ಪುಟ:Ekaan'gini.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮

                ಏಕಾಂಗಿನಿ
 "ನೀವು ಸುಳ್ಳು ಹೇಳ್ತಿದೀರಾ!"
 "ಸುಳ್ಳು ಯಾಕಮ್ಮ ಹೇಳ್ಲಿ? ನಿಮ್ಮಿಂದಾಗಿ ನಮಗೆ ಗಿರಾಕಿ ನಷ್ಟವಾ

ಯಿತು. ಬೇಕಾದರೆ ಬೇರೆ ರೂಮು ಕೊಡ್ತೀನಿ. ಅಲ್ಲಿರಿ. ನನ್ನ ಆಕ್ಷೀಪವಿಲ್ಲ."

 ವಿಚಾರ ಮಾಡಲು ಸುನಂದೆಯನ್ನು ಅಲ್ಲೆ ಬಿಟ್ಟು ಆತ ತೆರಳಿದ.
 ಅಂತೂ ಕಷ್ಟಕ್ಕಿಟ್ಟುಕೊಂಡಿತ್ತು ಪರಿಸ್ಥಿತಿ. ತಂದೆಯಾದರೂ ಒಮ್ಮೆ ಈ

ಕಡೆ ಬರಬಾರದಾಗಿತ್ತೆ..ಎಂದು ಸುನಂದಾ ಮನಸಿನಲ್ಲೆ ಹಲುಬಿದಳು

 ಸಂಜೆಯಾಗುತ್ತಿದ್ದಂತೆ ಹೋಟಲಿನ ಬೇರೊಬ್ಬ ಅಳು ಬಂದ. ಎಳೆಯ

ಹುಡುಗನಲ್ಲ. ಆತನ ಬಾಯಲ್ಲಿ ಬೀಡಿ ಉರಿಯುತಿತ್ತು.

 "ಇನ್ನು ಅಮ್ಮಾವ್ರು ಹೋಗ್ಲೇ ಇಲ್ಲಾ?" ಎಂದು ಅತ ಕಿಟಕಿಯ ಎಡೆ

ಯಿಂದ ನೋಡುತ್ತ ಕೇಳಿದ.

 ಸುನಂದಾ ಉತ್ತರ ಕೊಡಲಿಲ್ಲ.
 ಆತ ಮತ್ತೂ ಅಂದ :

" ಈ ಹೋಟ್ಲಲ್ಲೇ ಇರಿ ಬೇಕಾದ್ರೆ. ಒಂದ್ನಾಲ್ಕು ದಿವಸ ಇದ್ರೆ ಸಂವಾದ್ನೆ ಚೆನ್ನಾಗಿ ಆಗ್ಬಹುದು!"

 ಸುನಂದಾ ಎದ್ದು ಧಡಾರನೆ ಕಿಟಕಿ ಮುಚ್ಚಿದಳು. ಮೈ ಧರಧರನೆ ಕಂಪಿ

ಸಿತು. ಹೊರಗಿದ್ದ ಮಾನವ ಮೃಗ ಖೋ ಖೋ ಎಂದು ನಗುತ್ತಿದ್ದ ಸದ್ದು ಕೇಳಿಸಿತು.

 ತಾನು ಓಡಬೇಕು, ಓಡಿಹೋಗಬೇಕು..ಎನಿಸಿತು ಸುನಂದೆಗೆ. ದೂರ..

ಬಲು ದೂರ. ಈ ಸೆರೆಮನೆಯಿಂದ ಹೊರಗೆ. ಈ ಪಿಶಾಚಿಗಳ ನಡುವಿನಿಂದ ಮನುಷ್ಯರಿರುವ ಕಡೆಗೆ

 ಹಿಂದಿನ ದಿನ ರಾಧಮ್ಮ--ಕುಸುಮೆಯ ಸಾಮೀಪ್ಯದಲ್ಲಿ, ಮಮತೆಯ

ತಂದೆಯ ಬಳಿಯಲ್ಲಿ, ರಾಮಕೃಷ್ಣಯ್ಯನವರ ಮನೆಯಲ್ಲಿ, ಎಷ್ಟೊಂದು ಆತ್ಮ ವಿಶ್ವಾಸದಿಂದ್ದಳು ಸುನಂದಾ! ಈಗ, ಒಂದೇ ದಿನದೊಳಗೆ, ಈ ಪರಿಸ್ಥಿತಿ!

  ಪುಟ್ಟ ಪಾದಗಳಸ್ನಿಡುತ್ತ ಮೇಜಿನ ಬಳಿಗೆ ನಡೆದಿದ್ದ ಸರಸ್ವತಿಯನ್ನು

ಸುನಂದಾ ಎತ್ತಿ ಎದೆಗವಚಿ ಬಿಗಿಯಾಗಿ ಹಿಡಿದುಕೊಂಡಳು. ಮಗು ತಾಯಿಯ ಮಾಂಗಲ್ಯ ಸೂತ್ರದೊಡನೆ ಆಟವಾಡಿತು.

  ಸುನಂದ ಬಾಗಿಲು ತೆರೆದು ಹೊರಬಂದಳು. ಆ ಸಾಲಿನ ಕೊನೆಯಲ್ಲೆ