ಪುಟ:Duurada Nakshhatra.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೦

ದೂರದ ನಕ್ಷತ್ರ

“ಆಗಲಿ ಸಾರ್. ನಿಮ್ಮ ಶುಭಾಶಯವೇ ನನಗೆ ಬೆಂಬಲ. ಮುಂದೆ ಇಲ್ಲಿಗೇ ವಾಪಸು ಬರ್ತೀನಿ—ನೀವೆಲ್ಲ ಬಾ ಅಂದ್ರೆ.. !”

“ಬನ್ನಿ ಖಂಡಿತವಾಗಿ ಬನ್ನಿ...."

ವೆಂಕಟರಾಯರಿಗೆ ಯಾಕೋ ಪೆಚ್ಚು ಪಚ್ಚಾಯಿತು. ನಂಜುಂಡಯ್ಯ ಮೃದುವಾಗಿ ಮಾತನಾಡತೊಡಗಿದ್ದು ಅವರಿಗೆ ಸಹನೆಯಾಗಲಿಲ್ಲ.

ತನ್ನಲಾದ ಪರಿವರ್ತನೆ ಕಂಡು ತಾನೇ ಆಶ್ಚರ್ಯಪಡುತ್ತ ಜಯದೇವ. ವೆಂಕಟರಾಯರನ್ನೇ ನೋಡಿ ಹೇಳಿದ:

“ಇನ್ನೂ ಒಂದು ವಿಷಯ ನಿಮಗೆ ಹೇಳ್ಳೇಕು. ಕೋರ್ಸ್ ಮುಗಿಸಿ ವಾಪಸು ಬರೋವಾಗ ಹೆಂಡತೀನೂ ಕರಕೊಂಡು ಬಲ್ತಿನಿ.”

“ಓ! ಈಗಲಾದರೂ ಮದುವೆಯಾಗೋ ನಿರ್ಧಾರ ಮಾಡಿದ್ರಲ್ಲಾ!”

“ಈಗ? ಹುಡುಗಿ ಗೊತ್ತಾಗಿ ಎರಡು ವರ್ಷ ಆಯ್ತು, ಇನ್ನೂ ಎರಡು ವರ್ಷ ಕಾದಿರ್ತಾಳೆ, ವಿದ್ಯಾರ್ಥಿದೆಸೆ ಮುಗಿಸಿಯೇ ಮದುವೆ!”

ನಂಜುಂಡಯ್ಯ ಏಳುತ್ತ ಎಂದರು :

“ಇದೊಳ್ಳೆ ಶುಭಸಮಾಚಾರ, ಏಳಿ ಸಾರ್.. ಏಳಿ ಜಯದೇವ್. ಇವತ್ತು ನನ್ನ ಲೆಕ್ಕದಲ್ಲಿ ಕಾಫಿ.”

ಹೊರಡುತ್ತ ಆ ಬಡ ಕೊಠಡಿಯನ್ನು ಬಲುಪ್ರೀತಿಯಿಂದ ಜಯದೇವ ನೋಡಿದ. ಅಂಗಳ ದಾಟಿ ಬೀದಿಗಿಳಿಯುತ್ತ ಆತ ಹೇಳಿದ: .,

“ನಾನು ಈ ಶಾಲೇಲಿ ಉಪಾಧಾಯನಾದ ಮೊದಲ್ನೇ ದಿವಸ ನೀವು ಕಾಫಿ ಕುಡಿಸಿದ್ರಿ ನಂಜುಂಡಯ್ಯನವರೇ, ಕೊನೇ ದಿವಸವೂ ನೀವೇ ಕುಡಿಸ್ತಿದೀರಿ !"