ಪುಟ:Ekaan'gini.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೨೧ ರಾಯ್ತು. ಬರ್‍ತೀಯಾ? ಬಾ. ಅಮ್ಮ, ಅಪ್ಪ, ಎಲ್ಲರೂ ಹೇಳಿದಾರೆ. ಬಾ." ಕೊನೆಯಲ್ಲಿ ಕೋರಿಕೆ. "ನಿಮ್ಮವರು ಆಫೀಸಿಗೆ ಹೋಗಿರುವಾಗಲೇ ಈ ಕಾಗದ ಮನೆಗೆ ಬರುತ್ತೆ, ಅಲ್ಲವಾ? ದಯವಿಟ್ಟು ಇದನ್ನು ಅವರಿಗೆ ತೋರಿಸ್ಬೇಡ. ನಾದಿನಿಯ ವಿಷಯ ತಿಳಿದು ಅವರಿಗೆ ಬೇಸರವಾದೀತು. ಕಾಗದ ತಲುಪಿದ ಕೂಡಲೆ ಉತ್ತರ ಬರಿ. ಆದಷ್ಟು ಬೇಗನೆ ಬಾ. ಈ ವಾರದ ಕೊನೇಲಂತೂ ಖಂಡಿತವಾಗಿ ಬಂದು ತಲುಪುತ್ತೀ ಅಂತ ನಂಬಿದೇನೆ. ಮರೆತದ್ದು-ಸರಸ್ವತಿ ಚೆನ್ನಾಗಿದ್ದಾಳೆ. ಅನಾಧ ಹುಡುಗಿ. ತಂದೆ ಇಲ್ಲದ ಮಗಳು.

                                                 ಎಂದು, ಪ್ರೀತಿಯ ಅಕ್ಕ,
                                                     ಸುನಂದಾ-"

ಕಾಗದವನ್ನು ಮಡಿಚಿ, ದೀಪವಾರಿಸಿ, ಸುನಂದಾ ನಿದ್ದೆಗೆ ಶರಣು ಹೋದಳು: ಮಾರನೆಯ ದಿನ ಆ ಕಾಗದ ಅಂಚೆ ಸೇರಿತು. ಅದು ಶಿವಮೊಗ್ಗೆಯ ಹಾದಿಯಲ್ಲಿದ್ದಾಗ ಸುನಂದೆಯ ತಾಯಿಯ ಪರಿಸ್ಥಿತಿ ಉಲ್ಪಣಗೊಂಡಿತು. ಕರ್ಣ ಭೇದಕವೂ ಹೃದಯ ಭೇದಕವೂ ಆಯಿತು ಅವರ ರೋದನ. ಅಷ್ಟು ಕಾದಿದ್ದ ಮೇಲೆ ಡಾಕ್ಟರನ್ನು ಕರೆತಂದರು. ಅಂಗಾಂಗಗಳಿಗೆಲ್ಲ ನಂಜು ಹಬ್ಬುತ್ತಿತ್ತೆಂದು ತಿಳಿಯುವುದು ಕಷ್ಟವಾಗಲಿಲ್ಲ. ಸಾಧ್ಯವಿದ್ದ ಚಿಕಿತ್ಸೆಯಲ್ಲಿ ಅವರು ತೊಡಗಿದರು. "ಭಯವೇನಿಲ್ಲ". ಎಂಬುದೇ ಅವರು ನೀಡಿದ ಆಶ್ವಾಸನೆ. ಅಳತೊಡಗಿದ್ದ ತಂದೆಯನ್ನು ಸಮಾಧಾನಪಡಿಸುತ್ತ ಸುನಂದಾ ಆ ರಾತ್ರೆಯನ್ನು ಕಳೆದಳು. ತಾಯಿಯ ಪರಿಸ್ಥಿತಿ ಸುಧಾರಿಸಿದ ಚಿಹ್ನೆ ತೋರಲಿಲ್ಲ. ಬೆಳಗಾದೊಡನೆ ಆಕೆ ಶಿವಮೊಗ್ಗೆಗೆ ಮೈದುನನಿಗೆ ತಂತಿ ಕೊಟ್ಟಳು: "ವಿಜಯಳ ತಾಯಿಗೆ ಸಕತ್ ಕಾಹಿಲೆ ತಕ್ಷಣ ಬನ್ನಿ." ....ಆಫೀಸಿನಲ್ಲಿದ್ದ ವೆಂಕಟರಾಮಯ್ಯ ಆ ತಂತಿ ಬಂದು ಸ್ವಲ್ಪ ಹೊತ್ತಾದೊಡನೆಯೆ ಮನೆಯ ಕಡೆಗೆ ಧಾವಿಸಿದ. ಮನೆಯಲ್ಲಿ ಅದೇ ಆಗ ಕೈ ಸೇರಿದ್ದ ಅಕ್ಕನ ಕಾಗದವನ್ನು ವಿಜಯಾ ಮುಖ ಮುದುಡಿಕೊಂಡು ಓದುತಿದ್ದಳು.