ಪುಟ:Duurada Nakshhatra.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರ್ಗವಾಗೋ ಹಾಗಿದೆ. ಆ ಶಂಕರಪ್ಪ ನನ್ಮೇಲೆ ದೂರು ಕೊಟ್ಟ, ಬೆಂಗಳೂರುವರೆಗೂ ಹೋಗಿ ಬಂದು--"

“ಶಂಕರಪ್ಪನವರೇ! ಅವರೂಂತ ನಂಜುಂಡಯ್ಯ ಹೇಳಲಿಲ್ಲ.”

“ಅವರೆಲ್ಲಾ ಒಂದೇ ಜಯದೇವ, ಹೋದ ಚುನಾವಣೇಲಿ ನಮ್ಮ ಗುರುತಿನವರು ಒಬ್ಬರಿಗೆ ಸಹಾಯ ಮಾಡ್ದೆ, ಅವರು ಹಿಂದೆ ಕಾಂಗ್ರೆಸಿನಲ್ಲಿದ್ದರೂ ಆ ಸಲ ಸ್ವತಂತ್ರರಾಗಿ ನಿಂತಿದ್ರು, ಶಂಕರಪ್ಪ ಕಾಂಗ್ರೆಸ್ ಭಕ್ತರು.ಸ್ವತಂತ್ರರೇನೋ ಸೋತರೂಂತಿಟ್ಕೊಳ್ಲಿ. ಆದರೂ--"

“ಯಾಕೆ? ಬೇಕಾದವರಿಗೆ ಬೆಂಬಲ ಕೊಡೋ ಹಕ್ಕು ನಮಗಿಲ್ವೆ?"

ಜಯದೇವನ ಪ್ರಶ್ನೆ ಕೇಳಿ, ರಂಗರಾಯರು ನಕ್ಕರು.

“ಹಕ್ಕು? ಅದೆಲ್ಲಾ ಇರೋದು ರಾಜ್ಯಾಂಗದಲ್ಲಿ! ನಿಮಗಿನ್ನೂ ತಿಳಿದು ಜಯದೇವ.”

“ಚುನಾವಣೇಲಿ ನೀವು ಕಾಂಗ್ರೆಸ್ ವಿರೋಧಿಯಾಗಿದ್ದಿರೀಂತ ದೂರು ಕೊಟ್ರೆ?"

“ಹಾಗೆ ಕೊಡೋದಕ್ಕಾಗುತ್ಯೆ? ಬೇರೆ ಆರೋಪ ಸೃಷ್ಟನೆಮಾಡಿದರು.”

“ಬೇಜಾರು...”

“ಈಗಲೇ ಬೇಜಾರು ಅಂದರೆ ಹೇಗೆ ಜಯದೇವ? ಸ್ವಲ್ಪ ದಿವಸ ಕಳೀಲಿ-ನಿಮಗೇ ಗೊತ್ತಾಗುತ್ತೆ.”