮವಾಗಿ ಅವುಗಳ ಸದ್ದೂ ಅಡಗಿತು, ಗೃಹವು ಭಯಾನಕವಾಗಿಯೂ ಗಂಭೀರವಾಗಿಯೂ ತೋರಬಂದಿತು. ರಮೇಶನು ನಿಂದಲ್ಲಿಯೆ ನಿಂದುಬಿಟ್ಟನು. ಉತ್ತರಕ್ಷಣದಲ್ಲಿಯೇ ಕೋಣೆಯೊಳಗಿಂದ ಮನುಷ್ಯ ಕಂಠದಿಂದ ಹೊರಟ ಮೃದುಶಬ್ದವೊಂದು ಕೇಳಬಂದಿತು. ರಮೇಶನ ಮೈಯೆಲ್ಲವೂ ರೋಮಾಂಚಿತವಾಯ್ತು. ಮೆಲ್ಲ ಮೆಲ್ಲನೆ ಅವಧಾನದಿಂದ, ನಿಶ್ಯಬ್ದವಾಗಿ ಆ ಸ್ವರವು ಕೇಳಬಂದ ಕಡೆಗೆ ಹೋದನು. ಅಸ್ಪಷ್ಟವಾದ ಬೆಳ್ದಿಂಗಳ ಬೆಳಕಿನಲ್ಲಿ ನೋಡಿದನು--ಆವುದೊ ಒಂದು ರೋಗಗ್ರಸ್ತವಾದ ಮನುಷಶರೀರವು ಮೃತ್ಯುಶಯ್ಯೆಯ ಮೇಲೆ ಮಲಗಿಬಿಟ್ಟದೆ.

ರಮೇಶನು ಏನನ್ನೊ ಭಾವಿಸಿಕೊಂಡು ಅಳತೊಡಗಿದನು. ನರದೇಹವು ಜ್ಞಾನಹೀನವಾಗಿರಲಿಲ್ಲ. ಅದರ ಕಂಠಸ್ವರವು ಮಾತ್ರ ಸ್ವಲ್ಪ ಸ್ವಲ್ಪವಾಗಿ ಕಡಮೆ ಯಾಗುತ್ತ ಬರುತ್ತಿದ್ದಿತು. ಕ್ಷೀಣವಾದ ಆ ಕಂಠಸ್ವರದಿಂದ ಈ ಪರಿಯಾಗಿ ಹೇಳುತ್ತಿದ್ದಿತು:- ಅಲ್ವಾ: ಬಂದೆಯ? ಕುಳಿತುಕೊ: ಇನ್ನು ವಿಳಂಬಮಾಡುವುದಿಲ್ಲ. ಕೇವಲ ಒಂದು ಬಾರಿ ಮಾತ್ರ ಆ ನನ್ನ ರಮೇಶನನ್ನು ನೋಡಿ ಬರುತ್ತೇನೆ.” ರಮೇಶನು ಚೇತಾರಮಾಡುತ್ಯ- “ದಾಮಿನಿ! ದಾಮಿನಿ! ನಾನು ಬಂದಿ