ಪುಟ:Ekaan'gini.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೦೫

ಲಾರದೆ ಆಕೆ ಏದುಸಿರು ಬಿಟ್ಟಳು. ಪ್ರಯಾಸಪಟ್ಟು ರೂಪುಗೊಳ್ಳುತ್ತಿದ್ದ ಕಂಬನಿಯನ್ನು ಸುಲಭವಾಗಿ ತಡೆಹಿಡಿದಳು. ಹಲ್ಲುಗಳು ಕೆಳತುಟಿಯನ್ನು 

ಕಚ್ಚಿ ಬಿಗಿದುವು. ಒಡೆದ ಧ್ವನಿಯಲ್ಲಿ ಆಕೆ ಎಂದಳು:

    "ಹೀಗೆ ನೀವು ಹಟತೊಡೋದೇ ನಿಜವಾದರೆ ಮಗೂನ ಇಲ್ಲಿ ಬಿಟ್ಟು 

ಬಾವಿಗೆ ಹಾರಿ ಸಾಯ್ತೀನಿ."

    "ಮಗೂನ ಯಾಕ್ಬಿಡ್ತೀಯಾ? ಕರಕೊಂಡು ಹೋಗು."
    "ಭಾವಿಗೆ ಹಾರ್‍ತಿನಿ ಅಂದೆ."
    " ತಿಳೀತು. ನಿನ್ನೂರಿನ ಬಾವಿ ಮೇಲು."
    "ಥೂ!"ಎಂದಳು ಸುನಂದಾ. ಒಣಗಿದ್ದ ಆ ಬಾಯಲ್ಲಿ ಉಗುಳಿರಲಿಲ್ಲ. 

ಪುಟ್ಟಣ್ಣ ನಕ್ಕ.

   "ಹಾಗೆ ಬಾ! ನಿನ್ನ ಹಳೇ ಹುರುವೆಲ್ಲಾ ಎಲ್ಲಿಗ ಹೋಯ್ತೂಂತ ಆಶ್ಚರ್ಯ

ವಾಗಿತ್ತು,"

   "ನೀವು ಆಫೀಸಿಗೆ ಇವತ್ತು ಹೋಗಕೂಡದು! ನನ್ನ ಅಪ್ಪನನ್ನು ಕರಕೂಂ

ಡ್ಬನ್ನಿ. ಇವತ್ತೇ ಎಲ್ಲಾ ಇತ್ಯರ್ಥನಾಗ್ಬೇಕು."

   "ಇತ್ಯರ್ಥ ಈ ಮೊದಲೇ ಆಗಿದೆ! ಅದಕ್ಕೆ ಅಪೀಲಿಲಿಲ್ಲ!" 
    ಪುಟ್ಟಣ್ಣ ರೀವಿಯಿಂದ ಬಾಗಿಲು ದಾಟಿದ. ಸುನಂದಾ ಆತನನ್ನು ತಡೆಯ ಬಯಸಿದಳು. ಆದರೆ ಆಕಯ ಬಲ ತೋಳು ನಿರ್ಜೀವವಾಗಿದ್ದಂತೆ ಜೋತಾ

ಡುತ್ತಲೇ ಇತ್ತು.

   ಹೊರಹೋದ ಪುಟ್ಟಣ್ಣ ತಿರುಗಿ ನಿಂತು ನುಡಿದ: 
   "ಇನ್ನು ನೀನಿಲ್ಲಿಂದ ಗಾಡಿಬಿಡೋದು ಮೇಲು. ಇಲ್ದೇ ಹೋದ್ರೆ ಹೋಟಿ

ಲ್ನೋರು ಹೊರಡಿಸ್ತಾರೆ, ಊರಿಗೆ ಹೋದ್ಮೇಲೆ ಇನ್ನೊಂದ್ಸಲ ಇಂಥ ಪ್ರವಾ ಸದ ಯೋಚ್ನೆ ಮಾಡ್ಬೇಡ ! ನೆನಪಿರ್‍ಲಿ!"

   ಅಷ್ಟು ಹೇಳಿ ಆತ ಹೊರಟೇ ಹೋದ. ಬೂಟಿನ ಟಕ್ ಟಕ್ ಸಪ್ಪಳ 

ಮಂದವಾಗಿ ಬಂದು ನಿಂತೇ ಹೋಯಿತು.

   ಸುನಂದಾ ಧಿಗ್ಮೂಡಳಾಗಿ ಕುರ್ಚಿಯಲ್ಲಿ ಧೊಪ್ಪನೆ ಕುಳಿತು ಅಂಗೈ ಮೇಲೆ 

ತಲೆ ಇರಿಸಿದಳು.

   ಒಳಧ್ವನಿ ಬಲು ಕ್ಷೀಣವಾಗಿ ಉಲಿಯಿತು: "ಇನ್ನೇನೂ ಇಲ್ಲ. ಇಲ್ಲಿಗೆಲ್ಲಾ