ಪುಟ:Duurada Nakshhatra.pdf/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಕಾವ್ಯ ಪಕ್ಷಪಾತಿಯಾದ ಸನ್ಮಿತ್ರ ಜೆ. ಕೆ. ಪ್ರಾಣೇಶಾಚಾರ್ಯರ ನೂತನ ಉದ್ಯಮವಾದ ಸಾಧನಾ ಪ್ರಕಾಶನದ ಮೂಲಕ 'ನವೋದಯ' ಬೆಳಕು ಕಂಡಿದೆ. ಅದರ ಜೊತೆಯಲ್ಲೇ, ಮೊದಲ ಆವೃತ್ತಿ ಎಂದೋ ಮುಗಿದಿದ್ದ 'ದೂರದ ನಕ್ಷತ್ರ'ವನ್ನೂ ಓದುಗರ ಅನುಕೂಲಕ್ಕೆಂದು ಅವರು ಪುನಃ ಪ್ರಕಟಿಸುತ್ತಿದ್ದಾರೆ. ಹೀಗೆ, ಈ ಎರಡು ಕೃತಿಗಳೂ ವಿಷಯದಲ್ಲಿ ಆಸಕ್ತಿ ವ್ಯಕ್ತಪಡಿಸಿರುವ ಜೆ. ಕೆ. ಪ್ರಾಣೇಶಾಚಾರ್ಯರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಬೇಕಾದುದು ನನ್ನ ಕರ್ತವ್ಯ.

ನಿರಂಜನಸೆಪ್ಟೆಂಬರ್ ೧೯೫೬
ಗೋಕುಲ ವಿಸ್ತರಣ
ವಾಣಿವಿಲಾಸ ಮೊಹಲ್ಲಾ
ಮೈಸೂರು