ಪುಟ:Ekaan'gini.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೦೯

   ಮತ್ತೆ ಕಾಣಿಸಿದ ಆ ಗಂಡು ಮುಖ. ಒಂದೆರಡು ಕೊಠಡಿಗಳಿಂದ ಹೊರಗಿಣಿಕಿ

ನೋಡಿದವರಿಬ್ಬರು. ದೂರದಲ್ಲಿ ಯಾರೊಡನೆಯೊ ಮಾತನಾಡುತ್ತಿದ್ದ ಮ್ಯಾನೇಜರು....

  ಸುನಂದಾ ಮಗುವನ್ನೆತ್ತಿಕೊಂಡು, ಕೊಠಡಿಯತ್ತ ಹಿಂತಿರುಗಿ ನೋಡದೆ,

ಒಮ್ಮೆಲೆ ಮುಂದೆ ನಡೆದಳು ಕೆಳಕ್ಕಿಳಿದಳು.

  ಬೀದಿ ಸೇರಿದರೂ ಕಾಲುಗಳ ಕಂಪನ ಸಿಲ್ಲಲಿಲ್ಲ. ತಾನಿನ್ನು ಶೇಷಾದ್ರಿಪುರ

ಸೇರಬೇಕು. ಬಸ್ಸೆ? ಜಟಕವೆ? ಯಾರನ್ನು ನಂಬುವುದು ಸಾಧ್ಯ? ದುಡ್ಡೂ ಇಲ್ಲ ತನ್ನಲ್ಲಿ. ಚಿಲ್ಲರೆಯನ್ನೆಲ್ಲ ಮೇಜಿನ ಮೇಲೆಯೆ ಬಿಡಲಿಲ್ಲವೆ ತಾನು?

   ಕೂದಲು ಕೆದರಿದ್ದ, ಭೀತಿ ಕಾತರಗಳಿಂದ ಮುಖ ವಿವರ್ಣವಾಗಿದ್ದ, ಆ

ತಾಯಿ ಮಗುವನ್ನೆತ್ತಿಕೊಂಡು ವೇಗವಾಗಿ ನಡೆದಳು.

   ಮುಚ್ಚಂಜೆಯ ಹೊತ್ತು ತಮ್ಮ ಸ್ನೇಹಿತನ ಮನೆ ಸೇರಿದ ಸುನಂದೆ

ಯನ್ನು ಕುರಿತು ಕೃಷ್ಣಪ್ಪನವರು ಹೇಳಿದರು.

  "ಬಂದೆಯಾ ಮಗಳೆ? ಎಲ್ಲಾ ಮುಗಿಸ್ಕೊಂಡು ಬಂದಿಯಾ ಅಮ್ಮ?"
   ಮಗುವನ್ನು ಕೆಳಕ್ಕಿರಿಸಿ, ಕುಳಿತಿದ್ದ ತಂದೆಯ ಮೊಣಕಾಲುಗಳಗೆ ಜೋತು

ಬಿದ್ದು, ಸುನಂದಾ ಗಟ್ಟಿಯಾಗಿ ಅತ್ತಳು.

                                                                            ೧೩
 ರಾಧಮ್ಮನ ಮನೆಯ ಚಾಪೆಯ ಮೇಲೆ ಆ ಮೂವರೂ ಕುಳಿತಿದ್ದರು.

ಎದುರು ಬಾಗಿಲು ಮುಚ್ಚಿಕೊಂಡಿತ್ತು. ಆ ಒಂದು ಗಂಟೆಯೆಲ್ಲ ಮಾತನಾಡು ತ್ತಿದ್ದವಳು ಸುನಂದಾ ಒಬ್ಬಳೇ.

   ಆತ್ಮೀಯಗೆಳತಿ ವರದಿ ಕೊಟ್ಟುದು ತನಗಾದ ಅನುಭವವನ್ನು ಕುರಿತು

ಭಾವೋದ್ವೇಗಕ್ಕೆ ಅವಕಾಶ ಕೊಡದೆಯೇ, ಹಿಂದಿನ ದಿನ ನಡೆದುದೆಲ್ಲವನ್ನೂ ಆಕೆ ಹೇಳಿದಳು. ಆದರೆ ರಾಧಮ್ಮ ಆದನ್ನೆಲ್ಲಾ ಕೇಳುತ್ತಾ ಅತ್ತರು. ಕುಸು ಮಳ ಕಣ್ಣುಗಳೂ ಕೆಂಪರಿದುವು.

  ಮುಕ್ತಾಯದ ವಾಕ್ಯವಾಗಿ ಸುನಂದಾ, ನಿಟ್ಟುಸಿರು ಬಿಟ್ಟು ಅಂದಳು: