ಪುಟ:Ekaan'gini.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

104

ಏಕಾಂಗಿನಿ

ವಿಜಯಾ ಮಾತನಾಡಲಿಲ್ಲ. ಸುನಂದಾ ತಂದೆಯನ್ನೆಬ್ಬಿಸಿದಳು.
ಅಳಿಯ ಹೊರಟು ನಿಂತುದನ್ನು ಕಂಡು ಕೃಷ್ಣಪ್ಪನೆಂದರು;

“ನಿಮ್ಮಿಷ್ಟ. ನನಗೆ ಗಂಡು ಮಕ್ಕಳಿಲ್ಲ ವೆಂಕಟರಾಮಯ್ಯ, ಆ ಕಾರಣದಿಂದ ನೀವು ನನ್ನ ಪಾಲಿಗೆ ಅಳಿಯನಿಗಿಂತಲೂ ಜಾಸ್ತಿ, ನಾನು ನಿಮ್ಮ ಹತ್ತಿರ ಎಷ್ಟೋ
ವಿಷಯ ಮಾತನಾಡೋಕು, ನನಗೂ ವಯಸ್ಸಾಯ್ತು. ಇನ್ಯಾರಿದಾರೆ ಹೇಳಿ?”

ಕೃಷ್ಣಪ್ಪನವರು ತೋರುತ್ತಿದ್ದ ವಿಶ್ವಾಸವನ್ನು ಕಂಡು ಮೂಕನಾಗಿ ವೆಂಕಟ
ರಾಮಯ್ಯ ಉತ್ತರವಿತ್ತ
“ಏನು ಹೇಳೋಕೋ ತೋಚ್ತಾ ಇಲ್ಲ, ಮಾವ ಇನ್ನೆರಡು ವಾರ ಬಿಟ್ಕಂಡು
ಪುನಃ ಬರ್‍ತೀನಿ.” “ಹಾಗೇ ಮಾಡಿ...ಏಳೆಂಟು ದಿವಸದ ರಜಾ ಪಡಕೊಂಡು ಬನ್ನಿ.”

...ಹೊರಡುವುದಕ್ಕೆ ಮುಂಚೆ ವೆಂಕಟರಾಮಯ್ಯ ತನ್ನ ಹೆಂಡತಿಯನ್ನು ಪಕ್ಕಕೆ
ಕರೆದ ಕೋಟಿನ ಒಳಜೇಬಿನೊಳಗಿದ್ದ ನೋಟುಗಳು ಎಣಿಸಿ, ತನ್ನ ರೈಲು ಖರ್ಚಿಗೆ
ಬೇಕಾದುದನ್ನು ತೆಗೆದಿರಿಸಿದ. ಅನಂತರ ಇಪ್ಪತ್ತು ರೂಪಾಯಿ ಉಳಿಯಿತು. ಅಷ್ಟು
ಹಣವನ್ನೂ ಆತ ವಿಜಯಳ ಕೈಯಲ್ಲಿಟ್ಟ.

“ಇಷ್ಟು ಯಾಕೆ?” ಎಂದು ಕೇಳಿದಳು ವಿಜಯಾ

ಇಡ್ಕೊಂಡಿರು. ಇಲ್ಲಿ ಮನೆ ಖರ್ಚಿಗೆ ಬೇಕಾಗಹುದು,” ಎಂದ ವೆಂಕಟ
ರಾಮಯ್ಯ.
...ಆತ ಹೋದ ಬಳಿಕ ವಿಜಯಾ ಸುನಂದೆಯ ಬಳಿಗೆ ಬಂದು, ನೋಟುಗಳಿದ್ದ
ಕೈಯನ್ನು ಮುಂದಕ್ಕೆ ಚಾಚುತ್ತ ಅಂದಳು:
"ಅಕ್ಕಾ. ಇಗೋ. ಖರ್ಚಿಗೇಂತ ಅವರು ದುಡ್ಡು ಕೊಟ್ಟು ಹೋದ್ರು.
ಇಟ್ಕೊ.”

ಕೈಲಿದ್ದ ಪಾತ್ರೆಯನ್ನು ಕೆಳಕ್ಕಿಡಲೆಂದು ಸುನಂದಾ ಸರಕ್ಕನೆ ಬಾಗಿದಳು. ಮತ್ತೆ
ತಲೆ ಎತ್ತಿದಾಗ ಕಣ್ಣುಗಳಲ್ಲೇನೂ ಇರಲಿಲ್ಲ. ಹೊಂಚುಹಾಕುತ್ತಲಿದ್ದ ಕಂಬನಿಗಳೆರಡು
ತಂಗಿಗೆ ತಿಳಿಯದಂತೆ ಕೆಳಕ್ಕೆ ಧುಮುಕಿದ್ದುವು.


೧೬

ಒಂದು ಸಂಜೆ ಚಂಪಾ ಸುನಂದೆಯನ್ನು ಕಾಣಲು ಬಂದಳು. ಬಾಗಿಲಲ್ಲಿ ನಿಂತಿದ್ದ

ಸುನಂದಾ ಗೆಳತಿಯನ್ನು ಒಳಕ್ಕೆ ಕರೆದಳು.

'ಬಾರೇ, ಬಾ. ವಿಜಯಾ ಬಂದಿದ್ದಾಳೆ. [ಕೊಠಡಿಯತ್ತ ತಿರುಗಿ] ವಿಜಿ,