ಪುಟ:Ekaan'gini.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುನಂದೆಗೆ ನಗುಬಂತು.ವ್ಯಧೆಯ ದ್ವನಿಯಿಂದ ರಾಧಮ್ಮ ಅಂದರು: ಯಾಕ್ನಗ್ತೀಯಾ? ಆಡಬಾರದ್ದು ಏನಾದರೂ ನಾನಂದ್ನೆ?" "ಇಲ.ನನ್ನ ಅವಸ್ಥೆ ಯೋಚಿಸ್ಕೊಂಡು ನಗುಬಂತು ನೀವು ಹೇಳಿದ್ದನ್ನ ಯಾವಾಗಲೂ ನೆನಪಿಟ್ಟಿತ್ರೀನಿ ರಾಧಮ್ನೋರೆ. .ನೀವು ನನ್ನ ಹಿರಿಯಕ್ಕ

ಆನ್ನೋದನ್ನ ಯಾವತ್ತೂ ಮರೆಯೋದಿಲ್ಲ.
 "ಆದೇನು ಹೇಳೋಕ್ಕೆ ಬರುತ್ತೊ ನಂಗೆ!"
 ಅರ್ಧ ತನಷ್ಟಕ್ಕೆ, ಅರ್ದ ಉಳಿದವರನ್ನು ಉದ್ದೇಶಿಸಿ, ಕುಸುಮಾ ಅಂದಳು:
 "ಮನುಷ್ಯನಲ್ಲ- ಮೃಗ,ಪಿಶಾಚಿ!"
  ರಾಧಮ್ಮ ನಿಟ್ಟುಸಿರು ಬಿಟರು.ಬಳಿಕ ಏಳುತ್ತ ಹೇಳಿದರು:
 "ಕಾಫಿಗೆ ನೀರಿಟ್ಟು ಬರ್ರ್ತೀನಿ."
"ಬೇಡಿ ರಾಧಮ್ಮ , ಈಗ ಯಾಕೆ ಕಾಫಿ?"
 ಕುಸುಮಾ ಏನೂ ಹೇಳಲಿಲ್ಲ. ಬೇರೆ ದಿನವಾಗಿದ್ದರೆ,'ನಡೀರಿ,ಎಲ್ಲರೂ
ನಮ್ಮನೆಗೇ ಹೋಗೋಣ' ಎನ್ನುತ್ತಿದ್ದಳು. ಈ ಹೊತ್ತು  ಅಂತಹ ಶಿಷ್ಟಾ

ಚಾರದ ಯಾವ ವಿವೇಚನೆಯೂ ಆಕೆಯಿಂದ ಸಾಧ್ಯವಿರಲಿಲ್ಲ.

 ರಾಧಮ್ಮ  ಅಡುಗೆ ಮನೆಗೆ ನಡೆದೊಡನೆ ಕುಸುಮಾ ಕೇಳಿದಳು:
 "ಊರಿಗೆ ಇವತ್ತೇ ಹೊರಡ್ತೀರಾ?"
 "ಹೂಂ.  ರಾತ್ರೆಯ ರೈಲಿಗೆ ಹೋಗೋಣಾಂತ  ನಮ್ಮ  ತಂದೆ  ಅಂದ್ರು.
ತಪ್ಪಿದರೆ  ಬೆಳಗೆ  ಹೋಗ್ತೀವಿ."
 ರಾಧಮ್ಮನಿಗೆ ಇವರ  ಮಾತು  ಕೇಳಿಸುತಿತ್ತು.  ಆಕೆ  ಒಳಗೆನಿಂದಲೇ 
ಅಂದರು:  

"ಇನು ಬರೋದು ಯಾವತ್ತೋ ಏನೋ. ಎರಡು ದಿವಸ ಇದ್ಬಿಟ್ಟು

ಹೋಗಬಾರದೇ ಸುನಂದಾ?."   

"ಇಲ್ರಿ ನಾನು ಹೋಗ್ಬೇಕು. ವಿಜಯ ಗಂಡನ ಮನೆಗೆ ಹೋದ

ದಿವಸದಿಂದ ನಮ್ಮಮ್ಮ  ಒಂದು ಧರಾ ಇದಾಳೆ. ಒಂದು ದಿನವೂ ಆಕೆಯ
ಆರೋಗ್ಯ ಸರಿಯಾಗಿರೋದಿಲ್ಲ."

"ಸುನಂದೆಯೇನೋ ಆ ಕಾರಣವನು ಕೋಟ್ಟಳು. ಆದರೆ ಮರು ಕ್ಷಣದಲ್ಲೆ