ಪುಟ:Duurada Nakshhatra.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಮೊದಲ್ನೆ ಬಸ್ನಲ್ಲೇ ಬಂದೆ.”

“ಅದೇ ನಿತ್ಯಾನಂದ.”

ನಿತ್ಯವೂ ಆನಂದ ಕೊಡುವ ಬಸ್ಸು! ಯಾರಿಗೊ?

...ನಂಜುಂಡಯ್ಯನ ಮನಸ್ಸಿನಲ್ಲಿದ್ದುದನ್ನು ಊಹಿಸಿಕೊಳ್ಳಲು ಸಮರ್ಥನಾದ ಜಯದೇವ ಹೇಳಿದ.

“ಧೂಳು ತಿಂದುಕೊಂಡೇ ಇಳಿದಿದ್ದೇನೆ. ಅಸಾಧ್ಯಾ ರಸ್ತೆಯಪ್ಪ!”

“ಗೊತ್ತು. ಬೆಂಗಳೂರು ನಗರದ ಜನಕ್ಕೆ ನಮ್ಮ ರಸ್ತೆಗಳು ಹಿಡಿಸೋದಿಲ್ಲ!”

ಆ ಮಾತನ್ನ ವಿಭಜಿಸಿ, ಅದರಲ್ಲಿದ್ದುದು ಇಂಥದೇ ಧ್ವನಿಯೆಂದು ಸುಲಭವಾಗಿ ಹೇಳಲಾಗದಂತಹ ಪರಿಸ್ಮಿತಿ. ಜಯದೇವ ನಕ್ಕು ಸುಮ್ಮನಿದ್ದ. ನಂಜುಂಡಯ್ಯನ ಮಾತಿನಿಂದ ಜಯದೇವನಿಗೆ ಎಲ್ಲಾದರೂ ನೋವಾಗಬಾರದೆಂದು ರಂಗರಾಯರು, ನಂಜುಂಡಯ್ಯ ಆಡಿದುದು ತಮಾಷೆಯು ನುಡಿ ಎಂಬಂತೆ ತಾವೂ ನಕ್ಕರು.

ಎರಡನೆಯ ಸಾರಿ ಗಂಟೆ ಬಾರಿಸಿತು. “ಸ್ವಾಮಿದೇವನೆ ಲೋಕ ಪಾಲನೆ” ಎಂದು ಎಲ್ಲ ಕಂಠಗಳಿಂದಲೂ ಸಾಮೂಹಿಕವಾಗಿ ಪಾರ್ಥನೆ ನಡೆಯಿತು. ಮೂವರು ಅಧ್ಯಾಪಕರು ತಮ್ಮ ಕೊಠಡಿಯಲ್ಲಿ ನಿಂತುಕೊಂಡೇ ಇದ್ದರು. ಹುಡುಗರ ಪ್ರಾರ್ಥನೆ ಮುಗಿಯುತ್ತ ಬಂದೊಡನೆ ನಂಜುಂಡಯ್ಯ ಜಯದೇವನಿಗೆ ಹೇಳಿದರು:

“ಕ್ಲಾಸಿದೆ, ಹೋಗ್ತೀನಿ. ನೀವು ಕೆಲಸ ಸೇರೋದು ನಾಳೇಂತ ತೋರುತ್ತೆ?"

"ಹೌದು ಸಾರ್."

"ಸರಿ ನೋಡೊಣ ಆಮೇಲೆ.”

—ಅಷ್ಟು ಹೇಳಿ ನಂಜುಂಡಯ್ಯ ಗಂಭೀರ ನಡಿಗೆಯಿಂದ ತರಗತಿಗಳಿಗೆ ಹೋದರು.

ತಾನು ಶಾಲೆಯೊಳಗೆ ಮೊದಲ ಬಾರಿ ಕಾಲಿಟ್ಟಾಗ ಮುಖ್ಯೋಪಾಧ್ಯಾಯರ ಮುಖದ ಮೇಲೆ ಕಂಡಿದ್ದ ಪ್ರಸನ್ನತೆಯನ್ನು ಜಯದೇವ ಈಗ ಕಾಣಲಿಲ್ಲ. ಇಲ್ಲಿ ಎಲ್ಲವೂ ಸರಿಯಾಗಿಲ್ಲವೆಂಬುದೇನೋ ಆತನ ಸೂಕ್ಷ ಬುದ್ಧಿಗೆ ಹೊಳೆದು ಹೋಯಿತು. ಅದರಿಂದ ಬೇಸರವಾಯಿತು. ತಾನು ಜತೆಯಲೆ