ಪುಟ:Ekaan'gini.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಎದ್ದ ತಕ್ಷಣ ನಿನ್ನ ಮುಖ ನೋಡಿ ನನ್ನ ಮೈ ಉರಿದೋಯ್ತು. ಈಗ ಹಾಗಲ್ಲ. ನೋಡು ಎಷ್ಟು ತಣ್ಣಗಿದೀನಿ! ಈಗ ನಾಮ ಹೇಳೋ ಮಾತೇ ಕೊನೇದು ಅಂತ ನಂಬು.""...."" ಹಿಂದೆ ನಮಿಬ್ಬರ ಸಂಬಂಧ ಏನೇ ಇದ್ದರೂ ಅದೆಲ್ಲಾ ಯಾವತ್ತೋ ಮುಗಿದೋಯ್ತು. ಈಗ ನನ್ನ ಹಾದಿ ನನಗೆ..ನಿನ್ನ ಹಾದಿ ನಿನಗೆ!""ಹಾಗೆ ಹೇಳ್ಬೇಡಿ, ದಮ್ಮಯ್ಯ. ನಾನು ಎಷ್ಟೋಸಲ ನಿಮಗೆ ಎದುರಾಡಿ ತಪ್ಮಾಡಿದೀನಿ ಕ್ಷಮಿಸಿ.""ಇಲ್ಲ ಇಲ್ಲ ತಪ್ಪಾಗಿರೋದು ಒಂದೇ. ಮದುವೆ ಮಾಡ್ಕೊಂಡ ತಪ್ಪು. ಅದು ಇನ್ನಾದರೂ ವರಿಹಾರವಾಗ್ಲೀಂತ ನಿರ್ಧಾರ ಮಾಡಿದೀನಿ. ಹೇಳು....ಗಲಾಟೆಯಾತಕ್ಕೆ? ನಿನಗೇನಾದರೂ ಹಣ ಬೇಕಾ?" ಬಾಗಿದ್ದ ಸುನಂದೆಯದೇಹ ಮೆಲ್ಲನೆ ಸಿಡಿದುಕೊಂಡಿತು. ನೆಲದ ಮೆಲೆಯ ಆಕೆ ನೇರವಾಗಿ ಕುಳಿತಳು. ಅಪಹಾಸ್ಯದ ಮುಗುಳು ನಗು ಆಕೆಯ ತುಟಿಗಳ ಮೇಲೆ ಸುಳಿಯಿತು."ಎಷ್ಟು ಕೊಡ್ತೀರಾ?" ಆಕೆಯಲ್ಲಾದ ಬದಲಾವಣೆಯನ್ನು ಗುರುತಿಸದಷ್ಟು ಮೂರ್ಖನಾಗಿರಲಿಲ್ಲ ಪುಟ್ಟಣ್ಣ. ಆತನ ಸ್ವರವೂ ಏರಿತು. ಕುಳಿತಲ್ಲಿಂದ ಎದ್ದು ಹೇಳಿದ: "ನನಗೊತ್ತಿಲ್ವೆ? ನೀನು ಸ್ವಾಭಿಮಾನಿಯಾದ ಸ್ತ್ರೀರತ್ನ. ಅಂಗೈ ಒಡ್ಡಿ ಯಾಕೆ ಹಣ ಕೇಳೀಯೆ?"ಮಂಚದ ಮೇಲೆ ಮೊಣಕೈ ಊರಿ ಸುನಂದೆಯೂ ಎದ್ದು, ಗೋಡೆಗೆ ಆಧರಿಸಿ ನಿಂತಳು. "ನೀವು ಏನು ಮಾತಾಡ್ತಿದೀರಿ ಅನ್ನೋದರ ಅರ್ಥವಾದರೂ ಆಗಿದೆಯಾ ನಿಮಗೆ? "ಬೆಳಗ್ಗಿನ ಹೊತ್ತು. ಅಮಲೇರಿಲ್ಲ. ಯಾರದರೂ ಹೇಳಿಕೊಟ್ಟು ಮಾತನಾಡಿಸ್ತಿದಾರೆಯೇ ಅಂದರೆ ಇರೋದು ನಾನೊಬ್ನೇ. ಹಿಗಿದ್ದೂ ನಾನು ಆಡೋ ಮಾತಿನ ಅರ್ಥ ನನಗಾಗಿಲ್ಲ ಅಂತೀಯಾ?" ಸುನಂದೆಯ ಮೈ ಬೆಚ್ಚಗಾಯಿತು. ಒಳಗಿನ ಸಂಕಟವನ್ನು ಹತ್ರಿಕ್ಕ