ಪುಟ:Duurada Nakshhatra.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ನಮ್ಮನೇ ಮಹಡಿ ಮೇಲೆ ಒಂದು ರೂಮಿದೆ ಸಾರ್, ಕಕ್ಕಸು-. ಸಾನಕ್ಕೆಲ್ಲ ಪಕ್ಕದಿಂದ್ಲೆ ಇಳಿದ್ಬಿಟ್ಟು ಹೋಗ್ಬಹುದು. ಬರ್ತೀರಾ ಸಾರ್?”

"ಬೇರೆ ಯಾರಿರ್ತಾರೆ ಅಲ್ಲಿ?"

“ಯಾರೂ ಇಲ್ಲ ಸಾರ್, ಮಹಡೀನ ಗೋಡೌನ್ ಮಾಡಿದ್ದಾರೆ.”

ಆ ಹುಡುಗನ ತಂದೆ ಜಯರಾಮಶೆಟ್ಟರು ಆ ಊರಿನ ಪ್ರಮುಖ ವ್ಯಾಪಾರಿಯಾಗಿದ್ದರು. ಅವರು ಶ್ರೀಮಂತರೆಂಬುದು ಜಯದೇವನಿಗೆ ತಿಳಿದಿತ್ತು, ಆ ವಾತಾವರಣ ತನಗೆ ಸರಿಹೋಗುವುದೋ ಇಲ್ಲವೋ ಎಂದು ಆತ ಶಂಕಿಸಿದ.

“ಹೋಟೆಲಿಗೆ ದೂರವಾಗುತ್ತೇನೋ ?”

“ಇಲ್ಲ! ಆನಂದವಿಲಾಸದ ಬೋರ್ಡು ನಮ್ಮನೆಗೇ ಕಾಣಿಸುತ್ತೆ.”

“ಎಷ್ಟಪ್ಪಾ ಬಾಡಿಗೆ?”

ಹುಡುಗ ಹೇಳಲು ಸಂಕೋಚಪಟ್ಟ, ಅದು ಜಾಸ್ತಿಯೇ ಇರಬಹುದೆಂಬ ಜಯದೇವನ ಸಂದೇಹ ಬಲವಾಯಿತು.

“ಎಷ್ಟು ಹೇಳು?

“ಬಾಡಿಗೆ ಇಲ್ಲ ಸಾರ್”

“ಅಂದ್ರೆ?”

“ನಮ್ಮಪ್ಪ ಹೇಳಿದ್ರು ಸಾರ್ -ಮೇಷ್ಟ್ರಿಂದ ಬಾಡಿಗೆ ತಗೋಬಾರ್ದೂಂತ."

“ಅದು ಹ್ಯಾಗಾಗುತ್ತೆ?

“ನನಗೆ ದಿನಾ ಸ್ವಲ್ಪ ಹೊತ್ತು ಪಾಠ ಹೇಳ್ಕೊಟ್ಬಿಡಿ ಸಾರ್”

ಒಳ್ಳೆಯ ಯೋಜನೆ! ನಾಗರಾಜನ ತಂದೆಯ ತೂಗಿ-ಅಳೆದು. ನೋಡುವ ಸಾಮರ್ಥ್ಯಕ್ಕೆ ಜಯದೇವ ತಲೆದೂಗಿದ. -

“ನೀವು ಒಪ್ಪಿದೀರಿ ಅಂತ ಹೇಳ್ಲೆ ಸಾರ್ ಮನೇಲಿ?”

ಜಯದೇವ ಮುಗುಳ್ನಕ್ಕು ಕೊಠಡಿ ನೋಡದೆಯೇ, “ಹೂಂ” ಎಂದ.

ಆ ಕೊಠಡಿ ಚೆನ್ನಾಗಿಯೇ ಇತ್ತು, ಗಾಳಿ ಬೆಳಕು ಯಥೇಷ್ಟವಾಗಿ. ಓಡಾಡುವ ಹಾಗಿತ್ತು ವಾತಾವರಣ, ಜಯರಾಮಶೆಟ್ಟರು ಉಪಾಧ್ಯಾಯರ ಅನುಕೂಲಕ್ಕೆಂದು ಒಂದು ಆರಾಮ ಕುರ್ಚಿಯನ್ನೂ ಹುಲ್ಲಿನ ಚಾಪೆಯನ್ನೂ ಕೊಟ್ಟರು. ಕೊಠಡಿಯ ಗೋಡೆಯ ಮೇಲೆ ಶೆಟ್ಟರ ಸಂಸಾರಕ್ಕೆ ಸಂಬಂಧಿ