ಪುಟ:Ekaan'gini.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೧೩

ಹೃದಯದೊಳಗಿನಿಂದ ಬೇರೊಂದು ಪ್ರಶ್ನೆ ರೂಪುಗೊಂಡು ಆಕೆಯನ್ನು ಕುಟು
ಕಿತು 'ಹುಚ್ಚಿ! ಅಳಿಯ ಕೈಬಿಟ್ಟರುವ ಮಗಳು ಮನೆಗೆ ಬರೋದರಿಂದ ಹೆತ್ತ
ವಳ ಕಾಹಿಲೆ ವಾಸಿಯಾಗುತ್ತೇನು?' 
    ಊರಿಗೆ ಹೋದ ಮೇಲೆ ತಾಯಿಗೆ ಹೇಗೆ ಮುಖ ತೋರಿಸಬೇಕೆಂಬ ಭೀತಿ
ಸುನಂದೆಯ ಹೃದಯವನ್ನು ದಹಿಸಿತು.   
"ಏನಾದರೂ  ಹೇಳ್ಬೇಕು  ಅಂತ  ಅನಿಸುತ್ತೆ ಸುನಂದಕ್ಕ, ಆದರೆ ಏನು
ಅನ್ನೋದೇ ತೋಚೋದಿಲ್ಲ,"ಎಂದಳು ಕುಸುಮಾ. 
 ಹೊರಬರತ್ತ ರಾಧಮ್ಮನೆಂದರು:
 "ನಿರಾಶೆಯೆಂದ ಮನುಷ್ಯ ಕಂಗಾಲಾಗ್ತಾನೆ. ನಾನು,ಒಂದು ಹೇಳ್ತೀನಿ
ಸುನಂದಾ ಏನೇ ಆಗಲಿ,ನೀವು ನಿಮ್ಮ ಜೀವಕ್ಕೆ ಅಪಾಯ ತಂದ್ಕೋ
ಕೂಡದು." 
    ಸುನಂದಾ ನಕ್ಕಳು.
   "ಇಲ್ಲ ರಾಧಮ್ಮ . ನನಗೇನು ಹುಚ್ಚೆ?" 
   "ನಿಮಗೊಂದು ಮಗುವಿದೆ, ಅದರ ಭವಿಷ್ಯತ್ತಿಗೆಲ್ಲ ನೀವೇ ಜವಾಬ್ದಾರರು
ಅನ್ನೋದನ್ನ ಮರೀಬಾರದು."
 "ಆಗಲಿ".
 "ನೀವೇನಾದರೂ ಮಾಡ್ಕೋಂಡು ಹೆತ್ತೋರಿಗೆ ಸಂಕಟ ಕೋಡಬಾರದು." 
 "ಇಷ್ಟರವರಗೆ ಅವರೆಗೆ ಕೊಟ್ಟಿರೋ ಸಂಕಟ ಸಾಲ್ದೆ?" 
ಸುನಂದೆಯ  ಭರವಸೆಯ ಮಾತುಗಳಿಂದ ರಾಧಮ್ಮನಿಗೆ ತುಸು ಸಮಾ

ಧಾನವಾಯಿತು. ಆಕೆ ಕಾಫಿ ಸೋಸಲು ಒಳಹೋದರು .

  ತನ್ನ ಗೆಳತಿಯ ಮುಂದಿದ್ದ ಸಮಸ್ಯೆಯನ್ನು ಕುರಿತು ಏನನ್ನು ಯೋಚಿಸು

ವುದಕ್ಕೂ ಏನನ್ನು ಹೇಳುವುದಕ್ಕೂ ಕುಸುಮಾ ಧೈರ್ಯಪಡಲಿಲ್ಲ.

ಮುಖ ಬಾಡಿಸಿ ಕುಳಿತಿದ್ದ ಸ್ನೇಹೆತೆಯನ್ನು ನೋಡಿ ಸುನಂದಾ ಕೇಳಿದಳು 
 "ನನ್ನ ಕತೆ ಕೇಳಿ ಬೇಜಾರಾಯ್ತೇ ಕುಸುಮಾ?
"ಇಲ್ಲರೀ.ಹಾಗೆ ತಿಳ್ಕೋಬೇಡಿ. ನೀವು ವ್ಯಧೆ ಪಡೋದರಿಂದ ನನಗೂ
ವ್ಯಥೆಯಾಗೋಲ್ವೆ?"
"ಗಂಡ ಹೆಂಡತಿ ಬೇರ್ಪಡೋ ತತ್ವದ ವಿಷಯ ಹಿಂದೆ ನಾವು ಎಷ್ಟೊಂದು
 8