ಪುಟ:Ekaan'gini.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೦೭ ಕುರ್ಚಿ ಕರೆಯಿತು.

  ಎದ್ದ ಸರಸ್ವತಿಗೆ ಬಿಸ್ಕತ್ತು ಆಹಾರವಾಯಿತು. ಮತ್ತೆ ಅಳು, ಬಿಸ್ಕತ್ತು,

ನಿದ್ದೆ.

  ಇನ್ನು ಬದುಕಿಗೆ ಯಾವ ಅರ್ಥವೂ ಉಳಿಯಲಿಲ್ಲವೆಂದು, ಹಸಿವು ನೀರಡಿ

ಕೆಗಳ ಪರಿವೆಯೇ ಸುನಂದೆಗಾಗಲಿಲ್ಲ.

  ಮಧ್ಯಾಹ್ನ ಬಾಗಿಲು ಬಡೆದ ಸದ್ದು ಕೇಳಿ, ಸುನಂದಾ ಹೌಹಾರಿ ಬಿದ್ದು, 

ಗಟ್ಟಿಯಾದ ಸ್ವರದಲ್ಲಿ ಅಂದಳು:

   "ಯಾರು?"
   "ನಾನಮ್ಮ,"
   ಹೋಟೆಲು ಹುಡುಗನ ಸ್ವರ.
  "ಏನಪ್ಪಾ?"
  "ಊಟ ಮಾಡ್ತೀರಾ ಕೇಳ್ಕೊಂಡ್ಬಾ ಅಂದ್ರು ಮ್ಯಾನೇಜರು."
  "ಏನೂ ಬೇಡ."
  ಸ್ವಲ್ಪ ಹೊತ್ತಿನಲ್ಲೆ ಕುಳಿತಲ್ಲೆ ಸುನಂದೆಗೆ ಜೊಂವು ಹತ್ತಿತು. ಮತ್ತೆ ಆಕೆ

ಯನ್ನು ಅತ್ತು ಎಬ್ಬಿಸಿದವಳು ಸರಸ್ವತಿ. ಆಕೆಗೆ ಇಸ್ಸಿ ಬಂದಿತ್ತು. ಅವಳ ಜತೆ ಸುನಂದೆಯೂ, ಹೊರಗೆ ಕೊಠಡಿಯ ಸಾಲಿನ ಕೊನೆಯಲ್ಲಿದ್ದ ಸ್ನಾನದ ಮನೆಗೆ ಹೋಗಿ ಬಂದಳು.

   ಹುಡುಗ ರಾಯಸ ತಂದ. 
   "ಅಮ್ಮ, ಮ್ಯಾನೇಜರು ನಿಮ್ಮನ್ನ ಕರೀತಾರೆ."
   "ಅವರ್‍ನೇ ಇಲ್ಲಿಗೆ ಬರಹೇಳಪ್ಪ."
    ಬಂದವನು, ಆಕೆ ಕಲ್ಪಿಸಿದ್ದ ಬೊಜ್ಜು ದೇಹದ ಕೊಬ್ಬಿದ ಆಸಾಮಿಯಲ್ಲ. 

ಪಂಚೆ ಜುಬ್ಬಗಳ ತೆಳ್ಳಗಿನ ವ್ಯಕ್ತಿ. ಬಾಗಿಲಲ್ಲೆ ನಿಂತು ಆತ ಹೇಳಿದ:

   "ಪುಟ್ಟಣ್ಣ ಅವರು ರೂಮು ಖಾಲಿ ಮಾಡಿದಾರೆ. ಸಾಮಾನು ನಮ್ಮ 

ವಶಕ್ಕೆ ಕೊಟ್ಟಿದಾರೆ. ಇನ್ನು ನೀವಿಲ್ಲಿ ಇರೋಕಾಗೋದಿಲ್ಲ. ಬೇಕಿದ್ದರೆ ನಿಮಗೆ ಬೇರೆ ರೂಮು ಕೊಡ್ತೀವಿ--ಬಾಡಿಗೆಗೆ."

   ಅಷ್ಟು ಹೇಳಿ ಆತ ಆಕೆಯನ್ನೊಮ್ಮೆ ಅಮೂಲಾಗ್ರವಾಗಿ ನೋಡಿದ. 

ಸುನಂದಾ ಪ್ರತಿಭಟಿಸುವ ಧ್ವನಿಯಲ್ಲಿ ಅಂದಳು: