ಪುಟ:Duurada Nakshhatra.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಲ್ಲಿ ನೆರೆದಿದ್ದವರ ಕುತೂಹಲದ ದೃಷ್ಟಿಗಳ ನಡುವೆ ಜಯದೇವ ತನ್ನ ಗೌರವವಾಗಿ ತರಿಸಲಾದ ತಿಂಡಿ ತೀರ್ಥಗಳನ್ನು ಸ್ವೀಕರಿಸಿದ.

ಹೋಟಲಿನಲ್ಲಿ ನಂಜುಂಡಯ್ಯನವರ ಲೆಕ್ಕವಿತ್ತು. ಅವರು ಆ ಪುಸ್ತಕದಲ್ಲಿ ದಿನದ ಬಿಲ್ಲನ್ನು ಬರೆದ ಬಳಿಕ, ಮೂವರು ಉಪಾಧ್ಯಾಯರೂ ಹೊರ ಹೊರಟರು. ಬೀದಿಗಿಳಿದಾಗ ನಂಜುಂಡಯ್ಯ ಸಿಗರೇಟಿನ ಕೇಸು ತೆರೆದರು.ಕಡ್ಡಿ ಕೊರೆದು ಹಚ್ಚಿಕೊಳ್ಳುತ್ತಾ ಅವರೆಂದರು:

“ನೀವು ಕಾಂಗ್ರೆಸ್ ಚಳುವಳೀಲಿ ಇದ್ದಿರಾ ಜಯದೇವ್?"

“ಇಲ್ಲ. ಯಾಕೆ ಕೇಳಿದಿರಿ.”

ಯಾಕೆ ಕೇಳಿದರೊ? ಜಾತಿಯಲ್ಲಿ ನಂಬಿಕೆ ಇಲ್ಲವೆಂಬ ವಾದಕ್ಕೆ ಆ ಉತ್ತರದಲ್ಲೇನಾದರೂ ತಳಹದಿ ದೊರೆಯುವುದೇನೋ ಎಂದಿದ್ದರು ಅವರು. ಆದರೆ ಆ ಉತ್ತರವೂ ನಿರಾಸೆಯನ್ನೇ ಉಂಟುಮಾಡಿತು.

ಸಿಗರೇಟಿನ ಹೊಗೆಯನ್ನೇನೋ ಅವರು ಸ್ವಲ್ಪ ನುಂಗಿದರು. ಆದರೆ ಜಯದೇವನ ವರ್ತನೆ ನುಂಗಲಾರದ ತುತ್ತಾಗಿತ್ತು.

"ಸುಮ್ನೆ ಕೇಳ್ದೆ-"

ಅದು ಮಾತು ಹಾರಿಸುವ ಯತ್ನ.

“ಬೆಂಗಳೂರಲ್ಲೆಲ್ಲಾ ರಾಜಕೀಯದಲ್ಲಿ ವಿದ್ಯಾರ್ಥಿಗಳಿಗೆ ಜಾಸ್ತಿ ಆಸಕ್ತಿ ನೋಡಿ. ಹಾಗೆ ನಿಮಗೂ ಎಲ್ಲಾದ್ರೂ–--”

ಸುಲಭವಾಗಿ ಗುರುತಿಸುವ ಸುಳ್ಳು.

“ಇಲ್ಲ, ನನಗೆ ರಾಜಕೀಯದಲ್ಲಿ ಆಸಕ್ತಿಯೇ ಇಲ್ಲ, ಅಲ್ದೆ, ನಾನು ಕಾಲೇಜು ಸೇರಿದ ವರ್ಷವೇ ಸ್ವಾತಂತ್ರವೂ ಬಂತು. ಜವಾಬ್ದಾರಿ ಸರ್ಕಾರ ಹೋರಾಟದ ಸಮಯದಲ್ಲಿ ಎಲ್ಲರ ಜತೇಲಿ ನಾಲ್ಕು ದಿವಸ ಮುಷ್ಕರ ಮಾಡಿದ್ದು ಎಷ್ಟೋ ಅಷ್ಟೆ...."

“ನಮಗಿಂತೆಲ್ಲಾ ನೀವು ಬಹಳ ಚಿಕ್ಕವರು ಹಾಗಾದರೆ.”

“ಹೌದು ಚಿಕ್ಕವ, ಹೊಸಬ. ನಿಮ್ಮ ಜತೇಲಿದ್ರೆ ನಾನೊಬ್ಬ ವಿದ್ಯಾರ್ಥಿಯೋ ಏನೋ ಅನಿಸುತ್ತೆ!”

ಜಯದೇವ ಸಹಜವಾಗಿಯೇ ಪಾಮಾಣಿಕವಾಗಿಯೇ ಹಾಗಂದ. ತಮ್ಮ ಹಿರಿತನವನ್ನು ಹೊಸ ಉಪಾಧ್ಯಾಯ ಮೆಚ್ಚಿಕೊಂಡುದಕ್ಕಾಗಿ ನಂಜುಂಡಯ್ಯನಿಗೆ ಸಂತೋಷವೇ ಆಯಿತು. ರಂಗರಾಯರು, ಜಾತಿಯ