ಪುಟ:Duurada Nakshhatra.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತನ್ನ ಸಾಮಾನುಗಳನ್ನು ತಾನೇ ಎತ್ತಿಕೊಂಡು ಜಯದೇವ ಶಾಲೆಯನ್ನು ಸವಿಾಪಿಸಿದ. ಅದು ಮಂಗಳೂರು ಹೆಂಚಿನ ತಗ್ಗು ಗೋಡೆಯ ಹಳೆಯ ಕಟ್ಟಡ.

ಶಾಲೆಗೆ ಹುಡುಗರು ಅದೇ ಆಗ ಬರತೊಡಗಿದ್ದರು. ಅವರೆಲ್ಲರ ಗಮನವನ್ನು ಜಯದೇವ ಸಹಜವಾಗಿಯೇ ಸೆಳೆದ. ಈತ ಯಾರಿರಬಹುದು ಎಂಬ ಕುತೂಹಲ ಹುಡುಗರಿಗೆ. 'ಹೊಸ ಉಪಾಧ್ಯಾಯರು' ಎಂದು ಕೆಲವರೆಂದರೆ, 'ಯಾರೋ ಕಾಲೇಜ್ ವಿದ್ಯಾರ್ಥಿ ಇರಬೇಕು' ಎಂದು ಬೇರೆ ಕೆಲವರು. ಒಬ್ಬಿಬ್ಬರು ಹುಡುಗರು ಮುಂದೆ ಬಂದು, ಜಯದೇವನ ಹಾಸಿಗೆ ಮತ್ತು ಚೀಲಗಳನ್ನೆತ್ತಿಕೊಳ್ಳಲು ಕೈಚಾಚಿದರು. ಆದರೆ ಸ್ವಾವಲಂಬಿ ಜಯದೇವನಿಗೆ ಯಾರ ಸಹಾಯವೂ ಬೇಕಿರಲಿಲ್ಲ. ಬೇರೆ ಕೆಲ ಹುಡುಗರು, ಶಾಲೆಯೊಳಗೆ ಮೂಲೆಯ ಕೊಠಡಿಯಲ್ಲಿ ಏನನ್ನೊ ಬರೆಯುತ್ತ ಕುಳಿತಿದ್ದ ಮುಯ್ಯೋಪಾಧ್ಯಾಯರಿಗೆ,ಅಪರಿಚಿತರೊಬ್ಬರು ಬರುತ್ತಿದ್ದ ಸುದ್ದಿ ತಿಳಿಸಿದರು.

ಮುಖ್ಯೋಪಾಧ್ಯಾಯರೆದ್ದು ಬಂದರು ಬಾಗಿಲ ಬಳಿಗೆ. ವಯಸ್ಸಿನಲ್ಲಿ ತಮಗಿಂತಲೂ ಮೂವತ್ತು ವರ್ಷ ಚಿಕ್ಕವನಂತೆ ತೋರುತ್ತಿದ್ದ ಯುವಕ. ಆತನೇ ತಮ್ಮ ಶಾಲೆಯ ಹೊಸ ಉಪಾಧ್ಯಾಯರೆಂಬುದರಲ್ಲಿ ಅವರಿಗೆ ಸಂದೇಹವಿರಲಿಲ್ಲ.

“ನಮಸ್ಕಾರ, ಬನ್ನಿ!"

–ಎನ್ನುತ್ತ 'ಹೆಡ್ ಮೇಷ್ಟು? ರಂಗರಾಯರು ಮುಗುಳು ನಕ್ಕು ಸ್ವಾಗತ ಬಯಸಿದರು.

ಎರಡು ಕೈಯಲ್ಲೂ 'ಭಾರ'ಗಳಿದ್ದುವು. ಅವುಗಳನ್ನು ಕೆಳಗಿಳಿಸದೆ ಕೈಜೋಡಿಸಿ ನಮಸ್ಕರಿಸುವುದು ಸಾಧ್ಯವಿರಲಿಲ್ಲ, ಆಕಾರಣದಿಂದ ತಲೆಯನ್ನಷ್ಟೆ, ಬಾಗಿಸಿ ಜಯದೇವ “ನಮಸ್ಕಾರ” ಎಂದ.

ಆದರೆ ಅವನ ಮನಸ್ಸು ಒಂದು ಪ್ರಶ್ನೆಕೇಳಿತು : ಇವರು ಯಾರಿರಬಹುದು? ಶುಭ್ರವಾದ ಧೋತರ, ಷರಟು, ಸ್ವಲ್ಪಮಾಸಿದ ಕಂದು ಬಣ್ಣದ ಮುಚ್ಚುಕಾಲರಿನ ಕೋಟು, ಕೆಲವೇ ಕೂದಲುಗಳಿದ್ದ ಬಕ್ಕತಲೆ... ಇವರೇ