ಪುಟ:Duurada Nakshhatra.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೬

ದೂರದ ನಕ್ಷತ್ರ

ನಡೆಸಿದರು. ಜಯರಾಮಶೆಟ್ಟರ ಮನೆಯಲ್ಲಿ ಪತಿಗೃಹದಿಂದ ಬಂದು ಕುಳಿತಿದ್ದ ಯುವತಿಯೊಬ್ಬಳು ಇದ್ದಳೆಂಬ ವಿಷಯವೂ ವೆಂಕಟರಾಯರಿಗೆ ತಿಳಿದಿತ್ತು!

ಅವರು ಜಯರಾವುಶೆಟ್ಟರಲ್ಲಿ ಹೋದರು. ಶೆಟ್ಟರು ಮಾತನಾಡಿದ್ದು ತಮ್ಮ ಮಗನ ವಿಷಯವೇ.

“ನೀವೇ ಏನಾದ್ರೂ ಪಾಠ ಹೋಳ್ಕೊಡಾಕೆ ಆಗ್ತದಾ ಸ್ವಾಮಿ ?”

“ಅದಕ್ಕೇನ್ರೀ..... ಬೆಳಗ್ಗೆ ಏಳರಿಂದ ಎಂಟರವರೆಗೆ ಕಳಿಸ್ಕೊಡಿ. ಸ್ಪೆಷಲಾಗಿ ಪಾಠ ಹೊಳೋಣ.”

ಮುಖ್ಯೋಪಾಧ್ಯಾಯರೇ ಜಯದೇವನ ಮಾತೆತ್ತಿದರು.

“ಒಳ್ಳೆಯವ್ರೇ.. ಆದರೆ ಸ್ವಲ್ಪ ವಿಚಿತ್ರ–ಇನ್ನೂ ಹುಡುಗ” ಎಂದಷ್ಟೇ ಶೆಟ್ಟರು ಹೇಳಿದರು. ವೆಂಕಟರಾಯರಿಗೆ ನಿರಾಶೆಯಾಯಿತು: ಆದರೂ ಜಯದೇವ ಜವಾಬ್ದಾರಿ ಇಲ್ಲದ ಮನುಷ್ಯ–ಆತನ ನಡತೆ ಚೆನಾಗಿಲ್ಲ? ಎಂದು ಅವರು ತೀರ್ಮಾನಿಸಿದರು.

“ನಿಮಗೆ ಅವರಿಂದೇನಾದ್ರೂ ತೊಂದರೆಯಾಗಿದ್ರೆ ಹೇಳಿ, ವಿವೇಕ ಹೇಳ್ತೀನಿ” ಎಂದೂ ವೆಂಕಟರಾಯರು ಶೆಟ್ಟರಿಗೆ ಹೇಳಿದರು.

“ಛೆ! ಛೆ! ಆತನಿಂದ ತೊಂದರೆ ಆಗೋದಂದ್ರೇನು?” ಎಂದು ಶೆಟ್ಟರು ಆ ವಿಷಯವನ್ನೇ ತಳ್ಳಿಹಾಕಿಬಿಟ್ಟರು.

ಹೀಗಿದ್ದರೂ, ಮುಖ್ಯೋಪಾಧ್ಯಾಯರು ಮಾತ್ರ ಜಯದೇವನ ನಡತೆಯ ಬಗೆಗೆ ತಮ್ಮ ಅಭಿಪಾಯವನ್ನು ಬದಲಿಸಲಿಲ್ಲ,

ಮುಖ್ಯೋಪಾಧ್ಯಾಯರಿಗೆ ಸಂತೋಷವಾಗಿ ಜಯದೇವನಿಗೆ ಬೇಸರ ಬರುವಂತಹ ಬೇರೊಂದು ಪ್ರಕರಣ ನಡೆಯಿತು. ಶ್ಯಾಮಲೆ ಮತ್ತು ತನಗೆ ಸಂಬಂಧಿಸಿ ಕೆಟ್ಟ ನಾಲಿಗೆಗಳು ಏನನಾದರೂ ಅನ್ನಬಹುದೆಂದು ಜಯದೇವ ನಿರೀಕ್ಷಿಸಿದ್ದ, ಆದರೆ ಹಾಗೇನೂ ಆಗಲಿಲ್ಲ, ಅದರ ಬದಲು ವಿದ್ಯಾರ್ಥಿನಿ ಇಂದಿರೆ ಮತ್ತು ಆತನ ವಿಷಯದಲ್ಲಿ ಅಲ್ಲಸಲ್ಲದ ಮಾತುಗಳು ಹೊರಟುವು.

ಶಾಲೆಯ ಗೋಡೆಯ ಮೇಲೆ ಎದುರು ಭಾಗದಲ್ಲೇ ಯಾರೋ ಸುಣ್ಣದ ಕಡ್ಡಿಯಲ್ಲಿ ಬರೆದಿದ್ದರು:

“ಸಂಧಿ ವಿಂಗಡಿಸಿ! ಜಯದೇವೇಂದ್ರ--ಜಯದೇವ + ಇಂದಿರಾ !"

ಜಯದೇವನಿಗೆ ರೋಸಿಹೋಯಿತು. ಆದರೆ ರೇಗಾಡಿ ಪ್ರಯೋಜನ ವಿಲ್ಲವೆಂದು ಆತ ಸುಮ್ಮನಾದ. ಇಂದಿರಾ ತರಗತಿಯಲ್ಲಿ ತಲೆತಗ್ಗಿಸಿ