ಪುಟ:Duurada Nakshhatra.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಸೆ ಹುಟ್ಟಿಸುವ ಸಿಹಿ ಮಾತುಗಳು.

“ನೀವು ಪಾಠ ಹೇಳೋದನ್ನ ನೋಡಿದೆ. ಸಂತೋಷವಾಯು, ನಿಮ್ಮಂಥ ಒಂದು ಸಾವಿರ ಜನ ಇದ್ರೆ ಸಂಸ್ಥಾನದಲ್ಲಿ ನಾವು ನಮ್ಮ ಕ್ಷೇತ್ರ ದಲ್ಲಿ ಏನು ಬೇಕಾದ್ರೂ ಸಾಧಿಸ್ಟಹುದು.”

ಉತ್ತರ ಕೊಡುವುದಾಗಲಿಲ್ಲ ಜಯದೇವನಿಂದ.

“ಹಾಗಿದ್ದಾರೆ ನಿಮ್ಮ ಹೆಡ್ಮೇಷ್ಟ್ರು?"

"............."

“ಅರ್ಥವಾಯ್ತು, ನಾನೂ ಹಾಗೇ ಊಹಿಸ್ದೆ, ಹಿಂದೆ ರಂಗರಾವ್ ಅಂತ ಇದ್ರಲ್ವೆ?”

ಒಮ್ಮೆಲೆ ಜಯದೇವನ ನಾಲಿಗೆ ಚಲಿಸಿತು.

“ಹೌದು ಸಾರ್, ತುಂಬಾ ಒಳ್ಳೆಯವರು–ಸಮರ್ಥ, ಅವರಿಗೆ ಅನ್ಯಾಯವಾಯ್ತು.!”

ರಂಗರಾಯರ ವಿಷಯವಾಗಿ ತಮ್ಮ ಅಭಿಪ್ರಾಯವೇನಿರಬಹುದೆಂಬುದನ್ನು ತಿಳಿಯದೆಯೇ ಜಯದೇವ ಧೈರ್ಯವಾಗಿ ಹಾಗೆ ಹೇಳಿದ್ದನ್ನು ಕಂಡು ಇನ್ಸಪೆಕ್ಟರರಿಗೆ ಸಂತೋಷವಾಯಿತು.

ಅವರು ಸ್ವರ ತಗ್ಗಿಸಿ ಅಂದರು :

“ಹುಂ.. ಈ ವಿಷಯ ನಮ್ಮನಮ್ಮೊಳಗೇ ಇರ್ಲಿ ಜಯದೇವ್, ರಂಗ ರಾಯರಿಗೆ ಅನ್ಯಾಯವಾಗಿದೇಂತ ನನಗೆ ಗೊತ್ತಿದೆ. ಆದರೆ ನಾವು ಯಾರೂ ಏನೂ ಮಾಡೋದಾಗಲಿಲ್ಲ, ಮೇಲಿಂದ ಅನುಜ್ಞೆ ಬಂತು.”

“ಇದನ್ನೆಲ್ಲ ನೋಡುವಾಗ ನಿರಾಶೆಯಾಗ್ರದೆ, ಅಲ್ವೆ?"

“ಹೌದು ಸಾರ್."

“ಏನೇ ಆಗ್ಲಿ, ಉಪಾಧ್ಯಾಯ ವೃತ್ತೀನ ಬಿಡೋ ಯೋಚ್ನೆ ಮಾಡ್ಬೇಡಿ. ಹಳಬರಲ್ಲೂ ಅನುಭವಿಗಳು ಒಳ್ಳೆಯೋರು ಇದಾರೆ. ಆದರೆ ಕೆಲವರಂತೂ ಡೊಂಕಾಗಿ ಬೆಳೆದು ಕೊರಡಾಗಿದಾರೆ. Fit for fuel. ಉರುವಲು ಸೌದೆಗೇ ಸರಿ.. ಕಟುವಾಗಿ ಅಂದೆ ಅಂತ ತಪ್ಪು ತಿಳಿಬೇಡಿ. ನನಗೆ ಭೇಜಾರಾಗಿದೆ. ಮುಂದಿನ ಆಸೆ ಏನಾದರೂ ಇದ್ರೆ ಅದು ನಿಮ್ಮಂಥ ಯುವ