ಪುಟ:Duurada Nakshhatra.pdf/೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಅಲ್ಲಿ ನನ್ನ ಕಾದಂಬರಿಯ ಪಾತ್ರಗಳ ಸಾಮೂಹಿಕ ಸ್ವರೂಪವನ್ನು ಕಂಡೆ. ಈ ಅನುಭವ, ನನ್ನ ಪಾತ್ರಗಳು ಹೆಚ್ಚು ಸ್ಫುಟಗೊಳ್ಳಲು ಸಹಾಯಕವಾಯಿತು...

... ಈ ಕಾದಂಬರಿಯಲ್ಲಿ ಒಂದೆಡೆ ಹೀಗಿದೆ:

'ಜಯದೇವನೋ, ಭ್ರಮೆ ಇಟ್ಟು ಕೊಂಡೇ ಬಂದಿದ್ದ; ವಿದ್ಯಾ ಸರಸ್ವತಿಯ ಮಂದಿರಕ್ಕೇ ಬಂದಿದ್ದ, ಅನನ್ಯ ಭಕ್ತಿಯಿಂದ. ಆದರೆ, ಬಾಗಿಲು ಎಂದು ಭಾವಿಸಿ ಒಳನುಗ್ಗಿದಲ್ಲೇ, ಬಂಡೆಕಲ್ಲು ಮೆಲ್ಲನೆ ಮೂಗಿಗೆ ಸೋಂಕಿತ್ತು...'

ಅದು. ಉಚ್ಚ ಆದರ್ಶಗಳನ್ನಿರಿಸಿಕೊಂಡು ಉಪಾಧ್ಯಾಯರಾಗಲು ಹೊರಟ ವಿದ್ಯಾವಂತ ತರುಣನಿಗಾದ ಅನುಭವ.

ಆದರೆ ಆತ ನಿರಾಶಾವಾದಿಯಲ್ಲ. ಒಂದು ವರ್ಷದ ಉಪಾಧ್ಯಾ ಜೀವನದ ಕೊನೆಯಲ್ಲಿ---

ವಾಸ್ತವತೆ ಅಣಕಿಸಿದ್ದರೂ ಜಯದೇವ ಸೋತಿರಲಿಲ್ಲ. ಜೀವನ ಕಟು ಸತ್ಯಗಳನ್ನು ತಿಳಿಸಿಕೊಟ್ಟು ಆತನ ದೃಷ್ಟಿಯನ್ನು ಸ್ವಚ್ಛಪಡಿಸಿತ್ತು.

ಹೃದಯದಲ್ಲಿ ಹುಮ್ಮಸಿತ್ತು: ಬಲವಿತ್ತು ಬಾಹುಗಳಲ್ಲಿ.

ತನ್ನ ಬದುಕಿನ ಗುರಿ ದೂರವಿದ್ದಂತೆ-ಬಲು ದೂರವಿದ್ದಂತೆ--ಆತನಿಗೆ ಕಂಡರೂ 'ಹಾದಿಯನ್ನು ನಾನು ಬಲ್ಲೆ, ಗುರಿ ಸೇರಬಹುದು' ಎಂದು ಆತ್ಮವಿಶ್ವಾಸದಿಂದ ಒಳದನಿ ಉಸುರುತಿತ್ತು.

ಇಂತಹ ಚಿತ್ರಣವನ್ನು ಓದುಗರ ಮುಂದಿರಿಸಿದಾಗ, ಒಳಗೊಂದು ಅಳುಕು ನನ್ನನ್ನು ಬಾಧಿಸುತ್ತಿತ್ತು. ಆ ಅಳುಕಿಗೆ ಕಾರಣವಿಷ್ಟೆ. ವಿಚಾರದ ಅಂಶವೂ ಕಲೆಯ ಅಂಶವೂ ಸೃಷ್ಟಿ ಸಾಹಿತ್ಯದಲ್ಲಿ ಸರಿಸಮಾನವಾಗಿರಬೇಕೆಂಬ-ಸಮರಸಗೊಂಡಿರಬೇಕೆಂಬ-ಅಭಿಪ್ರಾಯ ಕನ್ನಡದಲ್ಲಿ ತೀರಾ ಇತ್ತೀಚಿನದು. ನಮ್ಮಲ್ಲಿ ವಿಪುಲವಾಗಿ ಸೃಷ್ಟಿಯಾಗುತ್ತಿರುವುದು'ಮನೋರಂಜನೆಯೊಂದೇ ಗುರಿಯಾಗುಳ್ಳ ಸಾಹಿತ್ಯ. ಓದುಗರ ಅಭಿರುಚಿ ಹೆಚ್ಚಾಗಿ ರೂಪುಗೊಂಡಿರುವುದೂ ಆ ದಿಕ್ಕಿನಲ್ಲೇ. ಹೀಗಿರುತ್ತ, ಸಿಹಿ ಎಂದು ನಾಲಗೆ