ಪುಟ:Ekaan'gini.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಚೆನ್ನಾಗಿದಾಳಂತಾ?" "ಹ್ಞೂ." ಅಥವಾ ಮತ್ತೊಮ್ಮೆ- "ವಿಜಯಾ ಗಂಡನ ಮನೆಗೆ ಹೋಗಿ ಮೂರು ತಿಂಗಳಾಗ್ತಾ ಬಂತು, ಅಲ್ವಾ?" "ಹ್ಞೂ." "ನೋಡಬೇಕೂಂತ ಆಸೆಯಾಗುತ್ತೆ." "ದೀಪಾವಳಿಗೆ ಕರಸಿದರಾಯ್ತು." "ದೀಪಾವಳೀನೆ! ಯಾರು ಬದುಕಿರ್ತರೆ ಅಷ್ಟು ದಿವಸ?" "ಸುಮ್ನಿರಮ್ಮ . ಸಂಜೆ ಹೊತ್ತು. ಇಲ್ಲದೆಲ್ಲ ಅಡ್ಬೇಡ." ಅಯ್ಯೋ ಒಮ್ಮೆ ಬಂದು ಹೋಗೀಂತ ಅವರ ಕೈಲಿ ಅಳಿಯನಿಗೆ ಕಾಗದ ಬರೆಸೇ." "ಆಗಲಿ, ಆಗಲಿ. ನಿಂಗಿ ಆಯಾಸವಾಗುತ್ತೆ. ಮಾತನಾಡದೆ ಮಲಕೋಮ್ಮಾ." ಒಂದು ದಿನವಾದ ಮೇಲೆ- "ವಿಜೀಗೆ ಕಾಗದ ಬರೆದಿಯಾ ಸುನಂದಾ?" "ಹೂನಮ್ಮಾ." ಸುಳ್ಳು. ಆದರೂ ಕಾಹಿಲೆ ಮಲಗಿದ್ದವರ ಹಿತದದೃಷ್ಟಿಯಿಂದ ಅಗತ್ಯವಾಗಿದ್ದ ಸುಳ್ಳು. ಆ ಮೇಲೂ ಎರಡು ದಿನ ಕಳೆದಾಗ ಸುನಂದೆಗೆ ಅನಿಸಿತು: ಬರೆಯದೇ ಇರುವುದರಲ್ಲಿ ಅರ್ಥವಿಲ್ಲ. ಬರೆಯಬೇಕಾದುದು ತನ್ನ ಕರ್ತವ್ಯ. ವಿಜಯಾ ಬಂದರೆ ತಾಯಿಗೆ ಸಂತೋಷವಾಗುವುದು. ತನಗೂ. ತಾಯಿಯ ಕಾಹಿಲೆ ಹೇಗಾಗುವುದೋ ಯಾರಿಗೆ ಗೊತ್ತು? ಒಡಹುಟ್ಟದವಳು ಈಗ ಬಳಿಯಲ್ಲಿರುವುದೇ ಹಿತಕರ. ನಿಜವಾಗಿಯೂ-ಆಕೆಯನ್ನು ಕಾಣದೆ ಎಷ್ಟೋ ವರ್ಷಗಳಾದ ಹಾಗೆ ಅನಿಸುತ್ತಿದೆಯಲ್ಲ! ಅಂತೂ ಕೊನೆಗೊಮ್ಮೆ ಸುನಂದಾ ತಂಗಿಗೆ ಬರೆಯಲು ಕುಳಿತಳು. ರಾತ್ರೆ ಹೊತ್ತು. ತಂದೆ ಕೊಂಡು ತಂದಿದ್ದ ಸುಲಭ ಬೆಲೆಯ ಪೆನ್ನು. ನಿದ್ದೆಯ