ಪುಟ:Duurada Nakshhatra.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹುಡುಗರಿಗೆ ತಿಳಿದರೆ ಮುಂದೆ ನಂಜುಂಡಯ್ಯ ಏನೆನ್ನುವರೊ ಎಂಬ ಶಂಕೆ ಚಾಧಿಸಿತು. ಆದರೂ ಆ ವಿಷಯ ಆಗ ಅಲ್ಲವಾದರೆ ಮತ್ತೆ ಎಲ್ಲರಿಗೂ ತಿಳಿಯಲೇಬೇಕಲ್ಲವೆ?

“ಹೊಸ ಹೆಡ್ಮೇಷ್ಟು ಬಂದಿದ್ದಾರೆ. ರಂಗರಾಯರಿಗೆ ವರ್ಗವಾಯ್ತು.”

“ಓ!"

ವಿರೂಪಾಕ್ಷನ ಮುಖ ವಿವರ್ಣವಾಯಿತು. ತನ್ನ ಅಣ್ಣ ಮುಖ್ಯೋಪಾಧ್ಯಾಯರಾಗುವರೆಂದು ಆತ ಭಾವಿಸಿದ್ದು, ಈಗ ಆತನಿಗೆ ನಿರಾಶೆಯಾಗಿರಬೇಕೆಂಬುದು ಸ್ಪಷ್ಟವಾಗಿತ್ತು, ಜತೆಯಲ್ಲಿದ್ದ ಹುಡುಗರೂ ಅವನ ಮುಖವನ್ನೇ ನೋಡಿದರು. ಅವರಿಗೂ ರಂಗರಾಯರ ಮೇಲಿನ ಆರೋಪಗಳ ವಿಷಯ ತಿಳಿದಿತ್ತೇನೋ ಹಾಗಾದರೆ–?

ಹುಡುಗರು, ಹೊರಗೆ ಬಯಲಲ್ಲಿ ಮರದ ಕೆಳಗೂ ಜಗಲಿಯ ಮೇಲೂ ಆಡುತ್ತಲಿದ್ದವರಿಗೆಲ್ಲ ಸುದ್ದಿ ತಿಳಿಸಲು ಓಡಿಹೋದರು.

ಜಯದೇವ ಮೂಲೆಯಲ್ಲಿ ಬೀರುವಿನ ಮರೆಯಲ್ಲಿ ಇರಿಸಿದ್ದ ತನ್ನ ಸುರುಳಿ ಹಾಸಿಗೆಯನ್ನು ನೋಡಿದ... ಈ ಹೊಸ ಮುಖ್ಯೋಪಾಧ್ಯಾಯರೆಲ್ಲಿ ವಸತಿ , ಮಾಡುವರೊ? ಸಂಸಾರವಂದಿಗನಿರಬೇಕು. ಕುಟುಂಬವನ್ನು ಕರೆದುಕೊಂಡು ಬರುವವರೆಗೆ ಅವರೂ ಕೂಡಾ ಶಾಲೆಯಲ್ಲೆ ಉಳಿಯುವರೇನೊ?

ಬೆಂಗಳೂರಿನಿಂದ ರಾತ್ರೆ ಹೊರಟು ಆ ದಿನ ಅಲ್ಲಿಗೆ ಕೈಗೆತ್ತಿಕೊಂಡು ಜಯದೇವ ಓದತೊಡಗಿದ. ಮೊದಲ ಪುಟದ ಶಿರೋನಾಮೆಗಳನ್ನೆಲ್ಲ ಆತ ಓದಿದಾಯಿತು. ಅದೇನು ಓದುತ್ತಿದ್ದನೆಂಬುದು ಅವನಿಗೇ ತಿಳಿಯಲಿಲ್ಲ... ಅಗ್ರ ಲೇಖನವೂ ಅಷ್ಟೆ... ಆದರೆ ಸ್ಠಳೀಯ ಸುದ್ದಿಗಳ ಪುಟ ಬಂದಾಗ ಅವನ ಆಸಕ್ತಿ ಕೆರಳಿತು. ಸಣ್ಣ ಪುಟ್ಟ ಊರುಗಳ ಸಣ್ಣ ಪುಟ್ಟ ವಿಷಯಗಳನ್ನೆಲ್ಲ ಓದಿದ. ತಾನು ದುಡಿಯಲು ಬಂದಿದ್ದ ಊರಿನ ವಾರ್ತೆಯೇನೊ ಆ ದಿನಪತ್ರಿಕೆಯಲ್ಲಿ ಇರಲಿಲ್ಲ, ಅಷ್ಟು ಮಹತ್ವವಿದ್ದರಲ್ಲವೆ ಆ ಊರಿಗೆ?

ಕಿಲಕಿಲ ನಗು-ಗುಸು ಗುಸು ಮಾತು... ಕೈ ಬಳೆಗಳ ಸದ್ದು ಕೂಡಾ. ಪತ್ರಿಕೆಯೋದುವುದನ್ನು ನಿಲ್ಲಿಸಿ ಜಯದೇವ ತಿರುಗಿ ನೋಡಿದ