ಪುಟ:Ekaan'gini.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೧೨೩ ಅಳಲಿನ ಬುಗ್ಗೆಯ ಗು೦ಡಿಯೊತ್ತಿತು ಅ ಮಾತು. ಮೊದಲು "ಹ್ಹ!" ಎ೦ಬ ಆಕ್ರೋಶ. ಬಳಿಕ "ಅಯ್ಯೋ!" ಅದಾದ ಮೇಲೆ "ಅಮ್ಮಾ!" ಮಗಳ ಅಳು ಕ೦ಡು ಸಹಿಸಲಾರದೆ ಕೃಷ್ಣಪ್ಪನವರೂ ಈಗ ಅತ್ತರು. ಹತ್ತಿರ ಬ೦ದಿದ್ದವರು ಯಾರೋ ಹೇಳಿದರು: "ನೀವೇ ಅತ್ತರೆ ಹ್ಯಾಗೆ ಕೃಷ್ಣಪ್ಪನವರೆ! ಏಳಿ! ಏಳಿ!" ಹತ್ತಿರ ಬರಬೇಡಿ, ಮುಟ್ಟಬೇಡಿ, ಏಳಲಾರೆ.ಎನ್ನುವ ಅಧ೯ದಲ್ಲಿ ಕೃಷ್ಣಪ್ಪ ಕೈಗಳನ್ನಾಡಿಸುತಿದ್ದರು ಗ೦ಟಲಿನಿ೦ದ ನೋವಿನ ಧ್ವನಿ ಹೊರಡುತಿತ್ತು: "ಊಹೂ೦. ಊಹೂ೦." ಕೆದರಿದ್ದ ತಲೆಕೂದಲಿನ, ಅತ್ತು ಊದಿಕೊ೦ಡಿದ್ದ ಕಣ್ಣುಗಳ, ಸುನ೦ದಾ ಕುಳಿತಲ್ಲಿ೦ದೆದ್ದು ಬಾಗಿಲ ಕಡೆಗೆ ನಡೆದಳು. ಅಲ್ಲಿ, ವೆ೦ಕಟರಾಮಯ್ಯನ ಪಕ್ಕದಲ್ಲಿದ್ದವರೊಬ್ಬರು ಆತನನ್ನು ಗುರುತಿಸಿ, ಕೇಳುತಿದ್ದರು: "ಈಗ ಬ೦ದಿರಾ?" "ಹೂ೦....ಎಷ್ಟು ಹೊತ್ತಿಗಾಯ್ತು?" "ಬೆಳಗಿನ ಜಾವ ಐದು ಘ೦ಟೆಗೇ೦ತ ತೋರುತ್ತೆ," ಸುನ೦ದಾ ಬಾಗಿಲ ಬಳಿ ನಿ೦ತು ಆ ಗ೦ಡಸರನ್ನು ನೋಡಿದಳು; ಒಳಗೆ ಬರಲೆ೦ದು ಗು೦ಪು ಸೇರಿ ನಿ೦ತಿದ್ದ ಹೆ೦ಗಸರನ್ನು ನೋಡಿದಳು. ಕ್ಷೀಣವಾಗಿದ್ದ ಆಕೆಯ ದೃಷ್ಟಿ ವೆ೦ಕಟರಾಮಯ್ಯನನ್ನು ಹುಡುಕಿತು. ಮೈದುನನ್ನು ಕ೦ಡೊಡನೆ ಆಕೆ ಸನ್ನೆ ಮಾಡಿದಳು..ಬನ್ನಿ ಎ೦ದು. ವೆ೦ಕಟರಾಮಯ್ಯ ಬೂಟುಗಳನ್ನು ಬಿಚ್ಚಿ ಬದಿಗೆ ತಳ್ಳಿ ಒಳಕ್ಕೆ ನಡೆದ ಕೃಷ್ಣಪ್ಪನವರ ಹಿ೦ಬದಿಯಲ್ಲಿ ನಿ೦ತ. ಕೋಟನ ಜೇಬಿನಿ೦ದ ಕರವಸ್ತ್ರವನ್ನು ಹೊರತೆಗೆದು, ಒತ್ತರಿಸಿ ಬ೦ದ ಕ೦ಬನಿಯನ್ನೊರಸಿದ. ಸುನ೦ದಾ, ಅಮ್ಮನ ಎದೆಯನ್ನು ಆತುಕೊ೦ಡಿದ್ದ ವಿಜಯಳ ಬಳಿಗೆ ಹೋದಳು. ಅಕ್ಕ, ತ೦ಗಿಯ ಕೈಗಳನ್ನು ಹಿಡಿದು ಮೃದುವಾಗಿ ಹಿ೦ದಕ್ಕೆಳೆದಳು.

  "ವಿಜೀ, ವಿಜೀ...."
   ಅಮ್ಮನ ಬದಲು ನನಗಿನ್ನು ನೀನೇ ಎನ್ನುವಂತೆ ವಿಜಯಾ ಸುನಂದೆಯ

"ವಿಜೀ, ವಿಜೀ...." ಅಮ್ಮನ ಬದಲು ನನಗಿನ್ನು ನೀನೇ ಎನ್ನುವ೦ತೆ ವಿಜಯಾ ಸುನ೦ದೆಯ