ಪುಟ:Ekaan'gini.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬

               ಏಕಾಂಗಿನಿ

ಮುಗಿದ ಹಾಗಾಯ್ತು.

  ತಲೆ ಸಿಡಿಯತೊಡಗಿತು ಮೆದುಳು ಮೆಲ್ಲನೆ ಕೇಳಿತು: 'ಮುಂದೇನಾಗುತ್ತೆ? ಏನಾಗುತ್ತೆ ಮುಂದೆ?'
  ಸಂಕಟದಿಂದ ಚೇತರಿಸಿಕೊಳ್ಳಲಾಗದೆ ಸುನಂದಾ ಹಾಗೆಯೇ ಎಷ್ಟೋ

ಹೊತ್ತು ಕುಳಿತಳು

  ಹೊಟೆಲಿನ ಹುಡುಗ, ತೆರೆದಿದ್ದ ಬಾಗಿಲಿನೆದುರು ನಿಂತ:
  "ನಿಮಗೆ ಕಾಫಿ ಏನಾದರೂ ಬೇಕೆ , ಕೇಳು ಅಂತ ಮ್ಯಾನೇಜರಂದ್ರು."
   ಬೇಡವೆಂದು ತಲೆಯಲ್ಲಾಡಿಸಿದಳು ಸುನಂದಾ
   ಅರ್ಧಗಂಟೆ ತಡೆದು ಆತ ಮತ್ತೊಮ್ಮೆ ಬಂದ.
  "ಮಗೂಗೆ ಏನಾದರೂ ಬೇಕೆ, ಕೇಳು, ಅಂದ್ರು."
  ಮಗು ನಿದ್ದೆ ಹೋಗಿತ್ತು. ಎಚ್ಚರವಾದೊಡನೆ ಅಳುವುದು ಖಂಡಿತ.

ಮುದುರಿ ಹೋಗಿದ್ದ ಒಂದು ರೂಪಾಯಿಯ ನೋಟೊಂದು ಸುನಂದೆಯ ಸೊಂಟದಲ್ಲಿತ್ತು. ಅದನ್ನು ಹೊರತೆಗೆದು ಅಕೆ ಹುಡುಗನಿಗೆ ಕೊಟ್ಟಳು.

  "ಇದು ಯಾರಮ್ಮ?"
   ಯಾಕೆ ಎಂದು ಹೇಳಿಯೇ ಇರಲಿಲ್ಲ 
  "ಒಂದು ನಾಲ್ಕಾಣೆ ಬಿಸ್ಕತ್ತು ತಂದ್ಕೊಡವ್ವಾ."
  ಬಿಸ್ಕತ್ತು ಬಂತು.ಉಳಿದ ಹಣನನ್ನು ಬಿಡಿ ಬಿಡಿ ಚಿಲ್ಲರೆಯಾಗಿಯೇ ತಂದಿದ್ದ ಹುಡುಗ, ಅಮ್ಮನವರ ಕೈಯಿಂದ ಒಂದಾಣೆ ಸಂಸಾದಿಸಿದ 
. ಸುನಂದಾ ಎದ್ದು ಬಾಗಿಲ ಬಳಿಗೆ ಬಂದಳು. ನಡುಹಗಲಿನ ಬೆಳಕು, ಆಕೆಯನ್ನು  ಮುಸುಕಿದ್ದ ಮೌಢ್ಯದ ತೆರೆಯನ್ನು ಹರಿಯಿತು. ಆಕೆ ಇದ್ದುದು ಅಪರಿಚಿತ ಜಾಗ, ಒಂಟಿಯಾಗಿಯೆ. ಅದು ಹೋಟೆಲು! ಕೆಳಗೆ ಮೋಟಾರು ರಸ್ತೆ--ಸಾವಿರ ಜನ. ಆದರೆ ಇಲ್ಲಿ ತಾನೊಬ್ಬಳೇ. ತನಗೇನಾದರೂ ಕೇಳುವರಿಲ್ಲ.
  ಅವಸರವಾಗಿ ಸುನಂದಾ ಬಾಗಿಲು ಮುಚ್ಚಿ ಆಗಣಿ ಹಾಕಿದಳು.
  ಮಗುವಿನ ಜತೆ ತಾನೂ ಮಲಗಿ ಬಿಡಬೇಕೆನ್ನಿಸಿತು. ಆದರೆ ಆ ಹಾಸಿ

ಗೆಯ ಬಳಿಗೆ ಹೋಗಲು ಆಕೆಗೆ ಇಷ್ಟವಾಗಲಿಲ್ಲ. ಸರಸ್ವತಿಯ ತಲೆಗೂದ ಲನ್ನು ನೇವರಿಸಿ ಎರಡು ನಿಮಿಷ ನೇವರಿಸಿ ಹಾಗೆಯೆ ನಿಂತಳು. ಮತ್ತೆ