ಪುಟ:Ekaan'gini.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ

 "ಮನೆಗಿಷ್ಟು ಹೋಗ್ಬಿಟ್ಟು ಬರ್ತಿನಿ ಸುನಂದಕ್ಕಾ. ನಿಮ್ಮ ತಂದೆಯವರು ಬರೋದು ಇನ್ನೂ ತಡವಾಗುತ್ತೆ ತಾನೆ?"
 ಸುನಂದೆಯ ಪರವಾಗಿ ರಾಧಮ್ಮ ಉತ್ತರವಿತ್ತರು:
"ನೀವು ಹೋಗ್ಬನ್ನಿ ಕುಸುಮಾ. ಇನ್ನೂ ಒಂದೆರಡು ಘಂಟೆ ಇಲ್ಲೇ ಇರ್ತಾರೆ."


                      ೧೪
 ಮಗಳೊಡನೆಯೂ ಮೊಮ್ಮಗಳೊಡನೆಯೂ ಊರಿಗೆ ಮರಳಿದ ಕೃಷ್ಣಪ್ಪನವರು ಸಂತೋಷದ ಸುದ್ದಿಯನ್ನು ಹೊತ್ತು ತಂದಿರಲಿಲ್ಲ.
 ಅವರು ಬರುವುದನ್ನೇ ಕಾಯುತಿದ್ದರೇನೋ ಎಂಬಂತೆ, ಸುನಂದೆಯ ತಾಯಿ ಹಾಸಿಗೆ ಹಿಡಿದರು.
 ತಮ್ಮ ಮಗಳ ಬಾಳು ಹಾಳಾಯಿತೆಂದು ಉಂಟಾದ ನೋವನ್ನೆಲ್ಲ ನುಂಗಿ, ಆಕೆಯೆಂದರು:
"ನೀನು ಬಂದಿದ್ದು ಒಳ್ಳೇದಾಯ್ತು ಸುನಂದಾ. ಬರದೇ ಇದ್ದಿದ್ದರೆ ನನ್ನ ಗತಿ ಏನಾಗ್ತಿತ್ತು ಹೇಳು? ಯಾರು ನೋಡ್ಕೋತಿದ್ದರು ನನ್ನ? ಕೊನೇ ಘಳಿಗೇಲಿ ಯಾರಿರ್ತಿದ್ದರು ನಮಗೆ?"
 "ಹಾಗೆಲ್ಲಾ ಆಡಬಾರದಮ್ಮ" ಎಂದು ಸುನಂದಾ ಸಂತೈಸಲು ಯತ್ನಿಸಿದಳು
  "ಕೊನೇ ಘಳಿಗೆ ಅಲ್ದೆ ಇನ್ನೇನೆ?ಈ ಭೂಮಿಲಿ ಹುಟ್ಟಿದ್ದಕ್ಕೆ ಎಲ್ಲಾ ಸೌಭಾಗ್ಯವೂ ಆಯ್ತು. ಇನ್ನೇನು ಉಳಿದಿರೋದು?? 
  ಬಳಿಕ ನಿಟ್ಟುಸಿರು. ಸಮಾಧಾನದ್ದಲ್ಲ, ಸಂಕಟದ್ದು.
  ಐವತ್ತನೆಯ ವಯಸ್ಸಿಗೆಲ್ಲ ಅಂತಹ ಮಾತನ್ನು ಯಾರೂ ಆಡಬೇಕಾದ್ದಿರಲಿಲ್ಲ. ಆದರೂ ಬದುಕಿನ ಬಾಣಲೆಯಲ್ಲಿ ಸಾಕಷ್ಟು ಹುರಿದಿತ್ತು ಆ ಜೀವ. 
  ಸುನಂದಾ ಹುಟ್ಟದುದಕ್ಕೆ ಮುಂಚೆ ಮೂರು ಸಾರೆ ಆಕೆಗೆ ಗರ್ಭಸ್ರಾವವಾಗಿತ್ತು. ಬಳಲಿರೆಗೆ ನಿರಾಸೆಗೆ ಎಡೆಕೊಟ್ಟಿತು ಆ ಪರಿಸ್ಥಿತಿ. ಅನಂತರ ದೊರೆತುದು ಹೆಣ್ಣುಮಗು. ಒಂದು, ಎರಡು. ಅಲ್ಲಿಗೆ ಸಂತಾನದ ಬಳ್ಳಿ ಡಿಕ