ಪುಟ:Duurada Nakshhatra.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ ಪರೋಪಕಾರದಿಂದ ಅವರಿಗೂ ಲಾಭವಿದ್ದುದು ಸ್ಪಷ್ಟವಾಗಿತ್ತು.

ವಿದ್ಯಾರ್ಥಿಗಳಿಗಲ್ಲದೇ ಹೋದರೂ ವೆಂಕಟರಾಯರು ಬೇಗನೆ ಊರಿನವರಿಗೆ ಬೇಕಾದವರಾದರು. ಬ್ರಾಹ್ಮಣರು ಕೆಲವರ ದೃಷ್ಟಿಯಲ್ಲಿ ಅವರು, 'ಸಮರ್ಥನಾದ ಸ್ವಜಾತಿ ಬಾಂಧವ' ಬೇರೆ ಹಲವರ ದೃಷ್ಟಿಯಲ್ಲಿ– ಬಾಹ್ಮಣನಾದರೂ ಒಳ್ಳೆ ನಂಬಿಗಸ್ಠ' ಹೀಗೆಲ್ಲಾ ಒಂದೆಳೆ ಹಗ್ಗದ ಮೇಲೆ ಒಂಟಿ ಕಾಲಿನಲ್ಲಿ ನಿಂತು ಡೊಂಬರಾಟವಾಡಲು ಅಸಾಮಾನ್ಯವಾದ. ಬುದ್ಧಿವಂತಿಕೆ ಅಗತ್ಯವಿತ್ತು ಅದನ್ನು ಸಾಧಿಸಿಕೊಂಡಿದ್ದ ವೆಂಕಟರಾಯರಿಗೆ ಜೀವನ ನಿರ್ವಹಣ ದೊಡ್ಡ ಸಮಸ್ಯೆಯಾಗಿರಲಿಲ್ಲ.

ತರಗತಿಗಳಲ್ಲಿ ದಡ್ಡರಾಗಿದ್ದ ಹುಡುಗರೇನಾದರೂ ಶ್ರೀಮಂತರಾಗಿದ್ದರೆ ಅವರ ಮನೆಗಳಿಂದ ತರಕಾರಿ ಹಣ್ಣುಹಂಪಲು ಅದು-ಇದು, ಬರುತಿದ್ದುವು.

ಅಷ್ಟರಲ್ಲೆ ಚಿಕ್ಕ! ಪರೀಕ್ಷೆ ಹತ್ತಿರ ಬಂತು. ಒಮ್ಮೆಲೆ ಮುಖ್ಯೋಪಾಧ್ಯಾಯರು, ರಂಗರಾಯರ ಆಡಳಿತದ ಕಾರಣದಿಂದಾಗಿ ವಿದ್ಯಾರ್ಥಿಗಳ ಮಟ್ಟ ಏನೇನೂ ತೃಪ್ತಿಕರವಾಗಿಲ್ಲ ಎಂಬ ಅಂಶವನ್ನು ಕಂಡು ಹಿಡಿದರು. ಅವರ ಮನಸ್ಸಿನಲ್ಲಿ ಏನಿತ್ತೆಂಬುದು ಮೊದಮೊದಲು ಜಯದೇವನಿಗೆ ಗೊತ್ತಾ ಗಲಿಲ್ಲ, ನಂಜುಂಡಯ್ಯನೊಬ್ಬನೇ ತಮ್ಮೊಳಗೆ ನಕ್ಕು ಸಿಗರೇಟು ಸುಟ್ಟರು.

“ನಮ್ಮನೇಲಿ ಮೂರನೆ ಮತ್ತು ನಾಲ್ಕನೆ ತರಗತಿ ಹುಡುಗರಿಗೆ ಎರಡು ಸ್ಪೆಷಲ್ ಕೋಚಿಂಗ್ ಕ್ಲಾಸು ಇಟ್ಟುಕೊಳ್ಳೋಣಾಂತ ಮಾಡಿದೀನಿ” ಎಂದು ವೆಂಕಟರಾಯರು ಕೆಲವು ದಿನಗಳಲ್ಲಿ ಆಫೀಸು ಕೊಠಡಿಯಲ್ಲಿ ಜಾಹೀರು ಮಾಡಿದರು.

ಹೊಗೆಯುಗುಳಿ ನಸು ನಕ್ಕರು ನಂಜುಂಡಯ್ಯ;

“ನಿಮ್ಮ ಸಹನೆ ಮೆಚ್ಚಬೇಕಾದದ್ದೆ. ಖಂಡಿತವಾಗಿ ಮಾಡಿ ಸಾರ್. ನನಗೆ ಮಾತ್ರ, ಪ್ರತ್ಯೇಕ ಪಾಠ ಹೇಳ್ಕೊಡೋದೂಂದ್ರೆ ತಲೆನೋವು.”

“ಮೊದಲ್ನೆ ಎರಡ್ನೆ ತರಗತಿ ಹುಡುಗರು ಯಾರಾದ್ರೂ ಬೇಕು ಅಂದ್ರೆ ನೀವೂ ಒಂದೆರಡು ಪಾಠ ಇಟ್ಟೊಳ್ಳಿ ಜಯದೇವ.”

ಜಯದೇವ ತಲೆದೂಗಿ ಸುಮ್ಮನಾದ. ಇದು ವಿಶೇಷ ಸಂಪಾದನೆಯ ಮಾರ್ಗವೆಂಬುದು ಅವನಿಗೆ ತಿಳಿಯಿತು. ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕು ದೊರೆಯಬೇಕಾದರೆ, ಇಲ್ಲವೆ ತೇರ್ಗಡೆಯಾದರೂ ಆಗಬೇಕಾದರೆ, ಅ ಉಪಾಧ್ಯಾಯರಿಂದಲೇ ಪಾಠ ಹೇಳಿಸಿಕೊಳ್ಳಬೇಕು. .. ಹುಡುಗರು