ಪುಟ:Ekaan'gini.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಏಕಾಂಗಿನಿ ನನಗಿಲ್ಲ. ಆದರೆ, ಇಚ್ಛೆಯಿಲ್ಲವೆಂದು ಸುಮ್ಮನಿರುವುದು ಸರಿಯೇ? ಬರೆಯುತ್ತೇನೆ.ಸಾವಧಾನವಾಗಿ ಓದು...." ಬಳಿಕೆ ಬೆಂಗಳೂರು ಪ್ರವಾಸದ ಕಥನ. ಮುಂದಕ್ಕೆ- "ಓದಿದೆಯಾ ವಿಜಯಾ? ಆ ದಿನ ನಡೆದಿದ್ದೆಲ್ಲ ನನ್ನ ಕಣ್ಣ ಮುಂದೆ ಕಟ್ಟಿದೆ. ಯೋಚಿಸುತ್ತಾ ಇದ್ದರೆ ,ಹೀಗೆಲ್ಲಾ ಆಯಿತು ಅಂತ ನಂಬೋಕೆ ಆಗೋದಿಲ್ಲ. ಅಬ್ಬಾ!ಮನುಷ್ಯ ಇಂಥ ಮಟ್ಟಕ್ಕೂ ಇಳೀಬಹುದೂಂತ ಆ ದಿವಸ ನನಗೆ ತಿಳೀತು. "ನನ್ನ ವಿಜಯಾ,-ಬೀದಿಯ ಪಾಲು, ನದಿಯ ಪಾಲು, ಎರಡೂ ಸರಿಯಲ್ಲವೆಂದು ಹೆತ್ತವರ ಮಡಿಲಿಗೆ ವಾಪಸು ಬಂದಿದ್ದೇನೆ. ಚಂಪಾ ನಮ್ಮನೆಗೆ ಬಂದಿದ್ದ ವಿಷಯ ಹೋದಸಲ ತಿಳಿಸಿದ್ದೆ.ಅವಳಿಗೆ ನನ್ನನ್ನು ಹೋಲಿಸಿನೋಡಿದರೆ ಆಕೆಯ ಬದುಕೇ ಸಾವಿರ ಪಾಲು ಉತ್ತಮ ಅನಿಸುತ್ತೆ. ಬೇಸಗೆ ರಜಾ ಮುಗಿಯುತ್ತ ಬಂತು. ಆಕೆ ಇನ್ನು ಕಾಲೇಜಿಗೆ ಹೋಗಬಹುದು.ತನ್ನ ಜೀವನವನ್ನು ತಾನೇ ರೂಪಿಸಬಹುದು. ನಾನು? ನನಗೆ ಆ ಭಾಗ್ಯವಿಲ್ಲ. "....ಇಷ್ಟು ನನ್ನ ಗೋಳಿನ ಕತೆ. ಆದರೆ, ನಿನಗೆ ಕಾತರ ಹುಟ್ಟಿಸುವ ವಿಷಯ ಇನ್ನೂ ಇದೆ; ನಮ್ಮಮ್ಮ ಕಾಹಿಲೆ ಬಿದ್ದಿದಾಳೆ. ನಾನು ಈ ಮೊದಲೇ ಬರೆಯಬೇಕಾಗಿತ್ತು. ಆದರೆ ಅದೊಂದೇ ವಿಷಯ ಬರೆಯುವ ಹಾಗಿರಲಿಲ್ಲ. ಎಂಥ ಕಾಹಿಲೇಂತ ಹೇಳಲಿ? ಏನೂಂತ ಬರೆಯಲಿ? ನಿನ್ನ ಮದುವೆಗೇಂತ ನಾನು ಇಲ್ಲಿಗೆ ಬಂದಾಗಿನಿಂದಲೂ ಆಕೆ ಸುಖವಾಗಿರಲಿಲ್ಲ. ನಾಲ್ಕೈದು ಸಲ ಕೇಳಿರ್‍ಲಿಲ್ಲವಾ-ಅಮ್ಮ ಯಾಕೆ ಹೀಗಿದಾಳೆ; ಅಂತ? ನೀನು ಹೊರಟುಹೋದ ಮೇಲಂತೂ ಕೇಳಲೇ ಬೇಡ,ಈಗ...." ಅಮ್ಮನನ್ನು ಪೀಡಿಸುತ್ತಿದ್ದ ಜಾಡ್ಯದ ವಿವರ. "ನಿನ್ನ ವಿಷಯಾ ಕೇಳ್ತಾನೇ ಇರ್‍ತಾಳೆ. ಕುರು ಒಮ್ಮೆ ಒಡೆದರೆ ನೋವು ವಾಸಿಯಾಗಬಹುದೂಂತಿದೇನೆ. ಅಪ್ಪನೂ ಹಾಗೇ ಹೇಳ್ತಾನೆ. ದೀಪಾವಳಿಗೆ ನಿಮ್ಮಿಬ್ಬರನ್ನೂ ಕರೆಸಬೇಕೂಂತಿತ್ತು. ಆದರೆ ಅಮ್ಮ ಈಗ ಒತ್ತಾಯಿಸ್ತಾ ಇದಾಳೆ-ಈಗ್ಲೇ ಕರೆಸೀಂತ. ಬರೋಕಾಗುತ್ತಾ? ನಿಮ್ಮವರಿಗೆ ರಜಾ ಸಿಗಬಹುದಾ? ನಿನ್ನನ್ನು ತಂದುಬಿಟ್ಟುಹೋಗಲಿ. ನೀನು ಆಮೇಲೆ ಹೋದ