ಪುಟ:Duurada Nakshhatra.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೮

ದೂರದ ನಕ್ಷತ್ರ

“ಹೀಗೆ ಬರೆಯುವುದು ತಪ್ಪೆಂದು ನನಗೆ ಗೊತ್ತಿದೆ; ಆದರೂ ಕ್ಷಮಿಸಿ,” ಎಂದು ಹೇಳಿ, ನಡೆದುದೆಲ್ಲವನ್ನೂ ಆತ ವಿವರಿಸಿದ.

ಆ ಕಾಗದದಲ್ಲಿ ಅತಿ ಮುಖ್ಯವಾದ ಒಂದಂಶವಿತ್ತು, ದೀರ್ಘ ಯೋಚನೆಯ ಬಳಿಕ ಅದನ್ನು ಜಯದೇವ ಬರೆದಿದ್ದ.

“ಉಪಾಧ್ಯಾಯ ವೃತ್ತಿಯ ಮೊದಲ ವರ್ಷದ ಕೊನೆ ಸಮೀಪಿಸುತ್ತ ಬಂತು.ಮುಂದೆ ವಿದ್ಯಾಭ್ಯಾಸ ಮುಂದುವರಿಸಬೇಕೆಂದು ಮಾಡಿದ್ದೇನೆ: ಅಲ್ಲಿಂದ ಹಿಂತಿರುಗುವ ನನಗೆ ಇದೇ ಊರಲ್ಲಿ ಕೆಲಸ ಕೊಡಿಸುವಿರೆಂಬ ನಂಬಿಕೆ ಇದೆ. ನೀವು ನನ್ನಂಥವರಲ್ಲಿ ಏನೋ ಆಸೆ ಇಟ್ಟಿದ್ದಿರಿ. ಅದನ್ನು ಎಂದಿಗೂ ನಿರರ್ಥಕಗೊಳಿಸುವುದಿಲ್ಲವೆಂದು ಭರವಸೆ ಕೊಡುತ್ತೇನೆ.”