ಪುಟ:Duurada Nakshhatra.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೭

ದೂರದ ನಕ್ಷತ್ರ

ಕುಳಿತಳು. ಶಾಲೆಯ ಜವಾನ ಗೋಡೆಯನ್ನೊರೆಸಿದ.

ಈ ಸಲ ಮಾತ್ರ ವೆಂಕಟರಾಯರು ಸುಮ್ಮನಿರಲಿಲ್ಲ. ಇದು ಯಾರೋ ಕೆಟ್ಟ ಹುಡುಗರ ಕಿಡಿಗೇಡಿತನವೆಂಬುದು ಅವರಿಗೆ ಗೊತ್ತಿದ್ದರೂ ಜಯದೇವನಿಗೆ ಇದಿರಾಗಿ ಉಪಯೋಗಿಸಿಕೊಳ್ಳಲು ಸಮಯಕ್ಕೆ ಸರಿಯಾಗಿ ಅದು ಒದಗಿ ಬಂತು.

ನ್ಯಾಯಾಧೀಶರು ಆರೋಪಿಯನ್ನು ತಮ್ಮ ಕೊಠಡಿಗೆ ಕರೆದರು.

“ನಿಮ್ಮಿಂದ ನನಗೆ ವಿವರಣೆ ಬೇಕು.”

ಜಯದೇವ, ಮೈ ಉರಿಯುತ್ತಿದ್ದರೂ ತಾಳ್ಮೆಯಿಂದಿರಲು ಯತ್ನಿಸಿ ನಿಶ್ಚಲ ಮುಖದಿಂದ ಅವರೆದುರು ಕುಳಿತ. ನೆಟ್ಟ ನೋಟದಿಂದ ಅವರನ್ನೆ ನೋಡಿದ. •

“ಸುಮ್ಮೆ ಕೂತಿದೀರಲ್ಲಾ!”

“ಯಾವುದಕ್ಕೆ ವಿವರಣೆ?

“ನೋಡಿಲ್ವೇನು? ಗೋಡೆಮೇಲೆ ಬರೆದಿದಾರೆ."

“ನಾನು ಬರನು ಬರದ್ನೆ ಅದನ್ನ?"

“ವಕ್ರವಾಗಿ ಮಾತಾಡ್ಬೇಡಿ, ನನಗೆ ಸರಳ ಉತ್ತರ ಬೇಕು.”

ಜಯದೇವ ಎದ್ದು ನಿಂತ:

“ಸರಳವಾಗಿ ಹೇಳ್ಲೆ ? ನೀವು ತುಚ್ಛವಾಗಿ ವರ್ತಿಸಿದೀರಿ. ಇದೇ ನನ್ನ ಉತ್ತರ !”

ಅಷ್ಟು ಹೇಳಿ ಆತ ಹೊರಟು ಹೋದ. ಸ್ವಲ್ಪ ಹೊತ್ತು ದಿಗ್ಭ್ರಾಂತರಾಗಿ ಕುಳಿತ ವೆಂಕಟರಾಯರು ನಂಜುಂಡಯ್ಯರನ್ನು ಕರೆದು ರೇಗಾಡಿದರು. ತಮಗೆ ಅವಮಾನವಾಯಿತೆಂದರು. ಆ ಜಯದೇವ ಕೈಎತ್ತಿ ಹೊಡೆಯಲು ಬಂದನೆಂದರು. ಆತನನ್ನು ಕೆಲಸದಿಂದ ವಜಾ ಮಾಡಿಸ್ತೀನಿ ಎಂದು ಆರ್ಭಟಿಸಿದರು. ವಿದ್ಯಾಧಿಕಾರಿಯ ಶಾಲಾ ಸಂದರ್ಶನದ ದಿನದಿಂದ ಬಲಗೊಂಡು ವಾರ್ಷಿಕೋತ್ಸವದ ಕಾಲದಲ್ಲಿ ಪ್ರಬಲವಾದ, ದ್ವೇಷಾಸೂಯೆಯ ಬೆಂಕಿ ವೆಂಕಟರಾಯರ ಹೃದಯದಲ್ಲಿ ಭುಗ್ ಭುಗಿಲೆಂದು ಹತ್ತಿ ಕೊಂಡಿತು.

ವೆಂಕಟರಾಯರು ಜಯದೇವನ ವಿರುದ್ಧವಾಗಿ ಮೇಲಧಿಕಾರಿಗಳಿಗೆ ಕಳುಹಲೆಂದು ವರದಿ ಸಿದ್ಧಗೊಳಿಸಲು ಒಂದು ವಾರ ಹಿಡಿಯಿತು, ಆದರೆ ಜಯದೇವ ಅಷ್ಟರಲ್ಲೆ ಖಾಸಗಿಯಾಗಿ ರಾಧಾಕೃಷ್ಣಯ್ಯನವರಿಗೆ ಬರೆದ.