ಪುಟ:Duurada Nakshhatra.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೂರದ ನಕ್ಷತ್ರ

೧೫೮

ನೀನು ಬಡವ, ನಿನ್ನ ಸಂಪಾದನೆ ಕಡಮೆ–ಎಂದೂ ಸೂಚ್ಯವಾಗಿ ಆ ಮಾತುಗಳು ಹೇಳುತಿದ್ದುವು.

“ಆಗ್ಲಿ ಬರ್ತೀನಿ !”

ಹೋಟೆಲಿನವನಿಗೆ ಆಶ್ಚರ್ಯವಾದರೂ ಅದನ್ನಾತ ತೋರಿಸಿ ಕೊಡಲಿಲ್ಲ.

“ಯಾವತ್ತು ಬರ್ತೀರಿ?”

“ಇವತ್ತೇ--ಸಾಯಂಕಾಲ.”

ಸಂಬಳದ ಖರ್ಚು ಕಳೆದು ಉಳಿತಾಯವಾಗದಿದ್ದರೂ ಅಷ್ಟೆ, ಕೊಠಡಿ ಬದಲಾಯಿಸುವುದೇ ಸರಿ ಎಂದುಕೊಂಡ.

ಜಯರಾಮಶೆಟ್ಟರ ಮನೆಯಲ್ಲಿ ಪ್ರಶ್ನೆಗಳಿಗೆಲ್ಲ ಜಯದೇವ ಕೊಟ್ಟ! ಉತ್ತರ ಒಂದೇ :

“ಅಲ್ಲೇ ಸವಿಯೋಪವಾಗಿದ್ರೆ ನನಗೆ ಅನುಕೂಲವಾಗುತ್ತೆ.”

ನಾಗರಾಜ, ಏನನ್ನೊ ಕಳೆದುಕೊಂಡವನ ಹಾಗೆ ಹೇಳಿದ:

“ಹಾಗಾದರೆ, ಪಾಠ - ಸಾರ್ ?"

“ಬೆಳಗ್ಗೆ ಶಾಲೆಗೆ ಹೋಗ್ತಾ ಅಲ್ಲಿಗೇ ಬಂದುಬಿಡು ನಾಗರಾಜ.”

ಶ್ಯಾಮಲಾ ನಗಲಿಲ್ಲ, ಹೊರಗೆ ಮುಖ ತೋರಿಸಲಿಲ್ಲ, ಆಕೆಗೆ ದುಃಖ ವಾಯಿತು– ಆದರೆ ತನ್ನ ಮನಸ್ಸಿನ ಹೊಯ್ದಾಟ ನಿಲ್ಲುವುದಲ್ಲಾ ಎಂದು ಸಮಾಧಾನವೂ ಆಯಿತು. 'ಪಾರಾದೆ' ಎಂದುಕೊಂಡ ಜಯದೇವ, ಇನ್ನೊಬ್ಬರ ಭಾವನೆಗಳನ್ನು ತಿಳಿಯುವ ಗೋಜಿಗೆ ಹೋಗಲಿಲ್ಲ.

ಜಯದೇವ ಕೊಠಡಿ ಬದಲಾಯಿಸಿದ್ದು ತಿಳಿದಾಗ ವೆಂಕಟರಾಯರು ಉತ್ಸುಕರಾದರು; ನಂಜುಂಡಯ್ಯ ಹುಬ್ಬು ಮೇಲೇರಿಸಿ ಯೋಚಿಸಲೆತ್ನಿಸಿದರು.

“ಏನು ಜಯದೇವ ? ಶೆಟ್ಟರ ಮನೇಲಿ ಅನುಕೂಲವಾರ್ಲಿಲ್ವೊ?"

ಮುಖ್ಯೋಪಾಧ್ಯಾಯರ ಆ ಪ್ರಶ್ನೆಯಲ್ಲಿ ಅಣಕವಿತ್ತು, ಜಯದೇವ ಕಟ್ಟನಿಟ್ಟಾಗಿ ಹೇಳಿದ: -

“ಇಲ್ಲ ಸಾರ್, ಅನುಕೂಲವಾಗಿರ್ಲಿಲ್ಲ.”

ವೆಂಕಟರಾಯರಿಗೆ ಮುಖಭಂಗವಾದ ಹಾಗಾಯಿತು. ಜಯದೇವ ನಿಲ್ಲದೆ ಇದ್ದಾಗ ನಂಜುಂಡಯ್ಯನೊಡನೆ ಅವರು ಆಪ್ತಾಲೋಚನೆ